ಬೆಂಗಳೂರು : ತರಬೇತಿ ಮತ್ತು ಪ್ರದರ್ಶನ ಸೇವಾ ಸಂಸ್ಥೆ ಯಕ್ಷತರಂಗ ಬೆಂಗಳೂರು (ರಿ.) ಇದರ ವತಿಯಿಂದ ಸುರೇಂದ್ರ ಪೂಜಾರಿ ಮತ್ತು ಸ್ನೇಹಿತರ ಸೇವೆಯಾಟ ಪ್ರಯುಕ್ತ ‘ಶ್ರೀ ದೇವಿ ಮಹಾತ್ಮೆ’ ಕನ್ನಡ ಯಕ್ಷಗಾನ ಪುಣ್ಯ ಕಥಾ ಪ್ರಸಂಗ ಪ್ರದರ್ಶನವನ್ನು ದಿನಾಂಕ 18 ಜನವರಿ 2025ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಗುಬ್ಬಲಾಳ ಕನಕಪುರ ರಸ್ತೆಯಲ್ಲಿರುವ ಹೊಟೇಲ್ ಸಿಂಧೂರ ಗಾರ್ಡೇನಿಯಾ ಪಾರ್ಕಿಂಗ್ ಸ್ಥಳದಲ್ಲಿ ಆಯೋಜಿಸಲಾಗಿದೆ.