ಸಾಲಿಗ್ರಾಮ : ಸಾಲಿಗ್ರಾಮದ ಗುರುನರಸಿಂಹ ದೇವರ ವಾರ್ಷಿಕ ಅವಭೃತೋತ್ಸವದ ನಿಮಿತ್ತ ನಡುತಿಟ್ಟಿನ ಪ್ರಸಿದ್ಧ ಕಲಾವಿದ ಹೆಚ್. ಸುಜಯೀಂದ್ರ ಹಂದೆ ವಿರಚಿತ “ರಾಜ ದ್ರುಪದ” ಯಕ್ಷಗಾನ ಪ್ರದರ್ಶನವು ದಿನಾಂಕ 17 ಜನವರಿ 2025ರಂದು ಸಂಜೆ ಘಂಟೆ 5.00ಕ್ಕೆ ಕೋಟದ ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಸ್ಥಾನದ ನಾಗಪ್ಪಯ್ಯ ಹಂದೆ ರಂಗಮಂಟಪದಲ್ಲಿ ನಡೆಯಲಿದೆ.
ಬೆಂಗಳೂರಿನ ಪ್ರಸಿದ್ಧ ತಂಡವಾದ ಯಕ್ಷಾಂಗಣ ಟ್ರಸ್ಟ್ ಇವರ ಸಹಕಾರದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಕಲಾಪೋಷಕರ ಹಾಗೂ ಸಾಹಿತಿಗಳಾದ ಹೆಚ್. ಜನಾರ್ದನ ಹಂದೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ತಾರಾನಾಥ ಹೊಳ್ಳ, ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಸ್ಥಾನದ ಅಧ್ಯಕ್ಷರಾದ ಅಮರ ಹಂದೆ, ಕಟ್ಟೆ ಗೆಳೆಯರು ಹಂದಟ್ಟು, ಕ್ರೀಯಾಶೀಲ ವ್ಯಕ್ತಿ ಸುರೇಶ ಪೂಜಾರಿ ಭಾಗವಹಿಸಲಿದ್ದಾರೆ.
ಕೋಟ ಸುದರ್ಶನ ಉರಾಳರ ಸಂಯೋಜನೆಯಲ್ಲಿ ನಡೆಯುವ ಈ ಪ್ರದರ್ಶನದಲ್ಲಿ ಕಲಾವಿದರಾಗಿ ಲಂಬೋದರ ಹೆಗಡೆ, ರಾಘವೇಂದ್ರ ಹೆಗಡೆ, ಸುದೀಪ ಉರಾಳ, ಎಚ್. ಸುಜಯೀಂದ್ರ ಹಂದೆ, ಸಂಜೀವ ಹೆನ್ನಾಬೈಲು, ಡಾ. ಶಿವಕುಮಾರ್ ಅಲಗೋಡು, ರಾಘವೇಂದ್ರ ತುಂಗ ಕೆ., ತಮ್ಮಣ್ಣ ಗಾಂವ್ಕರ್, ಆದಿತ್ಯ ಹೆಗಡೆ, ನರಸಿಂಹ ತುಂಗ, ರಾಜು ಪೂಜಾರಿ ಹಾಗೂ ಇತರರು ಭಾಗವಹಿಸಲಿದ್ದಾರೆಂದು ಯಕ್ಷಾಂಗಣ ಟ್ರಸ್ಟ್ ಇದರ ಮೆನೆಜಿಂಗ್ ಟ್ರಸ್ಟಿಯಾದ ವೀಣಾ ಕೆ. ಮೋಹನ್ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Previous Articleಮಾರಣಕಟ್ಟೆ ಗೆದ್ದಿಬೈಲಗೆಯಲ್ಲಿ ‘ಪ್ರೇರಣೋತ್ಸವ 2025’ | ಜನವರಿ 14