ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಮಹಿಳಾ ವಿಂಶತಿ ಸಂಭ್ರಮದ ಅಂಗವಾಗಿ 20ನೇ ಸರಣಿ ತಾಳಮದ್ದಳೆ ‘ಮೇಘನಾದ’ ಎಂಬ ಆಖ್ಯಾನದೊಂದಿಗೆ ದಿನಾಂಕ 17 ಡಿಸೆಂಬರ್ 2024ರಂದು ಬಲಮುರಿ ಶ್ರೀ ವಿದ್ಯಾ ಗಣಪತಿ ದೇವಸ್ಥಾನ ಭಾರತೀ ನಗರ ಬನ್ನೂರಿನಲ್ಲಿ ಜರಗಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀನಾರಾಯಣ ಭಟ್ ಬಟ್ಯಮೂಲೆ ಹಾಗೂ ಚೆಂಡೆ, ಮದ್ದಲೆಗಳಲ್ಲಿ ಪದ್ಯಾಣ ಶಂಕರ ನಾರಾಯಣ ಭಟ್, ಪಿ.ಟಿ. ಜಯರಾಮ್ ಭಟ್ ಸಹಕರಿಸಿದರು. ಮುಮ್ಮೇಳದಲ್ಲಿ ಮಾಂಬಾಡಿ ವೇಣುಗೋಪಾಲ್ ಭಟ್ (ಶ್ರೀರಾಮ), ಗುಂಡ್ಯಡ್ಕ ಈಶ್ವರ ಭಟ್ (ಇಂದ್ರಜಿತು), ಗುಡ್ಡಪ್ಪ ಬಲ್ಯ (ಲಕ್ಷ್ಮಣ), ದುಗ್ಗಪ್ಪ ನಡುಗಲ್ಲು (ರಾವಣ), ಚಂದ್ರಶೇಖರ ಭಟ್ ಬಡೆಕ್ಕಿಲ (ಜಾಂಬವ), ವಿ.ಕೆ. ಶರ್ಮ ಅಳಿಕೆ (ಹನೂಮಂತ), ಶುಭಾ ಜೆ.ಸಿ. ಅಡಿಗ (ವಿಭೀಷಣ), ಕಿಶೋರಿ ದುಗ್ಗಪ್ಪ ನಡುಗಲ್ಲು (ಮಾಯಾ ಸೀತೆ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ಗಾಯತ್ರಿ ಹೆಬ್ಬಾರ್ ಪ್ರಾಯೋಜಿಸಿದರು.