ಮಂಗಳೂರು : ಕನ್ನಡದ ವಿಶಿಷ್ಟ ಲೇಖಕರಾಗಿ ಗುರುತಿಸಿಕೊಂಡಿರುವ ಸಹನಾ ವಿಜಯಕುಮಾರ್ ಇವರ ‘ಮಾಗಧ‘ ಕೃತಿಯ ಲೋಕರ್ಪಣಾ ಸಮಾರಂಭವು ದಿನಾಂಕ 12 ಜನವರಿ 2025ರಂದು ಮಂಗಳೂರಿನ ಸಾಹಿತ್ಯ ಉತ್ಸವದ 7ನೇ ಆವೃತ್ತಿಯ ಎರಡನೇ ದಿನದಂದು ನಡೆಯಿತು.
ಮಂಗಳೂರಿನ ಭಾರತ್ ಫೌಂಡೇಶನ್ ಮತ್ತು ಮೈಥಿಕ್ ಸೊಸೈಟಿಯ ಸಂಯೋಗದಿಂದ ಮಂಗಳೂರಿನ ಡಾ. ಟಿ. ಎಂ. ಎ. ಪೈ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಲಾಯಿತು.
ಈ ಕಾದಂಬರಿ ಅಶೋಕನ ಬಾಳಿನ ನಿರ್ಣಾಯಕ ಕ್ಷಣವನ್ನು ಆಧರಿಸಿ ನಾಲ್ಕು ಪ್ರಮುಖ ಅಂಶಗಳಲ್ಲಿ ರೂಪುಗೊಂಡಿದೆ. ಮುಖ್ಯವಾಗಿ ಅಶೋಕನ ಧರ್ಮಶಾಸನಗಳನ್ನು ಆಧರಿಸಿ ಈ ಕೃತಿಯನ್ನು ರಚಿಸಲಾಗಿದೆ. ಅರ್ಥಶಾಸ್ತ್ರದ ತತ್ವಗಳು ಕೂಡ ಈ ಕಥನದಲ್ಲಿ ಅರ್ಥಪೂರ್ಣವಾಗಿ ಬಳಕೆಯಾಗಿವೆ. ಈ ಕಾದಂಬರಿ ಕೇವಲ ರಾಜಕೀಯ ಅಥವಾ ಧಾರ್ಮಿಕ ವಿಚಾರಗಳನ್ನು ಮಾತ್ರ ಜೋಡಿಸಿಕೊಳ್ಳುವುದಿಲ್ಲ ಬದಲಾಗಿ ಇದು ಭಾರತೀಯ ಇತಿಹಾಸದ ಮಹತ್ವಪೂರ್ಣ ಘಟನೆಯನ್ನು ಹಾಗೂ ಅಶೋಕನ ವ್ಯಕ್ತಿತ್ವದ ಒಳಹೊರಗಿನ ಶೋಧನೆಯನ್ನು ಕಲಾತ್ಮಕ ಹಾಗೂ ತಾತ್ವಿಕವಾಗಿ ಪ್ರಸ್ತುತಪಡಿಸುತ್ತದೆ.
Subscribe to Updates
Get the latest creative news from FooBar about art, design and business.
Previous Articleಗಂಗೊಳ್ಳಿಯಲ್ಲಿ ಕುಮಾರವ್ಯಾಸ ಸ್ಮೃತಿ ಹಾಗೂ ಗಮಕ ಪ್ರಾತ್ಯಕ್ಷಿಕೆ
Next Article ಖ್ಯಾತ ನೃತ್ಯಗುರು ಪಿ. ಕಮಲಾಕ್ಷ ಆಚಾರ್ ನಿಧನ