ವಿರಾಜಪೇಟೆ : ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು ಹಾಗೂ ಕಲಾ ಉತ್ಸವ ಕೊಡಗು 2024 ಇವರ ಸಹಯೋಗದಲ್ಲಿ ಕಲೋತ್ಸವ ಬಹುಭಾಷಾ ಕವಿಗೋಷ್ಠಿ ಮತ್ತು ಗೀತ ಗಾಯನ ಕಾರ್ಯಕ್ರಮವು ದಿನಾಂಕ 15 ಡಿಸೆಂಬರ್ 2024ರಂದು ವಿರಾಜಪೇಟೆಯ ಶಾನುಭೋಗ್ ಸೆಂಟರ್‌ನಲ್ಲಿ ನಡೆಯಿತು.
ಮೈಸೂರಿನ ಕಾದಂಬರಿಕಾರರಾದ ಎಂ.ಬಿ. ಸಂತೋಷ್ ಇವರು ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರು ಮತ್ತು ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷರಾದ ಬಿ.ಎಸ್. ಲೋಕೇಶ್ ಸಾಗರ್ ಇವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಹಾಸನದಿಂದ ಎನ್.ಎಲ್. ಚನ್ನೇಗೌಡ ಹಾಗೂ ಕುಮಾರ್ ಚಲವಾದಿ ಹಾಸನ ಇವರು ಭಾಗವಹಿಸಿದ್ದರು. ವಿರಾಜಪೇಟೆಯ ಹಿರಿಯ ವಕೀಲರು ಎಸ್.ಆರ್. ಜಗದೀಶ್, ವಿರಾಜಪೇಟೆ ರೋಟರಿ ಶಾಲೆಯ ಮುಖ್ಯ ಶಿಕ್ಷಕಿ ಹೆಚ್.ಜೆ. ವಿಶಾಲಾಕ್ಷಿ, ಕೊಡಗು ಜಿಲ್ಲೆ ಹಿರಿಯ ಕವಿಗಳು ಗಿರೀಶ್ ಕಿಗ್ಗಾಲು ಇವರು ಉಪಸ್ಥಿತರಿದ್ದರು. ವೈಲೇಶ್ ಪಿ.ಎಸ್. ಕೊಡಗು ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಚಿತ್ರಕಲಾಕಾರ ಸಾಧಿಕ್ ಹಂಸ ಕಾರ್ಯಕ್ರಮದ ಕುರಿತು ನಲ್ಮೆಯ ಮಾತುಗಳನ್ನಾಡಿದರು. ಸುಮಾರು 50 ಜನ ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಸುಮಾರು 35 ಕವಿಗಳು ಕವನ ವಾಚನ ಮಾಡಿದರು. ಶಿವಮೊಗ್ಗದಿಂದ ನಂದ ಪ್ರೇಮ ಕುಮಾರ್, ಹಾ.ಮಾ. ಸುಲೋಚನಾ, ನಳಿನಿ ಬಾಲಸುಬ್ರಹ್ಮಣ್ಯ, ರವಿಕುಮಾರ್ ವಕೀಲರು, ಮೈಸೂರಿನಿಂದ ಎಂ.ಬಿ. ಸಂತೋಷ್, ಚೌಡಯ್ಯ ಸಿ., ಮಂಡ್ಯದಿಂದ ಸೌಮ್ಯ ಎಸ್.ಬಿ., ಹಾಸನದಿಂದ ಮಲ್ಲೇಶ್ ಜಿ. ಹಾಗೂ ಕೊಡಗಿನ ಶನಿವಾರಸಂತೆಯ ಅಂತೋಣಿ ಉಮೇಶ್, ಪೇರಿಯಂಡ ಯಶೋಧ, ವಿಜಯಶ್ರೀ ಅನಿಲ್ ಕೆದಿಲಾಯ, ದೀಪಿಕಾ ರಾಘವೇಂದ್ರ, ವಿನಯ ಕುಮಾರಿ ರಾಜಶೇಖರ್, ಚೈತ್ರ ಬೆಳ್ಳರಿಮಾಡು, ಜಯಲಕ್ಷ್ಮೀ ಎಂ.ಬಿ., ನಳಿನಿ ಹೆಚ್.ಆರ್. ಪೊನ್ನಂಪೇಟೆ, ಮಮತಾ ರಾಜೇಶ್ ಮುಳ್ಳುಸೋಗೆ, ಕಾಣತಂಡ ಭವ್ಯ ದೇವಯ್ಯ ಕದನೂರ್, ಕೆ.ಎಸ್. ನಳಿನಿ ಕುಶಾಲನಗರ, ಅಯೇಷಾ ಬಲಮುರಿ (ಗಾಯನ), ಉಳುವಂಗಡ ಕಾವೇರಿ ಉದಯ, ರಾಮಚಂದ್ರರಾವ್ ಗುಹ್ಯ ಇವರು ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಅತಿಥಿ ಅಭ್ಯಾಗತರನ್ನು ಮತ್ತು ನಿವೃತ್ತ ಶಿಕ್ಷಕರಾದ ಮಂಜುನಾಥ್ ಎ.ವಿ. ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ರಶ್ಮಿ ಕಾರ್ಯಪ್ಪ ಕಬ್ಬಚ್ಚಿರ ಪ್ರಾರ್ಥಿಸಿ, ಎ.ವಿ.ಮಂಜುನಾಥ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪುಷ್ಪ ಡಿ.ಹೆಚ್, ಸುಪ್ರೀತ ದಿಲೀಪ್ ಹಾಗೂ ಲಲಿತಾ ಎಂ.ಕೆ. ನಿರ್ವಹಣೆ ಮಾಡಿದರು. ವಿಮಲ ದಶರಥರವರು ವಂದಿಸಿದರು.