ಬೆಂಗಳೂರು: ಬೆಂಗಳೂರು ನಗರ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಸಹಯೋಗದೊಂದಿಗೆ ‘ಕನ್ನಡ ಜೈನ ಸಾಹಿತ್ಯ ಚರಿತ್ರೆ’ಯ ಆರು ಸಂಪುಟಗಳ ಲೋಕಾರ್ಪಣಾ ಸಮಾರಂಭವು ದಿನಾಂಕ 11 ಜನವರಿ 2025ರಂದು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಸಾಹಿತಿ ಪ್ರೊ. ಹಂಪನಾ ಮಾತನಾಡಿ “ಯಾವುದೇ ಭಾಷೆಯಲ್ಲಿ ಕಾಲ ಕಾಲಕ್ಕೆ ಸಾಹಿತ್ಯ ಚರಿತ್ರೆಗಳು ರಚನೆಯಾಗಬೇಕು. ಆಗ ಮಾತ್ರ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಮಹತ್ವ ಮನದಟ್ಟಾಗುತ್ತದೆ. ತುಂಬಾ ಪ್ರಾಚೀನವಾದ ಹಾಗೂ ವಿಸ್ತಾರವಾದ ಕನ್ನಡ ಸಾಹಿತ್ಯದ ಅಧ್ಯಯನಕ್ಕೆ ಈ ದಿನ ಬಿಡುಗಡೆ ಆಗಿರುವ ‘ಕನ್ನಡ ಜೈನ ಸಾಹಿತ್ಯ ಚರಿತ್ರೆ’ಯ ಸಂಪುಟಗಳು ತುಂಬಾ ಉಪಯುಕ್ತ” ಎಂದು ಹೇಳಿದರು.
ಕೃತಿಯ ಕುರಿತು ಮಾತನಾಡಿದ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯಂ “ಈ ಕೃತಿಯ ರಚನೆಯ ಹಿಂದೆ 50 ರಿಂದ 60ವರ್ಷಗಳ ಗಂಭೀರವಾದ ಅಧ್ಯಯನವಿದೆ ಎಂಬುದು ಎದ್ದು ಕಾಣುತ್ತದೆ. ಈ ರೀತಿಯ ಆಕರಕೃತಿಗಳು ಹೆಚ್ಚು ಹೆಚ್ಚು ಚರ್ಚೆಯಾಗಲಿ. ಈ ಕೃತಿಯಲ್ಲಿ ಶ್ರೀವಿಜಯನಿಂದ ಇಲ್ಲಿಯವರೆಗಿನ ಸಾಹಿತ್ಯ ಮತ್ತು ಸಂಸ್ಕೃತಿಯ ತಿರುಳನ್ನು ಅರ್ಥೈಸಿರುವ ಕ್ರಮ ತುಂಬಾ ವಿಶಿಷ್ಟವಾಗಿದೆ” ಎಂದು ಸಂಪುಟಗಳ ಮಹತ್ವದ ಬಗ್ಗೆ ತಿಳಿಸಿದರಮತ್ತೆರಡು ಕೃತಿಗಳ ಬಗ್ಗೆ ಮಾತನಾಡಿದ ವಿಮರ್ಶಕಿ ಎಂ. ಎಸ್. ಆಶಾದೇವಿ “ಕನ್ನಡ ಸಾಹಿತ್ಯ ಧಾರ್ಮಿಕ ಸಾಮರಸ್ಯಕ್ಕೆ ಈ ಕೃತಿಗಳು ಹೆಚ್ಚು ಒತ್ತು ನೀಡಿವೆ. ಮಾನವೀಯ ಮೌಲ್ಯಗಳನ್ನು ಒಳಗೊಂಡ ಹಲವಾರು ನಿದರ್ಶನಗಳ ಮೂಲಕ ಈ ಕೃತಿಗಳಲ್ಲಿ ಚರ್ಚಿಸಲಾಗಿದೆ” ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಾಡೋಜ ವೂಡೇ ಪಿ. ಕೃಷ್ಣ ಮಾತನಾಡಿ “ ‘ಕನ್ನಡ ಜೈನ ಸಾಹಿತ್ಯ ಚರಿತ್ರೆ’ ರಚನೆಯ ಈ ಕಾರ್ಯ ಅತ್ಯಂತ ಮಹತ್ವಪೂರ್ಣವಾದುದು. ಈ ಮಹೋನ್ನತ ಕಾರ್ಯವು ಬರೀ ಇಂದಿಗಷ್ಟೇ ಅಲ್ಲ ಎಂದೆಂದಿಗೂ ಚಿರಸ್ಥಾಯಿಯಾಗಿ ಉಳಿಯುತ್ತದೆ” ಎಂದರು. ಕಾರ್ಯಕ್ರಮದಲ್ಲಿ ನಾಡಿನ ಪ್ರಖ್ಯಾತ ವಿದ್ವಾಂಸರಾದ ಡಾ. ಪಿ. ವಿ. ನಾರಾಯಣ, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ಧರಣೇಂದ್ರ ಕುರಕುರಿ ಉಪಸ್ಥಿತರಿದ್ದರು.ಸಮಾರಂಭದಲ್ಲಿ ಭಾಗವಹಿಸಿದ್ದ ಎಲ್ಲರನ್ನು ಬೆಂಗಳೂರು ನಗರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ. ಪ್ರಕಾಶ್ ಮೂರ್ತಿಯವರು ಸ್ವಾಗತಿಸಿ, ಶೇಷಾದ್ರಿಪುರಂ ಕಾಲೇಜಿನ ಅಧ್ಯಾಪಕರಾದ ಡಾ. ಮಹೇಶ್ವರಿ ಕಾರ್ಯಕ್ರಮವನ್ನು ನಿರೂಪಿಸಿ, ಸಾಹಿತಿ ಡಾ. ರಾಮಲಿಂಗೇಶ್ವರ(ಸಿಸಿರಾ) ಎಲ್ಲರಿಗೂ ವಂದನೆಗಳನ್ನು ಅರ್ಪಿಸಿದರು.
Subscribe to Updates
Get the latest creative news from FooBar about art, design and business.
ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಲೋಕಾರ್ಪಣೆಗೊಂಡ ‘ಕನ್ನಡ ಜೈನ ಸಾಹಿತ್ಯ ಚರಿತ್ರೆ’
No Comments2 Mins Read