ಉಡುಪಿ : ರಾಜ್ಯದ ಹೆಸರಾಂತ ಹವ್ಯಾಸಿ ನಾಟಕ ಸಂಸ್ಥೆಯಾದ ‘ರಂಗಭೂಮಿ (ರಿ.) ಉಡುಪಿ’ ಇದರ 60ರ ಸಂಭ್ರಮದಲ್ಲಿ ದಿ. ಡಾ. ಟಿ.ಎಂ.ಎ. ಪೈ, ದಿ. ಎಸ್.ಎಲ್. ನಾರಾಯಣ ಭಟ್ ಮತ್ತು ದಿ. ಮಲ್ಪೆ ಮಧ್ವರಾಜ್ ಸ್ಮಾರಕ 45ನೆಯ ‘ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ’ಯು ದಿನಾಂಕ 04 ಡಿಸೆಂಬರ್ 2024ರಿಂದ 15 ಡಿಸೆಂಬರ್ 2024ರವರೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಿತು.
ಪ್ರಥಮ ಬಹುಮಾನವು ರಂಗರಥ ಟ್ರಸ್ಟ್ (ರಿ.) ಬೆಂಗಳೂರು ತಂಡದ ‘ಧರ್ಮನಟಿ’ ನಾಟಕಕ್ಕೆ ಲಭಿಸಿದೆ. ಈ ತಂಡವು ಪಿ.ವಿ.ಎಸ್. ಬೀಡೀಸ್ ಪ್ರಾಯೋಜಿತ ದಿ. ಪುತ್ತು ವೈಕುಂಠ ಶೇಟ್ ಸ್ಮಾರಕ ಪ್ರಥಮ ನಗದು ಬಹುಮಾನ ರೂ.35,000/- ಮತ್ತು ಸ್ಮರಣಿಕೆ ಹಾಗೂ ಡಾ. ಟಿ.ಎಮ್.ಎ. ಪೈ ಸ್ಮಾರಕ ಪರ್ಯಾಯ ಫಲಕ ಹಾಗೂ ದಿ. ಎಸ್.ಎಲ್. ನಾರಾಯಣ ಭಟ್ ಸ್ಮಾರಕ ಸ್ಮರಣಿಕೆಯನ್ನು ತನ್ನದಾಗಿಸಿಕೊಂಡಿದೆ.
ದ್ವಿತೀಯ ಬಹುಮಾನವಾದ ದಿ. ಮಲ್ಪೆ ಮಧ್ವರಾಜ್ ಸ್ಮಾರಕ ಪ್ರಮೋದ್ ಮಧ್ಯರಾಜ್ ರವರ ಕೊಡುಗೆಯಾದ ರೂ.25,000/- ನಗದು ಬಹುಮಾನ ಹಾಗೂ ಡಾ. ಆರ್.ಪಿ. ಕೊಪ್ಪೀಕರ್ ಸ್ಮಾರಕ ಪರ್ಯಾಯ ಫಲಕ ಮತ್ತು ಯು.ಪಿ. ಶೆಣೈ ಸ್ಮಾರಕ ಸ್ಮರಣಿಕೆಯು ಬೆಂಗಳೂರಿನ ‘ನಮ್ದೆ ನಟನೆ’ ತಂಡದ ‘ನಾಯಿ ಕಳೆದಿದೆ’ ನಾಟಕಕ್ಕೆ ಲಭಿಸಿದೆ.
ಭೂಮಿಕಾ (ರಿ.) ಹಾರಾಡಿ, ಬ್ರಹ್ಮಾವರ, ಉಡುಪಿ ತಂಡದ ‘ಬರ್ಬರೀಕ’ ನಾಟಕವು ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದು, ದಿ. ಪಿ. ವಾಸುದೇವ ರಾವ್ ಅವರ ಸ್ಮರಣಾರ್ಥ ಶ್ರೀಮತಿ ಸೀತಾ ವಾಸುದೇವ ರಾವ್ ಅವರ ಕೊಡುಗೆಯಾದ ನಗದು ಬಹುಮಾನವಾದ ರೂ.15,000/- ಮತ್ತು ಸಖೂಬಾಯಿ ಶ್ರೀಧರ ನಾಯಕ್ ಕೊಕ್ಕರ್ಣೆ ಸ್ಮಾರಕ ಸ್ಮರಣಿಕೆಗೆ ಪಾತ್ರವಾಗಿದೆ.
ಇತರ ಬಹುಮಾನಗಳ ವಿವರ:
ಶ್ರೇಷ್ಠ ನಿರ್ದೇಶನ :
ಪ್ರಥಮ : ರಂಗ ನಿರ್ದೇಶಕ ದಿ. ಕುತ್ಪಾಡಿ ವೆಂಕಟಾಚಲ ಭಟ್ ಸ್ಮಾರಕ ರೂ.5,000/- ನಗದು ಮತ್ತು ದಿ. ಜಿ.ಕೆ. ಐತಾಳ್ ಸ್ಮಾರಕ ನಗದು ರೂ.5,000 ಸೇರಿದಂತೆ ಒಟ್ಟು ರೂ.10,000/- ನಗದು ಹಾಗೂ ಡಾ. ಟಿ.ಎಂ.ಎ. ಪೈ.ಸ್ಮಾರಕ ಪರ್ಯಾಯ ಫಲಕ ಮತ್ತು ಮಲ್ಪೆ ಮಧ್ವರಾಜ್ ಸ್ಮಾರಕ ಸ್ಮರಣಿಕೆ – ನಿರ್ದೇಶಕರು : ಅಸೀಫ್ ಕ್ಷತ್ರಿಯ ಮತ್ತು ಶ್ವೇತಾ ಶ್ರೀನಿವಾಸ್ – ನಾಟಕ : ‘ಧರ್ಮನಟಿ’ / ತಂಡ: ರಂಗರಥ (ರಿ.) ಬೆಂಗಳೂರು.
ದ್ವಿತೀಯ: ದಿ. ಕುತ್ಪಾಡಿ ವೆಂಕಟಾಚಲ ಭಟ್ ಸ್ಮಾರಕ ನಗದು ಬಹುಮಾನ ರೂ.3,000 ಮತ್ತು ದಿ. ಜಿ.ಕೆ. ಐತಾಳ್ ಸ್ಮಾರಕ ನಗದು ರೂ. 3,000/- ಸೇರಿದಂತೆ ಒಟ್ಟು ರೂ.6,000 ನಗದು ಹಾಗೂ ದಿ. ವಿ. ಪ್ರಭಾಕರ ಹೆಗ್ಡೆ ಸ್ಮಾರಕ ಸ್ಮರಣಿಕೆ – ನಿರ್ದೇಶಕ : ರಾಜೇಂದ್ರ ಕಾರಂತ – ನಾಟಕ : ‘ನಾಯಿ ಕಳೆದಿದೆ’ / ತಂಡ ನಮ್ದೆ ನಟನೆ, ಬೆಂಗಳೂರು.
ತೃತೀಯ: ದಿ. ಕುತ್ಪಾಡಿ ವೆಂಕಟಾಚಲ ಭಟ್ ಸ್ಮಾರಕ ನಗದು ಬಹುಮಾನ ರೂ.2,000/- ಮತ್ತು ದಿ. ಜಿ.ಕೆ. ಐತಾಳ್ ಸ್ಮಾರಕ ನಗದು ರೂ.2,000/- ಸೇರಿದಂತೆ ಒಟ್ಟು ರೂ.4,000/- ನಗದು ಮತ್ತು ಡಾ. ಬಿ.ಬಿ. ಶೆಟ್ಟಿ ಸ್ಮಾರಕ ಸ್ಮರಣಿಕೆ ಇಬ್ಬರಿಗೆ ಲಭಿಸಿದೆ. ನಿರ್ದೇಶಕ: ಬಿ.ಎಸ್. ರಾಮ್ ಶೆಟ್ಟಿ – ನಾಟಕ : ‘ಬರ್ಬರೀಕ’ / ತಂಡ : ಭೂಮಿಕಾ (ರಿ.) ಹಾರಾಡಿ ಮತ್ತು ಪುನೀತ್ ಎ.ಎಸ್. – ನಾಟಕ ‘ಅಶ್ವ ಪರ್ವ’ / ತಂಡ ನೆನವು ಕಲ್ಚರಲ್ & ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು.
ಶ್ರೇಷ್ಠ ನಟ :
ಪ್ರಥಮ : ದಿ. ಪಾಡಿಗಾರು ಶೀನ ಶೆಟ್ಟಿ ಸ್ಮರಣಾರ್ಥ ನಗದು ಬಹುಮಾನ ರೂ.3,000/- ಮತ್ತು ಅಂಬಲಪಾಡಿ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಪ್ರಾಯೋಜಿತ ಸ್ಮರಣಿಕೆ – ನಮ್ದೆ ನಟನೆ, ಬೆಂಗಳೂರು ತಂಡದ ‘ನಾಯಿ ಕಳೆದಿದೆ’ ನಾಟಕದ ಸದಾಶಿವ ರಾಯರು ಪಾತ್ರಧಾರಿ ರಾಜೇಂದ್ರ ಕಾರಂತ.
ದ್ವಿತೀಯ : ದಿ. ಪಾಡಿಗಾರು ಶೀನ ಶೆಟ್ಟಿ ಸ್ಮರಣಾರ್ಥ ನಗದು ಬಹುಮಾನ ರೂ.2,000/- ಮತ್ತು ಅಂಬಲಪಾಡಿ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಪ್ರಾಯೋಜಿತ ಸ್ಮರಣಿಕೆ – ಯುವಶ್ರೀ ಬೆಂಗಳೂರು ತಂಡದ ‘ಒಂದು ವಿಲಯ ಕಥೆ’ ನಾಟಕದ ಶಿವಾನಂದ ಪಾತ್ರಧಾರಿ ಸಿದ್ಧಾರ್ಥ ಭಟ್.
ತೃತೀಯ : ದಿ. ಪಾಡಿಗಾರು ಶೀನ ಶೆಟ್ಟಿ ಸ್ಮರಣಾರ್ಥ ನಗದು ಬಹುಮಾನ ರೂ.1,000/- ಮತ್ತು ರೋಟರಿ ಕ್ಲಬ್ ಉಡುಪಿ – ಮಣಿಪಾಲ ಪಾಯೋಜಿತ ಸ್ಮರಣಿಕೆ – ರಂಗರಥ ಟ್ರಸ್ಟ್ (ರಿ.) ಬೆಂಗಳೂರು ತಂಡದ ‘ಧರ್ಮನಟಿ’ ನಾಟಕದ ಒಕ್ಕಾಕ ಪಾತ್ರಧಾರಿ ಅನುಷ್ ಕೃಷ್ಣ.
ಶ್ರೇಷ್ಠ ನಟಿ :
ಪ್ರಥಮ : ರಂಗನಟಿ ಡಾ. ಮಾಧವಿ ಎಸ್. ಭಂಡಾರಿ ಪ್ರಾಯೋಜಿತ ನಗದು ಬಹುಮಾನ ರೂ.3,000/- ಮತ್ತು ದಿ. ಶ್ರೀನಿವಾಸ ಎಸ್. ಶೆಟ್ಟಿಗಾರ್ ಸ್ಮಾರಕ ಸ್ಮರಣಿಕೆ : ರಂಗರಥ ಟ್ರಸ್ಟ್ (ರಿ.) ಬೆಂಗಳೂರು ತಂಡದ ‘ಧರ್ಮನಟಿ’ ನಾಟಕದ ಶೀಲಾವತಿ ಪಾತ್ರಧಾರಿಣಿ ಶ್ವೇತಾ ಶ್ರೀನಿವಾಸ್.
ದ್ವಿತೀಯ : ರಂಗನಟಿ ಡಾ. ಮಾಧವಿ ಎಸ್. ಭಂಡಾರಿ ಪ್ರಾಯೋಜಿತ ನಗದು ಬಹುಮಾನ ರೂ.2,000/- ಮತ್ತು ದಿ. ಶ್ರೀನಿವಾಸ ಎಸ್. ಶೆಟ್ಟಿಗಾರ್ ಸ್ಮಾರಕ ಸ್ಮರಣಿಕೆ : ನಮ್ದೆ ನಟನೆ ಬೆಂಗಳೂರು ತಂಡದ ‘ನಾಯಿ ಕಳೆದಿದೆ’ ನಾಟಕದ ವಿಶಾಲಾಕ್ಷಿ ಪಾತ್ರಧಾರಿಣಿ ರಾಜೇಶ್ವರಿ.
ತೃತೀಯ : ಅಭಿನೇತ್ರಿ ಶ್ರೀಮತಿ ವಿನಯಾ ಪ್ರಸಾದ್ ಪ್ರಾಯೋಜಿತ ನಗದು ಬಹುಮಾನ ರೂ.1,000/- ಮತ್ತು ದಿ. ಯು. ದುಗ್ಗಪ್ಪ ಸ್ಮಾರಕ ಸ್ಮರಣಿಕೆ : ರಂಗರಥ ಟ್ರಸ್ಟ್ (ರಿ) ಬೆಂಗಳೂರು ತಂಡದ ‘ಧರ್ಮನಟಿ’ ನಾಟಕದ ಮಹತ್ತರಿಕಾ ಪಾತ್ರಧಾರಿಣಿ ಶ್ರೀಯಾ ಅಗಮ್ಮ.
ಶ್ರೇಷ್ಠ ಸಂಗೀತ :
ಪ್ರಥಮ : ರಂಗನಟಿ ಎನ್. ರಾಜಗೋಪಾಲ ಬಲ್ಲಾಳ್ ಪ್ರಾಯೋಜಿತ ನಗದು ಬಹುಮಾನ ರೂ.3,000/- ಮತ್ತು ದಿ. ಉಡುಪಿ ದಾಸ ಭಟ್ ಸ್ಮಾರಕ ಸ್ಮರಣಿಕ : ರಂಗರಥ ಟ್ರಸ್ಟ್ (ರಿ.) ಬೆಂಗಳೂರು ತಂಡದ ‘ಧರ್ಮನಟಿ’ ನಾಟಕದ ಸಂಗೀತ ನಿರ್ದೇಶಕ ಭಿನ್ನಷಡ್.
ದ್ವಿತೀಯ : ರಂಗನಟ ಎನ್. ರಾಜಗೋಪಾಲ ಬಲ್ಲಾಳ್ ಪ್ರಾಯೋಜಿತ ನಗದು ಬಹುಮಾನ ರೂ.2,000/- ಮತ್ತು ದಿ. ಉಡುಪಿ ದಾಸ ಭಟ್ ಸ್ಮಾರಕ ಸ್ಮರಣಿಕೆ : ನೆನವು ಕಲ್ಮರಲ್ & ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ತಂಡದ ‘ಅಶ್ವ ಪರ್ವ’ ನಾಟಕದ ಸಂಗೀತ ನಿರ್ದೇಶಕರಾದ ಹರಿಪ್ರಸಾದ್ ಮತ್ತು ಅಶೋಕ್ ತಂತ್ರಿ ಮತ್ತು ನಮ್ದೆ ನಟನೆ ಬೆಂಗಳೂರು ತಂಡದ ‘ನಾಯಿ ಕಳೆದಿದೆ’ ನಾಟಕದ ಸಂಗೀತ ನಿರ್ದೇಶಕ ಪ್ರಣವ ಕಾರಂತ.
ತೃತೀಯ : ರಂಗನಟ ಎನ್. ರಾಜಗೋಪಾಲ ಬಲ್ಲಾಳ್ ಪ್ರಾಯೋಜಿತ ನಗದು ಬಹುಮಾನ ರೂ.1,000/- ಮತ್ತು ಹೊಟೇಲ್ ಡಯನಾ ಪ್ರಾಯೋಜಿತ ಸ್ಮರಣಿಕೆ : ಭೂಮಿಕಾ (ರಿ.) ಹಾರಾಡಿ ತಂಡದ ‘ಬರ್ಬರೀಕ’ ನಾಟಕದ ಸಂಗೀತ ನಿರ್ದೇಶಕ ದಿವಾಕರ ಕಟೀಲ್.
ಶ್ರೇಷ್ಠ ರಂಗಸಜ್ಜಿಕೆ ಮತ್ತು ರಂಗಪರಿಕರ :
ಪ್ರಥಮ: ದಿ. ರವೀಂದ್ರ ಬಿ. ಕೋಟ್ಯಾನ್ ಸ್ಮರಣಾರ್ಥ ನಗದು ಬಹುಮಾನ ರೂ.3,000/- ಮತ್ತು ಡಾ. ಟಿ.ಎಂ.ಎ. ಪೈ ಪ್ರತಿಷ್ಠಾನ ಪ್ರಯೋಜಿತ ಸ್ಮರಣಿಕೆ : ಭೂಮಿಕಾ (ರಿ) ಹಾರಾಡಿ ತಂಡದ ‘ಬರ್ಬರೀಕ’.
ದ್ವಿತೀಯ: ದಿ. ರವೀಂದ್ರ ಬಿ.ಕೋಟ್ಯಾನ್ ಸ್ಮರಣಾರ್ಥ ನಗದು ಬಹುಮಾನ ರೂ.2,000/- ಮತ್ತು ದಿ. ನಂದಕುಮಾರ್ ಎಂ.ಸ್ಮಾರಕ ಸ್ಮರಣಿಕ : ರಂಗರಥ ಟ್ರಸ್ಟ್ (ರಿ) ಬೆಂಗಳೂರು ತಂಡದ ‘ಧರ್ಮನಟಿ’.
ತೃತೀಯ : ದಿ. ರವೀಂದ್ರ ಬಿ. ಕೋಟ್ಯಾನ್ ಸ್ಮರಣಾರ್ಥ ನಗದು ಬಹುಮಾನ ರೂ.1,000/- ಮತ್ತು ದಿ. ಯು. ದುಗ್ಗಪ್ಪ ಸ್ಮಾರಕ ಸ್ಮರಣಿಕೆ : ನೆನಪು ಕಲ್ಚರಲ್ & ಎಜ್ಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ತಂಡದ ‘ಅಶ್ವ ಪರ್ವ’.
ಶ್ರೇಷ್ಠ ಪ್ರಸಾಧನ :
ಪ್ರಥಮ : ದಿ. ಉಷಾ ಶಾಂತಾರಾಮ್, ದಿ. ಎಸ್.ಎಲ್. ನಾರಾಯಣ ಭಟ್ ಮತ್ತು ದಿ. ಟಿ. ಉಪೇಂದ್ರ ಪೈ ಸ್ಮಾರಕ ನಗದು ಬಹುಮಾನ ರೂ.3,000/- ಮತ್ತು ಡಾ. ಟಿ.ಎಂ.ಎ. ಪೈ ಪ್ರತಿಷ್ಠಾನ ಪ್ರಯೋಜಿತ ಸ್ಮರಣಿಕ ರಂಗರಥ ಟ್ರಸ್ಟ್ (ರಿ.) ಬೆಂಗಳೂರು ತಂಡದ ‘ಧರ್ಮನಟಿ’.
ದ್ವಿತೀಯ : ರಂಗನಟ ದಿ. ಯು.ಎಂ.ಅಸ್ಲಾಂ ಸ್ಮರಣಾರ್ಥ ನಗದು ಬಹುಮಾನ ರೂ.2,000/- ಮತ್ತು ದಿ. ವಿ. ಪ್ರಭಾಕರ ಹೆಗ್ಡೆ ಸ್ಮಾರಕ ಸ್ಮರಣಿಕೆ : ಭೂಮಿಕಾ (ರಿ) ಹಾರಾಡಿ ತಂಡದ ‘ಬರ್ಬರೀಕ’.
ತೃತೀಯ ದಿ. ಸದಾನಂದ ಸುವರ್ಣ, ಮುಂಬಾಯಿ ಸ್ಮರಣಾರ್ಥ ನಗದು ಬಹುಮಾನ ರೂ.1,000/- ಮತ್ತು ದಿ. ಯು. ಉಪೇಂದ್ರ ಸ್ಮಾರಕ ಸ್ಮರಣಿಕೆ : ನೆನಪು ಕಲ್ಚರಲ್ & ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ತಂಡದ ‘ಅಶ್ವ ಪರ್ವ’.
ಶ್ರೇಷ್ಠ ರಂಗ ಬೆಳಕು :
ಪ್ರಥಮ : ಶ್ರೀಮತಿ ಬೀಬಿ ಜಾನ್ ಖಲಂದರ್ ಸಾಬ್, ಅರಸೀಕೆರೆ ಸ್ಮಾರಕ ನಗದು ಬಹುಮಾನ ರೂ.3,000/- ಮತ್ತು ಅಂಬಲಪಾಡಿ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಪ್ರಾಯೋಜಿತ ಸ್ಮರಣಿಕೆ : ಯುವಶ್ರೀ ಬೆಂಗಳೂರು ತಂಡದ ‘ಒಂದು ವಿಲಯ ಕಥೆ’.
ದ್ವಿತೀಯ : ಶ್ರೀಮತಿ ಬೀಬಿ ಜಾನ್ ಖಲಂದರ್ ಸಾಬ್, ಅರಸೀಕೆರೆ ಸ್ಮಾರಕ ನಗದು ಬಹುಮಾನ ರೂ.2,000/- ಮತ್ತು ಡಾ. ಬಿ.ಬಿ. ಶೆಟ್ಟಿ ಸ್ಮಾರಕ ಸ್ಮರಣಿಕೆ : ರಂಗರಥ ಟ್ರಸ್ಟ್ (ರಿ) ಬೆಂಗಳೂರು ತಂಡದ ‘ಧರ್ಮನಟಿ’.
ತೃತೀಯ : ಶ್ರೀಮತಿ ಬೀಬಿ ಜಾನ್ ಖಲಂದರ್ ಸಾಬ್, ಅರಸೀಕೆರೆ ಸ್ಮಾರಕ ನಗದು ಬಹುಮಾನ ರೂ.1,000/- ಮತ್ತು ದಿ. ಬೋಜ ಕರ್ಕೇರ ಸ್ಮಾರಕ ಸ್ಮರಣಿಕೆ : ನೆನವು ಕಲ್ಚರಲ್ & ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ತಂಡದ ‘ಅಶ್ವ ಪರ್ವ’.
ಶ್ರೇಷ್ಠ ಹಾಸ್ಯ ನಟನೆ : ಶ್ರೀ ಮಂಡ್ಯ ರಮೇಶ್ ಪ್ರಾಯೋಜಿತ ನಗದು ಬಹುಮಾನ ರೂ.2,000/- ಮತ್ತು ದಿ. ನಂದಕುಮಾರ್ ಎಂ. ಸ್ಮಾರಕ ಸ್ಮರಣಿಕೆ : ನಮ್ದೆ ನಟನೆ ಬೆಂಗಳೂರು ತಂಡದ ‘ನಾಯಿ ಕಳೆದಿದೆ’ ನಾಟಕದ ಮುನಿವೆಂಕಟಮ್ಮ ಪಾತ್ರಧಾರಿಣಿ ಡಾ. ಮಮತಾ ರಾವ್.
ಶ್ರೇಷ್ಠ ಬಾಲ ನಟನೆ : ದಿ. ಮಂಜುಳಾ ಸತ್ಯನಾರಾಯಣ ಹೆಗ್ಡೆ ಸ್ಮಾರಕ ಅವರ ಮಗ ಶ್ರೀಪಾದ ಹೆಗ್ಡೆಯವರ ಕೊಡುಗೆ ರೂ.1,000/- ಮತ್ತು ದಿ. ಮೇಟಿ ಮುದಿಯಪ್ಪ ಸ್ಮಾರಕ ಸ್ಮರಣಿಕೆ : ಅಭಿನಯ ಶಿವಮೊಗ್ಗ ತಂಡದ ‘ಪೀಠಾರೋಹಣ’ ನಾಟಕದ ಶೇಷಪ್ಪ ಪಾತ್ರಧಾರಿ ಸಂಪ್ರೀತ್ ವಿ. ಭಾರದ್ವಾಜ್.
ಮೆಚ್ಚುಗೆ ಬಹುಮಾನಗಳು : ದಿ. ವಿ. ಪ್ರಭಾಕರ ಹೆಗ್ಡೆ ಮತ್ತು ದಿ. ಯು. ಉಪೇಂದ್ರ ಸ್ಮಾರಕ ಸ್ಮರಣಿಕೆ
ಅಭಿನಯ ಶಿವಮೊಗ್ಗ ತಂಡದ ‘ಪೀಠಾರೋಹಣ’ ನಾಟಕದ ಗುರುಗಳು ಪಾತ್ರಧಾರಿ ಡಾ. ಎಚ್.ಎಸ್. ನಾಗಭೂಷಣ.
ನಮ್ದೆ ನಟನೆ ಬೆಂಗಳೂರು ತಂಡದ ‘ನಾಯಿ ಕಳೆದಿದೆ’ ನಾಟಕದ ಅಶೋಕ ಪಾತ್ರಧಾರಿ ಸತೀಶ ಐತಾಳ್.
ನಮ್ದೆ ನಟನೆ ಬೆಂಗಳೂರು ತಂಡದ ‘ನಾಯಿ ಕಳೆದಿದೆ’ ನಾಟಕದ ಮಾಧವ ರಾವ್ ಪಾತ್ರಧಾರಿ ಡಿ.ಎಸ್. ಶ್ರೀನಾಥ.
ನೆನಪು ಕಲ್ಚರಲ್ & ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ತಂಡದ ‘ಅಶ್ವ ಪರ್ವ’ ನಾಟಕದ ಅಶ್ವತ್ಥಾಮ ಪಾತ್ರಧಾರಿ ಧನುಷ್ ಬಿ.ಎಸ್.
ರಂಗರಥ ಟ್ರಸ್ಟ್ (ರಿ.) ಬೆಂಗಳೂರು ತಂಡದ ‘ಧರ್ಮನಟಿ’ ನಾಟಕದ ಪ್ರತೋಷ ಪಾತ್ರಧಾರಿ ಸಚಿನ್ ಪವಾರ್ ಜಿ.ಕೆ.
ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಪಿ.ವಿ.ಎಸ್. ಗ್ರೂಪ್ ಮಂಗಳೂರು, ಡಾ. ಟಿ.ಎಂ.ಎ. ಪೈ ಫೌಂಡೇಶನ್ ಮಣಿಪಾಲ, ಎಂ.ಜಿ.ಎಂ. ಕಾಲೇಜು ಉಡುಪಿ ಹಾಗೂ ಹಲವಾರು ಸಂಸ್ಥೆಗಳ ಕಲಾ ಪೋಷಕರ ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ ದಿನಾಂಕ 04 ಡಿಸೆಂಬರ್ 2024ರಿಂದ 15 ಡಿಸೆಂಬರ್ 2024ರವರೆಗೆ 12 ದಿನಗಳ ಕಾಲ 45ನೇ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯು ನಡೆಯಿತು. ಈ ಬಾರಿಯ ಸ್ಪರ್ಧೆಯ ತೀರ್ಪುಗಾರರಾಗಿ ಪುರುಷೋತ್ತಮ ತಳವಾಟ್, ಕೃಷ್ಣಕುಮಾರ್ ನಾರ್ಣಕಜೆ, ಪ್ರಭಾಕರ್ ಜಿ.ಪಿ. ಸುಧಾ ಮಣೂರು, ಕೆ. ಲಕ್ಷ್ಮೀನಾರಾಯಣ ಭಟ್ ಸಹಕರಿಸಿದ್ದರು.
45ನೆಯ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವು ದಿನಾಂಕ 01 ಫೆಬ್ರವರಿ 2025ರಂದು ಉಡುಪಿ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ. ಅಂದು ಪ್ರಥಮ ಪ್ರಶಸ್ತಿ ಪುರಸ್ಕೃತ ರಂಗರಥ ಟ್ರಸ್ಟ್ (ರಿ) ಬೆಂಗಳೂರು ತಂಡದ ‘ಧರ್ಮನಟಿ’ ನಾಟಕದ ಮರು ಪ್ರದರ್ಶನವಿರುವುದು. ದಿನಾಂಕ 02 ಫೆಬ್ರವರಿ 2025ರಂದು ‘ರಂಗಭೂಮಿ ಪ್ರಶಸ್ತಿ ಪ್ರದಾನ ಸಮಾರಂಭ’ವು ನಡೆಯಲಿದೆ ಎಂದು ಉಡುಪಿಯ ರಂಗಭೂಮಿಯು ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಪ್ರದೀಪ್‌ಚಂದ್ರ ಕುತ್ಪಾಡಿ 9448952847.