ಸಾಲಿಗ್ರಾಮ : ಸಮಸ್ತರು ರಂಗ ಸಂಶೋಧನ ಕೇಂದ್ರ ಬೆಂಗಳೂರು ಪ್ರಸ್ತುತ ಪಡಿಸುವ ದೇಶೀ ಖ್ಯಾತಿಯ ರಂಗ ನಿರ್ದೇಶಕ ಸಾಂಸ್ಕೃತಿಕ ಸಂಘಟಕ ಗೋಪಾಲಕೃಷ್ಣ ನಾಯರಿಯವರ ಎರಡನೇ ವರ್ಷದ ಸಂಸ್ಮರಣಾ ಕಾರ್ಯಕ್ರಮ ಮತ್ತು ‘ಶ್ರೀ ಗೋಪಾಲಕೃಷ್ಣ ನಾಯರಿ ರಂಗ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ದಿನಾಂಕ 19 ಜನವರಿ 2025ರಂದು ಗುಂಡ್ಮಿ ಸಾಲಿಗ್ರಾಮ ಸದಾನಂದ ರಂಗ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ಇದರ ಅಧ್ಯಕ್ಷರಾದ ಶ್ರೀ ಆನಂದ ಸಿ. ಕುಂದರ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಅಧ್ಯಕ್ಷರಾದ ಶ್ರೀ ವೈಕುಂಠ ಹೇರ್ಳೆ ಇವರು ಸಂಸ್ಮರಣಾ ಮಾತುಗಳನ್ನಾಡಲಿರುವರು. ಶ್ರೀ ಗೋಪಾಲಕೃಷ್ಣ ದೇವರು ಭಟ್ಟ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಉದಯೋನ್ಮುಖ ಬಾಲ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಾಲಿಗ್ರಾಮದ ಆರಾಧನಾ ಮೇಲೋಡಿಸ್ (ರಿ.) ಇವರಿಂದ ಭಾವಗೀತೆ ಮತ್ತು ಜಾನಪದ ಹಾಡುಗಳು ಗಾಯನ ಪ್ರಸ್ತುತಗೊಳ್ಳಲಿದೆ.