ತೆಕ್ಕಟ್ಟೆ : ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ ಇದರ 25ರ ಸಂಭ್ರಮದ ಯಾನದ ಪ್ರಯುಕ್ತ ‘ನಾಟಕಾಷ್ಟಕ’ ಎಂಟು ರಂಗಭೂಮಿ ನಾಟಕಗಳ ಪ್ರದರ್ಶನವನ್ನು ದಿನಾಂಕ 26 ಡಿಸೆಂಬರ್ 2024ರಿಂದ 02 ಜನವರಿ 2025ರವರೆಗೆ ಪ್ರತಿದಿನ ಸಂಜೆ 6-00 ಗಂಟೆಗೆ ತೆಕ್ಕಟ್ಟೆ ಹಯಗ್ರೀವದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 26 ಡಿಸೆಂಬರ್ 2024ರಂದು ನೀನಾಸಂ ತಿರುಗಾಟ ‘ಮಾಲತಿ ಮಾಧವ’, ದಿನಾಂಕ 27 ಡಿಸೆಂಬರ್ 2024ರಂದು ನೀನಾಸಂ ತಿರುಗಾಟ ‘ಅಂಕದ ಪರದೆ’, ದಿನಾಂಕ 28 ಡಿಸೆಂಬರ್ 2024ರಂದು ಮೈಸೂರಿನ ನಟನ ತಂಡದವರಿಂದ ‘ಕಣಿವೆಯ ಹಾಡು’, ದಿನಾಂಕ 29 ಡಿಸೆಂಬರ್ 2024ರಂದು ಮಂಗಳೂರಿನ ಕಲಾಭಿ ಚಿಲ್ಡ್ರನ್ ಥಿಯೇಟರ್ (ರಿ.) ತಂಡದಿಂದ ‘ಮೊಗ್ಲಿ’, ದಿನಾಂಕ 30 ಡಿಸೆಂಬರ್ 2024ರಂದು ಕೋಟದ ಸುವಿಕಾ ಸಾಂಸ್ಕೃತಿಕ ಸಂಘಟನೆಯ ಕಾವ್ಯ ಹಂದೆ ಎಚ್. ಅಭಿನಯದ ಏಕವ್ಯಕ್ತಿ ರಂಗ ಪ್ರಯೋಗ ‘ಹಕ್ಕಿ ಮತ್ತು ಅವಳು’, ದಿನಾಂಕ 31 ಡಿಸೆಂಬರ್ 2024ರಂದು ಬ್ರಹ್ಮಾವರ ಬೈಕಾಡಿಯ ಮಂದಾರ (ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆಯವರಿಂದ ‘ಪಂಚ (ಮುಖವಾಡ) ತಂತ್ರ’, ದಿನಾಂಕ 01 ಜನವರಿ 2025ರಂದು ಬ್ರಹ್ಮಾವರದ ಎಸ್.ಎಮ್ ಎಸ್. ಆಂಗ್ಲ ಮಾಧ್ಯಮ ಶಾಲೆಯ ತಂಡದವರಿಂದ ‘ಪಂಜರ ಶಾಲೆ’ ಮತ್ತು ದಿನಾಂಕ 02 ಜನವರಿ 2025ರಂದು ಬೈಂದೂರು ಸುರಭಿ ತಂಡದವರಿಂದ ‘ಮಕ್ಕಳ ರಾಮಾಯಣ’ ಎಂಬ ನಾಟಕಗಳು ಪ್ರದರ್ಶನಗೊಳ್ಳಲಿದೆ.