ಕಮತಗಿ : ಕಮತಗಿ ಪಟ್ಟಣದ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದ ವತಿಯಿಂದ ಸಂಘದ ಅಧ್ಯಕ್ಷ ರಮೇಶ ಕಮತಗಿ ಅವರ ಗೆಳೆಯ ದಿ. ಶ್ರೀಧರ ಕುಲಕರ್ಣಿ ಅವರ ಸ್ಮರಣಾರ್ಥ ‘ಮೇಘಮೈತ್ರಿ ಗ್ರಂಥಾಲಯ’ದ ಉದ್ಘಾಟನಾ ಸಮಾರಂಭವು ದಿನಾಂಕ 05 ಜನವರಿ 2025 ರಂದು ಕಮತಗಿಯ ಹಿರೇಮಠದಲ್ಲಿ ನಡೆಯಿತು.
ಸಮಾರಂಭದಲ್ಲಿ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ ಶ್ರೀ 1008 ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರು ಶ್ರೀ ಉಜ್ಜಯಿನಿ ಮಹಾಪೀಠ ಇವರು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ರಮೇಶ ಕಮತಗಿ ಮಾತನಾಡಿ “ಗೆಳೆಯ ದಿ. ಶ್ರೀಧರ ಕುಲಕರ್ಣಿ ಅವರ ಸ್ಮರಣಾರ್ಥ ‘ಮೇಘಮೈತ್ರಿ ಗ್ರಂಥಾಲಯ’ ಮಾಡಿದ್ದು ಗೆಳೆಯನ ಹೆಸರು ಅಮರವಾಗಲಿ ಹಾಗೂ ಅವನ ಹೆಸರಲ್ಲಿ ಒಂದಿಷ್ಟು ಜನರಿಗೆ ಜ್ಞಾನಾರ್ಜನೆಯಾಗಲಿ ಎಂಬ ಇಚ್ಛೆಯಿಂದ ನನ್ನ ಬಯಕೆ ಈಡೇರಿತು. ಎಲ್ಲರ ಸಹಾಯ ಸಹಕಾರದಿಂದ ಈ ಕೆಲಸವಾಗಿದೆ ಆದ್ದರಿಂದ ಎಲ್ಲರಿಗೂ ಪ್ರೀತಿಯ ಧನ್ಯವಾದಗಳು” ಎಂದರು.
ಈ ಸಂಧರ್ಭದಲ್ಲಿ ಹಿರೇಮಠದ ಷ. ಬ್ರ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು, ಗುಳೇದಗುಡ್ಡದ ಕಾಡಸಿದ್ದೇಶ್ವರ ಮಠದ ಷ.ಬ್ರ ಅಭಿನವ ಶ್ರೀ ಕಾಡಸಿದ್ದೇಶ್ವರ ಮಹಾಸ್ವಾಮಿಗಳು, ಮಾಜಿ ಶಾಸಕರಾದ ಡಾ.ವೀರಣ್ಣ ಚರಂತಿಮಠ, ಕಮತಗಿ ಪ. ಪಂ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಸಂಗಣ್ಣ ಗಾಣಿಗೇರ, ಕನ್ನಡ ಸಾಹಿತ್ಯ ಪರಿಷತ್ ಇದರ ಅಧ್ಯಕ್ಷರಾದ ಶಿವಾನಂದ ಶೇಲ್ಲಿಕೇರಿ, ಬೆವೂರಿನ ಗ್ಯಾನಪ್ಪ ಅಜ್ಜನವರು ಹಾಗೂ ಹುಬ್ಬಳ್ಳಿಯ ಮೆದುಳು ಬೆನ್ನುಹುರಿ ನರರೋಗ ತಜ್ಞರಾದ ಡಾ. ರಾಜೇಂದ್ರ ದುಗಾಣಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.