ಕೊಪ್ಪಳ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಬೆಂಗಳೂರು ಸಂಸ್ಥೆಯ ವತಿಯಿಂದ ‘ಅಖಿಲ ಕರ್ನಾಟಕ ನಾಲ್ಕನೇ ಕವಿ-ಕಾವ್ಯ ಸಮ್ಮೇಳನ -2025’ವನ್ನು ದಿನಾಂಕ 19 ಜನವರಿ 2025ರಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿರುವ ಶ್ರೀ ಚನ್ನಬಸವೇಶ್ವರ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 9-00 ಗಂಟೆಗೆ ಗೀತಗಾಯನ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷರಾದ ಅನಸೂಯ ಜಹಗೀರದಾರ ಇವರ ಅಧ್ಯಕ್ಷತೆಯಲ್ಲಿ ಧಾರವಾಡದ ಪ್ರಸಿದ್ಧ ಸಾಹಿತಿ ರಂಜಾನ್ ದರ್ಗಾ ಇವರು ಈ ಸಮ್ಮೇಳನವನ್ನು ಉದ್ಘಾಟಿಸಲಿರುವರು. ಇದೇ ಸಂದರ್ಭದಲ್ಲಿ ಡಾ. ಹನುಮಂತ ಹೇರೂರುರವರ ‘ಹದ್ದುಗಳ ನೆರಳಲ್ಲಿ’, ಶರಣಪ್ಪ ತಳ್ಳಿ ಕುಪ್ಪಿಗುಡ್ಡರವರ ‘ನಾಕು ತಾವಿನ ತಿರುವು’, ರಮೇಶ್ ಗಬ್ಬೂರುರವರ ‘ತತ್ವ ಪದಗಳು’, ನಾಗಭೂಷಣ್ ಅರಳಿಯವರ ‘ನೂರೆಂಟು ಹೆಜ್ಜೆಗಳು’, ರಮೇಶ್ ಬನ್ನಿಕೊಪ್ಪರವರ ‘ಆಫ್ ಚಹಾ’, ಡಾ. ಹನುಮಂತ ಹೇರೂರುರವರ ‘ನುಡಿದಷ್ಟೇ ಬಯಲು’, ಡಾ. ಯಮನೂರಪ್ಪ ವಡಕಿಯವರ ‘ಒಡಲ ಜೋಗುಳ’, ಡಾ. ಯಮನೂರಪ್ಪ ವಡಕಿಯವರ ‘ಕೊಪ್ಪಳ ಜಿಲ್ಲೆಯ ಆಯ್ದ ತತ್ವ ಪದಗಳು’ ಎಂಬ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ.
ಧಾರವಾಡ ಹಿರಿಯ ಸಾಹಿತಿ ಎ.ಎ. ದರ್ಗಾ ಇವರಿಗೆ ‘ಷಟ್ಟದಿ ಬ್ರಹ್ಮ ರಾಘವಾಂಕ – ರಾಷ್ಟ್ರೀಯ ಕಾವ್ಯ ಪುರಸ್ಕಾರ’, ಖ್ಯಾತ ಹಾಸ್ಯ ಸಾಹಿತಿ ಗಂಗಾವತಿ ಪ್ರಾಣೇಶ ಇವರಿಗೆ ‘ಹಾಸ್ಯ ಸಮ್ರಾಟ ಬೀಚಿ – ರಾಷ್ಟ್ರೀಯ ಸಾಹಿತ್ಯ ಪುರಸ್ಕಾರ’, ತುಮಕೂರಿನ ಹಿರಿಯ ಸಾಹಿತಿ ಡಾ. ಬಿ.ಸಿ. ಶೈಲಾ ನಾಗರಾಜ್ ಇವರಿಗೆ ‘ಡಾ. ಸಿದ್ಧಯ್ಯ ಪುರಾಣಿಕ – ರಾಷ್ಟ್ರೀಯ ಕಾವ್ಯ ಪುರಸ್ಕಾರ’, ರಾಯಚೂರು ಹಿರಿಯ ಸಾಹಿತಿ ರೇಷ್ಮಾ ಕಂದಕೂರ ಇವರಿಗೆ ‘ಸಂತ ಶಿಶುನಾಳ ಷರೀಫ – ರಾಷ್ಟ್ರೀಯ ಕಾವ್ಯ ಪುರಸ್ಕಾರ’, ಪ್ರಸಿದ್ಧ ಸಾಹಿತಿ ಟಿ. ಸತೀಶ ಜವರೇಗೌಡ ಇವರಿಗೆ ‘ನಾಡೋಜ ಡಾ. ದೇ. ಜ. ಗೌ. – ರಾಷ್ಟ್ರೀಯ ಸಾಹಿತ್ಯ ಪುರಸ್ಕಾರ’, ಉಪನ್ಯಾಸಕಿ ಹಾಗೂ ಸಂಶೋಧಕಿ ಡಾ. ಎಚ್. ಕೆ. ಹಸೀನಾ ಇವರಿಗೆ ‘ಡಾ. ಎಂ. ಎಂ. ಕಲಬುರ್ಗಿ – ರಾಷ್ಟ್ರೀಯ ಸಂಶೋಧನಾ ಪುರಸ್ಕಾರ’, ಪ್ರಸಿದ್ಧ ಸಾಹಿತಿ ಸುಶೀಲಾ ಲ. ಗುರವ ಇವರಿಗೆ ‘ಡಾ. ಕೈಯಾರ ಕಿಞ್ಞಣ್ಣ ರೈ ಗಡಿನಾಡ – ರಾಷ್ಟ್ರೀಯ ಸಾಹಿತ್ಯ ಪುರಸ್ಕಾರ’, ಕವಯಿತ್ರಿ ಲತಾಮಣಿ ಎಂ. ಕೆ. ತುರುವೇಕೆರೆ ಇವರಿಗೆ ‘ತಿರುಮಲಾಂಬ ರಾಷ್ಟ್ರೀಯ ಸಾಹಿತ್ಯ ಪುರಸ್ಕಾರ’, ಗಂಗಾವತಿ ಸಾಹಿತಿ ನಾಗಭೂಷಣ್ ಅರಳಿ ಇವರಿಗೆ ‘ಶಾಂತರಸ ರಾಷ್ಟ್ರೀಯ ಸಾಹಿತ್ಯ ಪುರಸ್ಕಾರ’, ಮುಂಬಯಿ ಸಾಹಿತಿ ಡಾ. ವಿಶ್ವೇಶ್ವರ ಎನ್. ಮೇಟಿ ಇವರಿಗೆ ‘ಡಾ. ವಸಂತ ಕುಷ್ಟಗಿ ರಾಷ್ಟ್ರೀಯ ಸಾಹಿತ್ಯ ಪುರಸ್ಕಾರ’ ಪ್ರದಾನ ಮಾಡಲಾಗುವುದು.
ಮಧ್ಯಾಹ್ನ 1-30 ಗಂಟೆಗೆ ಖ್ಯಾತ ಹಾಸ್ಯ ಸಾಹಿತಿ ಗಂಗಾವತಿ ಪ್ರಾಣೇಶ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕವಿಗೋಷ್ಠಿ – 01ರಲ್ಲಿ ಕವಿಗಳಾದ ಡಾ. ಮಕ್ತುಂಬಿ ಎಂ. ಭಾಲ್ಕಿ, ರಾಜೇಶ್ವರಿ ಹುಲ್ಲೇನಹಳ್ಳಿ, ಭವಾನಿ ಪ್ರಭು, ಪ್ರಕಾಶ ಕಡಮೆ, ಡಾ. ಪಾರ್ವತಿ ಕನಕಗಿರಿ, ಅರುಣಾ ನರೇಂದ್ರ, ಕವಿತಾ ಸಾರಂಗಮಠ, ಡಾ. ಚನ್ನಬಸವ ಆಸ್ಪರಿ, ಭಾರತಿ ಕೇದಾರಿ ನಲವಡೆ, ವೀರಣ್ಣ ನಿಂಗೋಜಿ, ಡಾ. ಪಾರ್ವತಿದೇವಿ ಪಾಟೀಲ, ವೈಶಾಲಿ ಶ್ರೀನಿವಾಸ, ಅಕ್ಷರ ಸಿ. ಕಾಲಿಮಿರ್ಚಿ, ಗಿರಿಜಾ ನಿರ್ವಾಣಿ, ಅಮೀರ್ ಸಾಬ್ ಒಂಟಿ, ವಿಜಯಲಕ್ಷ್ಮಿ ಏಳುಬಾವಿ, ಪಾತರಾಜು ಎಸ್. ಡಿ., ಶಂಕರ ದೇವರು ಹಿರೇಮಠ, ಡಿ.ಎಂ. ಬಡಿಗೇರ, ಎಂ.ಆರ್. ನದಾಫ್, ದೊಂಬರಹಳ್ಳಿ ನಾಗರಾಜ್, ಪ್ರತಿಭಾ ಬಿ. ಆರ್. ಇವರುಗಳು ಭಾಗವಹಿಸಲಿರುವರು.
ಸಂಜೆ 3-30 ಗಂಟೆಗೆ ಉತ್ತರ ಕನ್ನಡದ ಪ್ರಸಿದ್ಧ ಸಾಹಿತಿ ಶಿವಲೀಲಾ ಹುಣಸಗಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕವಿಗೋಷ್ಠಿ – 02ರಲ್ಲಿ ಕವಿಗಳಾದ ಮಲ್ಲೇಶ್ ಜಿ. ಹಾಸನ, ಶಕುಂತಲಾ ನಾಯಕ, ಮುರುಳೀಧರ ಜೋಷಿ, ಮಹಾದೇವ ಮೋಟಿ, ಶಿವಾನಂದ ನೀ ಹುನಗುಂಡಿ, ಅನ್ನಪೂರ್ಣ ಮನ್ನಾಪುರ, ಶಿವು ಖನ್ನೂರ, ಎಚ್.ಬಿ. ಚೂಡಾಮಣಿ, ಸುಹಾಸಿನಿ ಕುಕಡೊಳ್ಳಿ, ವಿಜಯಲಕ್ಷ್ಮಿ ಕೊಟಗಿ, ದೇವಕಿ ಧರ್ಮಟ್ಟ, ಶಿ.ಕಾ. ಬಡಿಗೇರ, ರೂಪೇಶ್ ಸಾಗರ, ಮಹಾಲಕ್ಷ್ಮಿ ಕುಕನೂರ, ವಿಜಯಲಕ್ಷ್ಮೀ ಕಲಾಲ್, ಮೋಹನ ಗೌಡ ಹೆಗ್ರೆ, ಮಾಲಾ ಬಡಿಗೇರ, ಭಾರತಿ ಹೆಚ್.ಎನ್., ನಂದಾ ಪ್ರೇಮಕುಮಾರ್, ಮಂಜುನಾಥ ಮಾಡಲಗೇರಿ, ಪಂಪಾಪತಿ ಎಸ್. ರಾಯಚೂರು ಇವರುಗಳು ಭಾಗವಹಿಸಲಿರುವರು. ಬಳಿಕ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲೂಕು ಅಧ್ಯಕ್ಷರಾದ ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.