ಉಡುಪಿ : ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ ಕುದ್ರೋಳಿ ಗಣೇಶ್ ಇವರ ವಿನೂತನ ಪ್ರಯೋಗ ‘ಮೈಂಡ್ ಮಿಸ್ಟರಿ’ ಕಾರ್ಯಕ್ರಮವು ದಿನಾಂಕ 21 ಹಾಗೂ 22 ಡಿಸೆಂಬರ್ 2024ರಂದು ಉಡುಪಿಯ ಐ. ವೈ. ಸಿ. ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ನಿಮ್ಮ ಮನಸ್ಸಿನಲ್ಲಿರುವ ವಿಚಾರವನ್ನು ಬಹಿರಂಗ ಪಡಿಸುವ ‘ಮೈಂಡ್ ರೀಡಿಂಗ್’, ಮನಸ್ಸಿನಿಂದ ಮನಸ್ಸಿನ ಮಧ್ಯೆ ಅಗೋಚರ ಸಂಪರ್ಕ ಕಲ್ಪಿಸುವ ‘ಟೆಲಿಪತಿ’, ಪಂಚೇಂದ್ರಿಯಗಳ ಪ್ರಜ್ಞೆ ಮೀರಿ ಆರನೇ ಇಂದ್ರಿಯದ ಅನುಭೂತಿಯ ‘ಎಕ್ಸ್ಟ್ರಾ ಸೆನ್ಸರಿ ಪರ್ಸೆಪ್ಶನ್’ (ಇ. ಎಸ್. ಪಿ. ), ವ್ಯಕ್ತಿಯ ವರ್ತನೆಯ ಮೇಲೆ ಪ್ರಭಾವ ಬೀರುವ ಪ್ರಯೋಗ ‘ಎನ್. ಎಲ್. ಪಿ.’ ಹಾಗೂ ಮುಂಬರುವ ವಿಚಾರಗಳನ್ನು ಪೂರ್ವದಲ್ಲೇ ಸೂಚಿಸುವ ಚಮತ್ಕಾರವಾದ ‘ಭವಿಷ್ಯವಾಣಿ’ ಪ್ರದರ್ಶನಗೊಳ್ಳಲಿದೆ.
ಈ ಕಾರ್ಯಕ್ರಮ 2 ದಿನಗಳಲ್ಲಿ 3 ಪ್ರದರ್ಶನ ನಡೆಯಲಿದ್ದು, ಡಿಸೆಂಬರ್ 21ರಂದು ಸಂಜೆ ಘಂಟೆ 6.30ಕ್ಕೆ ಒಂದು ಪ್ರದರ್ಶನ ಹಾಗೂ ಡಿಸೆಂಬರ್ 22 ರಂದು ಮಧ್ಯಾಹ್ನ 3.30ಕ್ಕೆ ಹಾಗೂ ಸಂಜೆ 6.30ಕ್ಕೆ ಒಟ್ಟು ಎರಡು ಪ್ರದರ್ಶನಗಳು ನಡೆಯಲಿದೆ.
ಕಾರ್ಯಕ್ರಮದ ಟಿಕೆಟ್ ಗಳಿಗಾಗಿ https://kudroliganesh.com/Registration.html ಅಥವಾ ಕಾರ್ಯಕ್ರಮದ ಸಂಯೋಜಕರಾದ ವಿಕ್ರಮ ಶೆಟ್ಟಿ +91 94481 08222 | +91 807357957 ಇವರನ್ನು ಸಂಪರ್ಕಿಸಬಹುದು.

