ಬೆಂಗಳೂರು : ರಾಷ್ಟ್ರೀಯ ಕುವೆಂಪು ಪ್ರತಿಷ್ಠಾನದ 2024ನೇ ಸಾಲಿನ ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಗುಜರಾತಿ ಭಾಷೆಯ ಹೆಸರಾಂತ ಬರಹಗಾರ್ತಿ ಡಾ. ಹಿಮಾನ್ಷಿ ಇಂದೂಲಾಲ್ ಶೆಲಾತ್ ಆಯ್ಕೆಯಾಗಿದ್ದಾರೆ.
ಪ್ರತಿಷ್ಠಾನದ ಅಧ್ಯಕ್ಷ ಡಾ. ಬಿ.ಎಲ್. ಶಂಕರ್ ಇವರ ಅಧ್ಯಕ್ಷತೆಯಲ್ಲಿ ನಡೆದ ಷರೀಫಾ ವಿಜಲಿವಾಲ, ಅಗ್ರಹಾರ ಕೃಷ್ಣಮೂರ್ತಿ, ಪುರುಷೋತ್ತಮ ಬಿಳಿಮಲೆ ಅವರಿದ್ದ ಪುರಸ್ಕಾರ ಆಯ್ಕೆ ಸಮಿತಿಯ ಸಭೆಯಲ್ಲಿ ಡಾ. ಹಿಮಾನ್ಷಿ ಇಂದೂಲಾಲ್ ಶೆಲಾತ್ ಇವರನ್ನು ಆಯ್ಕೆ ಮಾಡಿದೆ.
ಕುವೆಂಪು ರಾಷ್ಟ್ರೀಯ ಪುರಸ್ಕಾರ 5 ಲಕ್ಷ ರೂಪಾಯಿ ನಗದು, ಬೆಳ್ಳಿಪದಕ ಒಳಗೊಂಡಿರುತ್ತದೆ. ಜನವರಿ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪುರಸ್ಕಾರ ಪ್ರದಾನ ಸಮಾರಂಭ ನೆರವೇರಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಬಿ. ಎಲ್. ಶಂಕರ್ ತಿಳಿಸಿದ್ದಾರೆ.
ಗುಜರಾತಿನ ಖ್ಯಾತ ಲೇಖಕ ಡಾ.ಶೆಲತ್ ಅವರು ತಮ್ಮ ಸೂಕ್ಷ್ಮ ಬರಹಗಳಿಗೆ ಹೆಸರುವಾಸಿಯಾಗಿದ್ದಾರೆ ಮತ್ತು ಗುಜರಾತಿ ಭಾಷೆಯಲ್ಲಿ ತಮ್ಮ ಕೃತಿಗಳ ಮೂಲಕ ಭಾರತೀಯ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಇವರು ಸುಮಾರು 20 ಪುಸ್ತಕಗಳನ್ನು ಬರೆದಿದ್ದು, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.
Subscribe to Updates
Get the latest creative news from FooBar about art, design and business.
Previous Articleಸಾಲಿಗ್ರಾಮದಲ್ಲಿ ‘ಕಿಶೋರ ಯಕ್ಷಗಾನ ಸಂಭ್ರಮ’ದ ಉದ್ಘಾಟನೆ
Next Article ಕಲ್ಲಚ್ಚು ಪ್ರಕಾಶನ ‘ರಜತ ರಂಗು’ – 25 ಸಾಧಕರಿಗೆ ಗೌರವಾರ್ಪಣೆ
Related Posts
Comments are closed.