ಉಡುಪಿ : ರಾಗ ಧನ ಉಡುಪಿ (ರಿ.) ಮತ್ತು ಸರಿಗಮ ಭಾರತಿ ಸಂಗೀತ ವಿದ್ಯಾಲಯ (ರಿ.) ಪರ್ಕಳ ಇವುಗಳ ಜಂಟಿ ಆಶ್ರಯದಲ್ಲಿ ರಾಗರತ್ನಮಾಲಿಕೆ – 33ನೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯು ದಿನಾಂಕ 19 ಜನವರಿ 2025ರಂದು ಅಪರಾಹ್ನ ಗಂಟೆ 2-15ಕ್ಕೆ ಪರ್ಕಳ ಕುಕ್ಕುದಕಟ್ಟೆ ಸರಿಗಮ ಭಾರತಿ ಸಂಗೀತ ವಿದ್ಯಾಲಯದ ಸಭಾಂಗಣ ನಡೆಯಲಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಉದ್ಯಾವರ ಜಯಂತಿ ಮಾಧವ ಆಚಾರ್ಯ ಉಡುಪಿ ಇವರ ಸಹಕಾರದೊಂದಿಗೆ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಮೊದಲಿಗೆ ಅಥರ್ವ ದೀಪರಾಜ ಹೆಗ್ಡೆಯವರಿಂದ ಹಾಡುಗಾರಿಕೆ, ಅನುಶ್ರೀ ಮಳಿ ಇವರಿಂದ ವಯೊಲಿನ್, ಅದ್ವೈತ ಕೃಷ್ಣ ಬಿ. ಇವರಿಂದ ಮೃದಂಗ ವಾದನ ನಡೆಯಲಿದೆ. ಅಪರಾಹ್ನ 3-30 ಗಂಟೆಗೆ ಶ್ರೀಮತಿ ಶುಭಾ ಶಿವಕುಮಾರ್ ಅಳಿಕೆ ಇವರ ಹಾಡುಗಾರಿಕೆಗೆ ವಯೊಲಿನ್‌ನಲ್ಲಿ ವಿಶ್ವಾಸ್ ಕೃಷ್ಣ ಮಂಗಳೂರು, ಮೃದಂಗದಲ್ಲಿ ಶ್ರೀ ಪನ್ನಗ ಶರ್ಮನ್ ಶೃಂಗೇರಿ ಸಹಕರಿಸಲಿದ್ದಾರೆ ಎಂದು ರಾಗ ಧನ ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ತಿಳಿಸಿದ್ದಾರೆ.