ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇದರ ವತಿಯಿಂದ ‘ತಿಂಗಳ ನಾಟಕ ಸಂಭ್ರಮ’ದ ಪ್ರಯುಕ್ತ ನಾಟಕ ಪ್ರದರ್ಶನವು ದಿನಾಂಕ 18 ಜನವರಿ 2025ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಮುಚ್ಚಯ ಭವನದಲ್ಲಿ ನಡೆಯಲಿದೆ. ಈ ಸಂಭ್ರಮದಲ್ಲಿ ಕಲಾ ನಿರ್ದೇಶಕರಾದ ಶ್ರೀ ಶಶಿಧರ ಅಡಪ ಇವರು ತಿಂಗಳ ಅತಿಥಿಯಾಗಿ ಭಾಗವಹಿಸಲಿರುವರು.
ಎಂ. ಗಣೇಶ್ ಇವರ ನಿರ್ದೇಶನದಲ್ಲಿ ಶ್ರೀ ಗಜಾನನ ಯುವಕ ಮಂಡಳಿ – ಶೇಷಗಿರಿ ಕಲಾ ತಂಡದವರು ಅಭಿನಯಿಸುವ ಕುವೆಂಪುರವರ ‘ಶ್ರೀ ರಾಮಾಯಣ ದರ್ಶನ’ ಆಧಾರಿತ ನಾಟಕ ‘ವಾಲಿವಧೆ’ ಪ್ರದರ್ಶನಗೊಳ್ಳಲಿದೆ.