ಬೆಳಗಾವಿ : ಡಾ. ಡಿ.ಎಸ್. ಕರ್ಕಿ ಪ್ರತಿಷ್ಠಾನ ಟ್ರಸ್ಟ್ (ರಿ.) ಇದರ ವತಿಯಿಂದ ಡಾ. ಡಿ.ಎಸ್. ಕರ್ಕಿಯವರ 117ನೇ ಜನ್ಮ ದಿನೋತ್ಸವ ಹಾಗೂ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 29 ಡಿಸೆಂಬರ್ 2024ರಂದು ಮುಂಜಾನೆ 11-00 ಗಂಟೆಗೆ ಬೆಳಗಾವಿ ಕಿತ್ತೂರ ಚನ್ನಮ್ಮ ವೃತ್ತದ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಗದಗಿನ ತೋಂಟದಾರ್ಯ ಮಠದ ಪೂಜ್ಯರು ಡಾ. ಸಿದ್ದರಾಮ ಸ್ವಾಮೀಜಿಯವರು ಸಾನಿಧ್ಯ ನೀಡಲಿದ್ದಾರೆ. ನಿವೃತ್ತ ಪ್ರಾಂಶುಪಾಲರಾದ ಡಾ. ರಮೇಶ ಮು. ಕರ್ಕಿ ಇವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಬ್ಯಾಡಗಿ ಕುಮಾರಿ ಮಧು ಕಾರಗಿ, ಕೋಲಾರ ಪ.ಗು. ಸಿದ್ಧಾಪುರ ಮತ್ತು ಬೆಳಗಾವಿ ಶ್ರೀಮತಿ ಸುಧಾ ಇವರಿಗೆ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಬೆಳಗಾವಿಯ ಹಿರಿಯ ಸಾಹಿತಿ ಶ್ರೀಮತಿ ಆಶಾ ಯಮಕನಮರಡಿ, ಸಂಕೇಶ್ವರದ ಹಿರಿಯ ಸಾಹಿತಿ ಶ್ರೀಮತಿ ಹಮೀದಾ ಬೇಗಂ ಮತ್ತು ಬೆಳಗಾವಿಯ ಹಿರಿಯ ಸಾಹಿತಿ ಶ್ರೀಮತಿ ಜಯಶೀಲ ಬ್ಯಾಕೋಡ ಇವರನ್ನು ಸನ್ಮಾನಿಸಲಾಗುವುದು.
ಡಾ ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿಗೆ ಪುರಸ್ಕೃತ ಮೂರು ಕೃತಿಗಳು ಆಯ್ಕೆಯಾಗಿದ್ದು, ಬ್ಯಾಡಗಿಯ ಕುಮಾರಿ ಮಧು ಕಾರಗಿ ಇವರ ‘ತೆರೆಯದ ಬಾಗಿಲು’, ಕೋಲಾರ ಪ.ಗು. ಸಿದ್ಧಾಪುರ ಇವರ ‘ಅಕ್ಕರೆ ಅಜ್ಜ ನಾವು ಮತ್ತು ಗಾಂಧಿ ತಾತ’ ಹಾಗೂ ಬೆಳಗಾವಿಯ ಸುಧಾ ಪಾಟೀಲ ಇವರ ‘ಹೆಜ್ಜೆ ಗುರುತು’ ಕೃತಿಗಳು ಆಯ್ಕೆಯಾಗಿವೆ.