ಕೋಟ : ವಿದೇಶದ ಮಣ್ಣಿನಲ್ಲಿ ಪ್ರಥಮ ಬಾರಿಗೆ ಯಕ್ಷಗಾನದ ಸೀಮೋಲ್ಲಂಘನಗೈದ ಐತಿಹಾಸಿಕ ದಾಖಲೆಯ ಕೋಟದ ಸಾಲಿಗ್ರಾಮ ಮಕ್ಕಳ ಮೇಳದ ಸುವರ್ಣ ಪರ್ವದ ಐದನೆಯ ಕಾರ್ಯಕ್ರಮ ‘ಸುವರ್ಣ ಸಮ್ಮಿಲನ-50’ ಕಾರ್ಯಕ್ರಮವು 25 ಡಿಸೆಂಬರ್ 2024 ಬುಧವಾರದಂದು ತೆಕ್ಕಟ್ಟೆಯ ಯಶಸ್ವೀ ಕಲಾವೃಂದದ ನೆರವಿನೊಂದಿಗೆ ಹಯಗ್ರೀವ ಸಭಾ ಮಂಟಪದಲ್ಲಿ ಬೆಳಿಗ್ಗೆ ಘಂಟೆ 10.00ರಿಂದ ನಡೆಯಲಿದೆ. ಮಕ್ಕಳ ಮೇಳದ 50ವರ್ಷಗಳ ಹಿರಿಯ ಕಿರಿಯ ವಿದ್ಯಾರ್ಥಿಗಳು ಅವಿಸ್ಮರಣೀಯ ದಿನಕ್ಕೆ ಅಂದು ಜೊತೆಯಾಗಲಿದ್ದಾರೆ.
ಇದೇ ಸಂದರ್ಭದಲ್ಲಿ ಮಕ್ಕಳ ಯಕ್ಷಗಾನ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ ಯಕ್ಷ ಗುರು ಕೋಟದ ಕೆ. ನರಸಿಂಹ ತುಂಗ ಇವರನ್ನು ‘ಸುವರ್ಣ ಸಂಭ್ರಮ ಪುರಸ್ಕಾರ’ ನೀಡಿ ಗೌರವಿಸಲಾಗುವುದು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕೋಟದ ಗೀತಾನಂದ ಫೌಂಡೇಶನ್ ಇದರ ಆನಂದ ಸಿ. ಕುಂದರ್, ಕುಂದಾಪುರ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಆದರ್ಶ ಹೆಬ್ಬಾರ್, ಉಡುಪಿ ಯಕ್ಷಗಾನ ಕಲಾರಂಗದ ಮುರಳಿ ಕಡೆಕಾರ್, ಉಡುಪಿ ಕ. ಸಾ. ಪ. ಇದರ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಯಶಸ್ವೀ ಕಲಾವೃಂದದ ಅಧ್ಯಕ್ಷರಾದ ಮಲ್ಯಾಡಿ ಸೀತಾರಾಮ ಶೆಟ್ಟಿ, ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕರಾದ ಎಚ್. ಶ್ರೀಧರ ಹಂದೆ, ಮಕ್ಕಳ ಮೇಳ ಟ್ರಸ್ಟ್ ಇದರ ಅಧ್ಯಕ್ಷರಾದ ಬಲರಾಮ ಕಲ್ಕೂರ, ಕಾರ್ಯಾಧ್ಯಕ್ಷರಾದ ಕೆ. ಮಹೇಶ ಉಡುಪ, ಉಪಾಧ್ಯಕ್ಷರಾದ ಜನಾರ್ದನ ಹಂದೆ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎಚ್. ಕಾವ್ಯ ಹಂದೆ ನಿರೂಪಿಸಲಿದ್ದಾರೆ.
ಬೆಳಿಗ್ಗೆ ಘಂಟೆ 10.00 ರಿಂದ ಸಂಜೆ ಘಂಟೆ 7.00ರವರೆಗೆ ಸುವರ್ಣ ಪುರಸ್ಕಾರ, ಗುರು ಶಿಷ್ಯ ಸಂವಾದ, ನೆನಪುಗಳ ಬುತ್ತಿ ಮತ್ತು ಮಕ್ಕಳ ಮೇಳದ ಹಿರಿ ಕಿರಿಯ ಕಲಾವಿದರಿಂದ ವೀರ ವೃಷಸೇನ, ಕೃಷ್ಣಾರ್ಜುನ, ಬಬ್ರುವಾಹನ ಪ್ರಸಂಗಗಳ ಯಕ್ಷ ರಸ ನಿಮಿಷಗಳು ಪ್ರದರ್ಶನಗೊಳ್ಳಲಿವೆ ಎಂದು ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಸಾಲಿಗ್ರಾಮ ಮಕ್ಕಳ ಮೇಳದ ‘ಸುವರ್ಣ ಸಮ್ಮಿಲನ- 50’ ‘ಸುವರ್ಣ ಪುರಸ್ಕಾರ’ ಸಮಾರಂಭ | ಡಿಸೆಂಬರ್ 25
No Comments1 Min Read
Previous Articleತೆಕ್ಕಟ್ಟೆಯ ಹಯಗ್ರೀವದಲ್ಲಿ ವಾಸುದೇವ ಸಾಮಗರ ಸಂಸ್ಮರಣೆ ಕಾರ್ಯಕ್ರಮ
Related Posts
Comments are closed.