ಪುತ್ತೂರು : ಶ್ರೀ ದೇವಿ ನೃತ್ಯಾರಾಧನಾ ಕಲಾ ಕೇಂದ್ರ (ರಿ.) ಪುತ್ತೂರು ಇವರು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ಸಹಯೋಗದಲ್ಲಿ ಆಯೋಜಿಸುವ ‘ನೃತ್ಯ ಧಾರಾ’ ಮತ್ತು ‘ಕಲಾನಯನ’ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 29 ಡಿಸೆಂಬರ್ 2024ನೇ ಆದಿತ್ಯವಾರ ಸಂಜೆ ಘಂಟೆ 4.00ರಿಂದ ಬಿ. ಸಿ. ರೋಡು ಇಲ್ಲಿನ ಸ್ಪರ್ಶ ಕಲಾಮಂದಿರದಲ್ಲಿ ನಡೆಯಲಿದೆ.
ಸನಾತನ ನಾಟ್ಯಾಲಯ ಮಂಗಳೂರು ಇದರ ನಿರ್ದೇಶಕರಾದ ಶ್ರೀ ಚಂದ್ರಶೇಖರ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ‘ಡಾಯಿಜೀ ವರ್ಲ್ಡ್’ ಟಿವಿ ಮಂಗಳೂರು ಇದರ ಸಂಸ್ಥಾಪಕರಾದ ಶ್ರೀ ವಾಲ್ಟರ್ ನಂದಳಿಕೆ ಹಾಗೂ ಬಂಟ್ವಾಳದ ಯುವ ಉದ್ಯಮಿಗಳಾದ ಶ್ರೀ ಅವಿನಾಶ್ ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವಇವರಿಗೆ (ಮರಣೋತ್ತರ) ಕಲಾನಯನ ಪ್ರಶಸ್ತಿ ಮತ್ತು ‘ದೇವ್ ಪ್ರೊ ಸೌಂಡ್ಸ್’ ಮಂಗಳೂರು ಇದರ ಖ್ಯಾತ ಧ್ವನಿ ಮತ್ತು ಬೆಳಕು ಸಂಯೋಜಕರಾದ ಶ್ರೀಮತಿ ಮತ್ತು ಶ್ರೀ ಮೋಹನ್ ದಂಪತಿಗಳನ್ನು ಸನ್ಮಾನಿಸಲಾಗುವುದು.