ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಆಶ್ರಯದಲ್ಲಿ “ಸಿನ್-1999 ಶ್ವೇತಯಾನ -98” ಕಾರ್ಯಕ್ರಮದ ಅಂಗವಾಗ “ಅರ್ಥಾಂಕುರ-12 ” ಕಾರ್ಯಕ್ರಮವು ದಿನಾಂಕ 12 ಜನವರಿ 2025 ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಯಕ್ಷಗಾನದ ಪ್ರಸಿದ್ದ ಅರ್ಥದಾರಿ ಜಬ್ಬಾರ್ ಸಮೋ ಮಾತನಾಡಿ “ಅತ್ಯಂತ ತ್ವರಿತ ಗತಿಯಿಂದ ಕಲಾ ವಲಯದಲ್ಲಿ ಪ್ರಜ್ವಲಿಸಲು ಹಿರಿಯ ಕಲಾವಿದರ ಸಾಂಗತ್ಯದ ಜೊತೆಗೆ ಅರ್ಥಗಾರಿಕೆಯ ಒಡನಾಟ ಹೆಚ್ಚು ಪೂರಕ. ಹಿರಿಯ ಕಲಾವಿದರಿಂದ ಕಿರಿಯರೂ, ಕಿರಿಯ ಕಲಾವಿದರಿಂದ ಹಿರಿಯರೂ ಕಲಿಯುವಂತದ್ದು ಬಹಳ ಇರುತ್ತದೆ. ಯಾರೂ ಕಡಿಮೆಯಲ್ಲ ಯಾರೂ ಹೆಚ್ಚಲ್ಲ. ಹಿರಿಯ ಕಲಾವಿದರು ಕಿರಿಯರನ್ನು ತೆಕ್ಕೈಸಿಕೊಂಡು ನಡೆಸಿದರೆ ಭವಿಷ್ಯ ರೂಪಿಸುವ ಕಿರಿಯ ಕಲಾವಿದರು ಮುಂದಿನ ವೇದಿಕೆಗೆ ಅರ್ಥದಾರಿಗಳಾಗಿ ಬೆಳೆಯುವುದರಲ್ಲಿ ಸಂಶಯವಿಲ್ಲ” ಎಂದರು.
ಖ್ಯಾತ ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್, ಕಾರ್ಯಕ್ರಮದ ನೇತಾರ ಡಾ. ಜಗದೀಶ್ ಶೆಟ್ಟಿ, ಸತೀಶ್ ಶೆಟ್ಟಿ ಅಂಪಾರು, ಭಾಗವತ ದರ್ಶನ್ ಗೌಡ, ಕಿಶನ್ ಪೂಜಾರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬಳಿಕ ಯಕ್ಷಗಾನ ತಾಳಮದ್ದಳೆ ‘ವಾಮನ ಚರಿತ್ರೆ’ ರಂಗ ಪ್ರಸ್ತುತಿಗೊಂಡಿತು.