ಮೂಲ್ಕಿ : ಕ. ಸಾ. ಪ. ಮೂಲ್ಕಿ ಹೋಬಳಿ ಘಟಕದ ಉದ್ಘಾಟನಾ ಸಮಾರಂಭವು ದಿನಾಂಕ 14 ಡಿಸೆಂಬರ್ 2024ರಂದು ಕಿನ್ನಿಗೋಳಿಯ ನೇಕಾರ ಸೌಧದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ತು ದ. ಕ. ಜಿಲ್ಲಾಧ್ಯಕ್ಷ ಡಾ. ಎಂ. ಪಿ .ಶ್ರೀನಾಥ್ ಮಾತನಾಡಿ “ಗ್ರಾಮ ಗ್ರಾಮಗಳಲ್ಲಿ ಕನ್ನಡ ಮತ್ತು ಸಾಹಿತ್ಯದ ಕೆಲಸದಲ್ಲಿ ನಿರಂತರತೆ ಕಾಯ್ದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಹಿರಿಯ ಸಾಹಿತಿಗಳನ್ನು ಅವರ ಮನೆಗಳಲ್ಲಿ ಭೇಟಿ ಮಾಡಿ ಮಾತಾಡಿಸುವ ಹಾಗೂ ಗೌರವಿಸುವ ನಿಟ್ಟಿನಲ್ಲೂ ಕೆಲಸ ಮಾಡುತ್ತಿದ್ದೇವೆ.”ಎಂದು ಹೇಳಿದರು.
ಕಟೀಲು ದೇಗುಲದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಕಿನ್ನಿಗೋಳಿ ಚರ್ಚ್ ಇದರ ರೆ. ಫಾ. ಜೊಕಿಂ ಫೆರ್ನಾಂಡಿಸ್, ಕ. ಸಾ. ಪ. ಮಾಜಿ ಗೌರವ ಕಾರ್ಯದರ್ಶಿ ಭುವನಾಭಿರಾಮ ಉಡುಪ, ಮಂಗಳೂರು ತಾಲೂಕು ಕ. ಸಾ. ಪ. ಮಾಜಿ ಅಧ್ಯಕ್ಷ ಮೋಹನದಾಸ ಸುರತ್ಕಲ್, ಮೂಲ್ಕಿ ತಾಲೂಕು ಘಟಕಾಧ್ಯಕ್ಷ ಮಿಥುನ್ ಕೊಡೆತ್ತೂರು, ರೋಟರಿಯ ಧನಂಜಯ ಶೆಟ್ಟಿಗಾರ್, ಸಾಹಿತಿ ಉದಯಕುಮಾರ ಹಬ್ಬು ಹಾಗೂ ಹೇಮಾಚಾರ್ಯ ಉಪಸ್ಥಿತರಿದ್ದರು.
ಹೋಬಳಿ ಘಟಕದ ನೂತನ ಅಧ್ಯಕ್ಷ ಜೊಸ್ಸಿ ಪಿಂಟೋ, ಗೌರವ ಕಾರ್ಯದರ್ಶಿ ಶರತ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಸ್ಟ್ಯಾನಿ ಪಿಂಟೋ, ಸದಸ್ಯರಾದ ಪ್ರಮೋದ್ ಕುಮಾರ್, ಅಂಬಿಕಾ ಶೆಟ್ಟಿ, ಸಂತೋಷ್ ಶೆಟ್ಟಿ, ಅಬ್ದುಲ್ ಖಾದರ್, ಡಾ. ಪುರುಷೋತ್ತಮ ಕೆ.ವಿ. ಇವರನ್ನು ಅಭಿನಂದಿಸಲಾಯಿತು.
ಶಶಿಕಲಾ ಕೆಮ್ಮಡೆ ಹಾಗೂ ಪ್ರಕಾಶ್ ಆಚಾರ್ ಕನ್ನಡದ ಹಾಡುಗಳನ್ನು ಹಾಡಿದರು. ಜೊಸ್ಸಿ ಪಿಂಟೋ ಸ್ವಾಗತಿಸಿ, ಶರತ್ ಶಟ್ಟಿ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Comments are closed.