ಪುತ್ತೂರು : ಕಾವು ಸಮೀಪದ ಪೆರ್ನಾಜೆಯಲ್ಲಿ ಶ್ರೀ ಸುಬ್ರಹ್ಮಣ್ಯ ಉಂಗ್ರುಪುಳಿತ್ತಾಯ ಹಾಗೂ ಶ್ರೀಮತಿ ಶ್ರೀಲತಾರ ಷಷ್ಠೀ ಪೂರ್ತಿ ಕಾರ್ಯಕ್ರಮದ ಅಂಗವಾಗಿ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ‘ಸ್ಯಮಂತಕ ಮಣಿ’ ತಾಳಮದ್ದಳೆಯು ದಿನಾಂಕ 08 ಜನವರಿ 2025ರಂದು ನಡೆಯಿತು.
ಹಿಮ್ಮೇಳದಲ್ಲಿ ತಲ್ಪನಾಜೆ ವೆಂಕಟ್ರಮಣ ಭಟ್, ನಿತೀಶ್ ಎಂಕಣ್ಣಮೂಲೆ, ಬೇಂಗ್ರೋಡಿ ಲಕ್ಷ್ಮೀಶ ಭಟ್, ಮುರಳೀಧರ ಕಲ್ಲೂರಾಯ ಕುಂಜೂರುಪಂಜ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ್ ಶೆಟ್ಟಿ ಸಾಲ್ಮರ (ಶ್ರೀ ಕೃಷ್ಣ), ಭಾಸ್ಕರ್ ಬಾರ್ಯ (ಬಲರಾಮ), ಗುಂಡ್ಯಡ್ಕ ಈಶ್ವರ ಭಟ್ (ಜಾಂಬವ), ಪೂಕಳ ಲಕ್ಷ್ಮೀ ನಾರಾಯಣ ಭಟ್ (ನಾರದ) ಸಹಕರಿಸಿದರು. ಮುರಳೀಧರ ಆಚಾರ್ ಸ್ವಾಗತಿಸಿ, ಗುರುಮೂರ್ತಿ ಪುಣಿಚ್ಚಿತ್ತಾಯ ವಂದಿಸಿದರು.