ಬಾರ್ಕೂರು : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಹಾಗೂ ಎಂ. ಜಿ. ಎಂ ಕಾಲೇಜು, ಉಡುಪಿ ಇವರ ಆಶ್ರಯದಲ್ಲಿ ದಿವಂಗತ ಸುಬ್ರಾಯ ಶಾಸ್ತ್ರಿಗಳ ತಾಯಿ ತಂದೆಯರ ಸ್ಮರಣಾರ್ಥವಾಗಿ ಆಯೋಜಿಸಲಾದ ಬಾರ್ಕೂರು ಮೂಡುಕೇರಿ ಗಂಗಮ್ಮ ರಾಮಚಂದ್ರ ಶಾಸ್ತ್ರಿ ಸ್ಮರಣಾರ್ಥ ಚಿತ್ರಕಲಾ ಸ್ಪರ್ಧೆಯು ದಿನಾಂಕ 14 ಡಿಸೆಂಬರ್ 2024ರ ಶನಿವಾರದಂದು ನಡೆಯಿತು.
ಸ್ಪರ್ಧೆಯಲ್ಲಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ, ಪ. ಪೂ., ಪದವಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಶ್ರೀಮತಿ ಪುಷ್ಪಾಂಜಲಿ ಮಂಗಳೂರು, ಚಿತ್ರಕಲಾ ಶಿಕ್ಷಕ ಶ್ರೀ ರಮೇಶ್ ಅಂಬಾಡಿ, ಡಾ. ಜನಾರ್ದನ ಹಾವಂಜೆ ತೀರ್ಪುಗಾರರಾಗಿದ್ದರು. ಎಂ. ಜಿ. ಎಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀ ನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಡಾ. ಜನಾರ್ದನ ಹಾವಂಜೆ ಕಾರ್ಯಕ್ರಮ ಸಂಘಟಕರಾಗಿ ಸ್ಪರ್ಧೆಯನ್ನು ಆಯೋಜಿಸುವಲ್ಲಿ ಸಹಕರಿಸಿದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಆರ್. ಆರ್. ಸಿ. ಇದರ ಸಹ ಸಂಶೋಧಕ ಡಾ. ಅರುಣ್ ಕುಮಾರ್ ಎಸ್. ಆರ್. ಕಾರ್ಯಕ್ರಮ ನಿರ್ವಹಿಸಿದರು. ಆರ್. ಜಿ. ಪೈ ಹಾಗೂ ಆರ್. ಆರ್. ಸಿ ಇದರ ಸಿಬ್ಬಂದಿಗಳು ಕಾರ್ಯಕ್ರಮ ಆಯೋಜಿಸಿದ್ದರು.
ವಿಜೇತರ ವಿವರ:
ಪೂರ್ವ ಪ್ರಾಥಮಿಕ ವಿಭಾಗ 1 ರಿಂದ 4ನೇ ತರಗತಿ ವಿಷಯ : ಐಚ್ಛಿಕ
ತೇಜಸ್ವಿ ಯು. ರಾವ್, 4ನೇ ತರಗತಿ,ಮುಕುಂದಕೃಪಾ ಆಂಗ್ಲಮಾಧ್ಯಮ ಶಾಲೆ, ಉಡುಪಿ- ಪ್ರಥಮ
ಆರ್ಯ ಪೈ, 3ನೇ ತರಗತಿ, ಪೋದಾರ್ ಇಂಟರ್ ನ್ಯಾಶನಲ್ ಸ್ಕೂಲ್, ಉಡುಪಿ- ದ್ವಿತೀಯ
ದೇಷ್ಣ ಕುಲಾಲ್, 3ನೇ ತರಗತಿ, ಎಸ್. ಆರ್. ಪಬ್ಲಿಕ್ ಸ್ಕೂಲ್, ಹೆಬ್ರಿ,- ತೃತೀಯ
ಪ್ರವಿತ್ ವಿ., 4ನೇ ತರಗತಿ, ಅಮೃತ ಭಾರತಿ ವಿದ್ಯಾ ಕೇಂದ್ರ, ಹೆಬ್ರಿ -ಸಮಾಧಾನಕರ
ಪ್ರಾಥಮಿಕ ವಿಭಾಗ – 5 ರಿಂದ 7ನೇ ತರಗತಿ ವಿಷಯ : ಐಚ್ಛಿಕ
ನಿಹಾರ್ ಜೆ. ಎಸ್., 5ನೇ ತರಗತಿ, ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್, ಬ್ರಹ್ಮಾವರ – ಪ್ರಥಮ
ನಿಧೀಶ್ ಜೆ. ನಾಯ್ಕ್, 5ನೇ ತರಗತಿ, ಜಿ. ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್, ಬ್ರಹ್ಮಾವರ – ದ್ವಿತೀಯ
ಪ್ರಿಯದರ್ಶಿನಿ ಎಸ್. ಡಿ., 5ನೇ ತರಗತಿ, ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ- ತೃತೀಯ
ಸುಗೋಶ್ ಎಸ್. ಸಾಲ್ಯಾನ್, 5ನೇ ತರಗತಿ, ಜಿ. ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್, ಬ್ರಹ್ಮಾವರ – ಸಮಾಧಾನಕರ
8ರಿಂದ 10ನೇ ತರಗತಿ, ವಿಷಯ – ಮಕ್ಕಳ ದಿನಾಚರಣೆ ಅಥವಾ ಸಂತೆ
ಧನ್ವಿ ವಿ.ಪೂಜಾರಿ, 9ನೇ ತರಗತಿ, ಜಿ. ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್, ಬ್ರಹ್ಮಾವರ – ಪ್ರಥಮ
ಸಿಂಚನ ಮೆಂಡನ್, 9ನೇ ತರಗತಿ, ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್, ಹಿರಿಯಡ್ಕ- ದ್ವಿತೀಯ
ಕೃಷ್ಣಪ್ರಸಾದ್ ಭಟ್, 8ನೇ ತರಗತಿ, ಅಮೃತ ಭಾರತಿ ವಿದ್ಯಾಕೇಂದ್ರ, ಹೆಬ್ರಿ- ತೃತೀಯ
ಅವನಿ ಎಂ. ಮೆಸ್ತಾ, 8ನೇ ತರಗತಿ, ಸರಕಾರಿ ಹೆಣ್ಣುಮಕ್ಕಳ ಶಾಲೆ, ಉಡುಪಿ, ಸಮಾಧಾನಕರ
ಪದವಿಪೂರ್ವ ವಿಭಾಗ :ವಿಷಯ – ಕನ್ನಡ ಜ್ಞಾನಪೀಠ ಪುರಸ್ಕೃತರು ಅಥವಾ ಪರಿಸರ ಸಂರಕ್ಷಣೆ
ನಿಧೀಶ್, ದ್ವಿತೀಯ ಪಿ. ಯು. ಸಿ., ಕೆ. ಪಿ. ಎಸ್. ಹಿರಿಯಡ್ಕ – ಪ್ರಥಮ
ಚೈತನ್ಯ ಗಣೇಶ್ ಪೂಜಾರಿ, ದ್ವಿತೀಯ ಪಿ. ಯು. ಸಿ., ವಿವೇಕ ಪದವಿಪೂರ್ವ ಕಾಲೇಜು, ಕೋಟ-ದ್ವಿತೀಯ
ಶ್ರೀಶಾಂತ್ ಆಚಾರ್ಯ, ಪ್ರಥಮ ಪಿ. ಯು. ಸಿ., ಪೂರ್ಣ ಪ್ರಜ್ಞ ಕಾಲೇಜು, ಉಡುಪಿ-ತೃತೀಯ
ಶರಧಿ, ಪ್ರಥಮ ಪಿ. ಯು. ಸಿ., ವಿವೇಕ ಪದವಿಪೂರ್ವ ಕಾಲೇಜು, ಕೋಟ – ಸಮಾಧಾನಕರ
ಪದವಿ ವಿದ್ಯಾರ್ಥಿಗಳಿಗೆ
ವಿಷಯ: ಪ್ಲಾಸ್ಟಿಕ್ ಪೊಲ್ಯೂಷನ್ ಅಥವಾ ಇಂಡಿಯನ್ ಹೆರಿಟೇಜ್
ಆಶ್ಲೇಷ್ ಆರ್. ಭಟ್, ಪ್ರಥಮ ವರ್ಷ ಬಿ. ವಿ. ಎ. ಚಿತ್ರಕಲಾ ಮಂದಿರ, ಉಡುಪಿ – ಪ್ರಥಮ
ಮಿಥುನ್ ಕುಮಾರ್ ಕೆ., ಪ್ರಥಮ ವರ್ಷ ಬಿ. ವಿ. ಎ. ಚಿತ್ರಕಲಾ ಮಂದಿರ, ಉಡುಪಿ – ದ್ವಿತೀಯ
ಅನಿಶ್, ಪ್ರಥಮ ಬಿ. ಕಾಂ., ಪೂರ್ಣ ಪ್ರಜ್ಞ ಕಾಲೇಜು, ಉಡುಪಿ- ತೃತೀಯ