ಗದಗ : ಉತ್ತರ ಕರ್ನಾಟಕ ಕಲಾವಿದರ ಮತ್ತು ಕಲಾ ಪೋಷಕರ ಸಂಘಟನೆಯಾದ ಕಲಾ ವಿಕಾಸ ಪರಿಷತ್ (ರಿ), ಗದಗ ಇವರ 24ನೆಯ ವಾರ್ಷಿಕೋತ್ಸವ, ಕರ್ನಾಟಕ ನಾಮಕರಣ ಸುವರ್ಣ ಮಹೋತ್ಸವ ಸಮಾರಂಭವನ್ನು ಜನವರಿ ತಿಂಗಳ ಎರಡನೇ ವಾರ ಧಾರವಾಡದಲ್ಲಿ ಹಮ್ಮಿಕೊಂಡಿದೆ.
ಈ ಸಮಾರಂಭದಲ್ಲಿ ಸಂಗೀತ, ನೃತ್ಯ ಕಲಾವಿದರಿಗೆ ಸೇರಿ 24 ಮತ್ತು ಕಲಾಪೋಷಕ, ಕಲಾಪೋಷಕ ಸಂಸ್ಥೆಗಳಿಗೆ ಸೇರಿ 26 ರಾಜ್ಯ ಪ್ರಶಸ್ತಿ ನೀಡಲಾಗುತ್ತಿದೆ. ಆಸಕ್ತ ಸಂಗೀತ ನೃತ್ಯ ಕಲಾವಿದರು, ಕಲಾ ತಂಡಗಳು, ಕಲಾ ಪೋಷಕರು ಮತ್ತು ಕಲಾ ಪೋಷಕ ಸಂಸ್ಥೆಯ ಮುಖ್ಯಸ್ಥರು ಅರ್ಜಿ ಸಲ್ಲಿಸಬಹುದಾಗಿದೆ.
ಕಲಾವಿದರು ಹಾಗೂ ಕಲಾ ತಂಡಗಳು ಕಲಾ ಪ್ರದರ್ಶನದ ವಿಡಿಯೋ ಕ್ಲಿಪ್ ಸಹಿತ ಸವಿವರದೊಂದಿಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಕಲಾ ಪೋಷಕರು ಮತ್ತು ಕಲಾ ಪೋಷಕ ಸಂಸ್ಥೆಗಳು, ಕಲಾ ಪೋಷಿಸಿಕೊಂಡು ಬಂದ ವಿವರ ನೀಡಬೇಕು. ಈ ಸಮಾರಂಭದ ಉತ್ತಮ ತಂಡಗಳಿಗೆ ಗೌರವ ಸಂಭಾವನೆ ನೀಡಿ ಗದುಗಿನ ಇನ್ನೊಂದು ಕಾರ್ಯಕ್ರಮಕ್ಕೆ ಆಹ್ವಾನಿಸಿ ವೇದಿಕೆ ನೀಡಲಾಗುವುದು. ಹೆಸರು ನೋಂದಾಯಿಸಿಕೊಳ್ಳಲು ದಿನಾಂಕ 28 ಡಿಸೆಂಬರ್ 2024 ಕೊನೆಯ ದಿನವಾಗಿರುತ್ತದೆ. ಖಚಿತ ದಿನಾಂಕ ಮತ್ತು ಸಭಾ ಭವನದ ವಿವರ ನಂತರ ತಿಳಿಸಲಾಗುವುದು. ತಮ್ಮ ಹೆಸರು ಮತ್ತು ವಿವರವನ್ನು 9108740044 ಸಂಖ್ಯೆಗೆ ಮೆಸೇಜ್ ಮೂಲಕ ಕಳುಹಿಸಿಕೊಡಬಹುದು. ಕರೆಗಳು ಸ್ವೀಕರಿಸುವುದಿಲ್ಲ ಎಂದು ಸಮಾರಂಭದ ಸಂಚಾಲಕರಾದ ಡಾ. ಸುಮಾ ಹಡಪದ ಬೆಳ್ಳಿಟ್ಟಿ ಧಾರವಾಡ ತಿಳಿಸಿದ್ದಾರೆ.