ಉಡುಪಿ : ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಅಂಬಲಪಾಡಿ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಎಂ.ಜಿ.ಎಂ. ಕಾಲೇಜಿನ ಸಹಕಾರದೊಂದಿಗೆ ರಂಗಭೂಮಿ (ರಿ.) ಉಡುಪಿ ಆಯೋಜಿಸುವ ‘ಅಂಬಲಪಾಡಿ ನಾಟಕೋತ್ಸವ’ವನ್ನು ದಿನಾಂಕ 12 ಜನವರಿ 2025 ಮತ್ತು 13 ಜನವರಿ 2025ರಂದು ಸಂಜೆ 6-00 ಗಂಟೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ನಾಟಕೋತ್ಸವವನ್ನು ರಂಗಭೂಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ. ನಿ.ಬೀ. ವಿಜಯ ಬಲ್ಲಾಳ ಇವರು ಉದ್ಘಾಟಿಸಲಿದ್ದಾರೆ. ದಿನಾಂಕ 12 ಜನವರಿ 2025ರಂದು ಭವಭೂತಿ ರಚನೆ ಹಾಗೂ ಅಕ್ಷರ ಕೆ.ವಿ. ಇವರ ನಿರ್ದೇಶನದಲ್ಲಿ ಹೆಗ್ಗೋಡು ನೀನಾಸಂ ತಂಡದವರಿಂದ ‘ಮಾಲತೀ ಮಾಧವ’ ಮತ್ತು ದಿನಾಂಕ 13 ಜನವರಿ 2025ರಂದು ಅಭಿರಾಮ್ ಭಡ್ಕಮ್ಕರ್ ರಚಿಸಿರುವ ಜಯಂತ್ ಕಾಯ್ಕಿಣಿ ಕನ್ನಡಕ್ಕೆ ಅನುವಾದಿಸಿರುವ ವಿದ್ಯಾನಿಧಿ ವನಾರಸೆ ಇವರ ನಿರ್ದೇಶನದಲ್ಲಿ ಹೆಗ್ಗೋಡು ನೀನಾಸಂ ತಂಡದವರಿಂದ ‘ಅಂಕದ ಪರದೆ’ ನಾಟಕ ಪ್ರದರ್ಶನಗೊಳ್ಳಲಿದೆ.