ಬೆಂಗಳೂರು : ರಂಗಚಂದಿರ (ರಿ.) ಆಯೋಜಿಸಿರುವ ‘ರಂಗಕರ್ಮಿ ಟೆಲಿಕಾಂ ದತ್ತಾತ್ರೇಯ ನೆನಪು’ ಕಾರ್ಯಕ್ರಮದ ಪ್ರಯುಕ್ತ ಗಾಯನ, ರಂಗ ಗೌರವ ಮತ್ತು ನಾಟಕ ಪ್ರದರ್ಶನವು ದಿನಾಂಕ 29 ಜನವರಿ 2025ರಂದು ಸಂಜೆ 4-00 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯಲಿದೆ.
ಸಂಜೆ 4-00 ಗಂಟೆಗೆ ಕುವೆಂಪು ಪ್ರಕಾಶ್ ತಂಡದವರಿಂದ ಗಾಯನ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ. 6-00 ಗಂಟೆಗೆ ನಡೆಯಲಿರುವ ವೇದಿಕೆ ಕಾರ್ಯಕ್ರಮದಲ್ಲಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಶ್ರೀ ಪ್ರಕಾಶಮೂರ್ತಿ ಇವರ ಅಧ್ಯಕ್ಷತೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀ ಬಲವಂತರಾವ್ ಪಾಟೀಲ್ ಇವರು ಉದ್ಘಾಟನೆ ಮಾಡಲಿರುವರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಬೈರಮಂಗಲ ರಾಮೇಗೌಡ, ಹಿರಿಯ ಪತ್ರಕರ್ತರಾದ ಶ್ರೀ ರಾಜು ಮಳವಳ್ಳಿ, ರಂಗ ನಿರ್ದೇಶಕರಾದ ಶ್ರೀ ವೆಂಕಟಾಚಲ, ಭಾರತ ತಂಡ ವಾಲಿಬಾಲ್ ಮುಖ್ಯ ತರಬೇತಿದಾರರಾದ ಶ್ರೀ ಕೆ.ಆರ್. ಲಕ್ಷ್ಮೀನಾರಾಯಣ ಮತ್ತು ‘ಕುಹೂ ಕುಹೂ’ ಸಂಗೀತ ಸಂಸ್ಥೆಯ ನಿರ್ದೇಶಕರಾದ ಶ್ರೀ ಸುರೇಶ್ ಬಾಬು ಇವರಿಗೆ ರಂಗ ಗೌರವ ನೀಡಿ ಸನ್ಮಾನಿಸಲಾಗುವುದು. ಸಂಜೆ 7-00 ಗಂಟೆಗೆ ಎಂ.ಎಸ್.ಐ.ಎಲ್. ವೆಂಕಟಾಚಲ ಇವರ ನಿರ್ದೇಶನದಲ್ಲಿ ಸಮನ್ವಯ ಬೆಂಗಳೂರು ಪ್ರಸ್ತುತ ಪಡಿಸುವ ‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’ ನಕ್ಕು ನಲಿಸುವ ನಾಟಕ ಪ್ರದರ್ಶನಗೊಳ್ಳಲಿದೆ.