ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಪಾಕ್ಷಿಕ ತಾಳಮದ್ದಳೆ ಹಾಗೂ ಇತ್ತೀಚೆಗೆ ನಿಧನರಾದ ಹಿರಿಯ ಯಕ್ಷಗಾನ ಕಲಾವಿದ ಪಕಳಕುಂಜ ಶ್ಯಾಮ್ ಭಟ್ ಇವರಿಗೆ ನುಡಿನಮನ ಕಾರ್ಯಕ್ರಮವು ದಿನಾಂಕ 18 ಜನವರಿ 2025ರಂದು ಶ್ರೀ ಆಂಜನೇಯ ಮಂತ್ರಾಲಯದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಭಾಸ್ಕರ್ ಬಾರ್ಯ ಮತ್ತು ಕಲಾವಿದ ಜಯರಾಮ ದೇವಸ್ಯ ನುಡಿನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ದಿವಂಗತರ ಸಹೋದರಿಯರು, ಬಂಧುಗಳು ಉಪಸ್ಥಿತರಿದ್ದರು. ಬಳಿಕ ‘ಭೀಮ ದ್ರೌಪದೀ ಸ೦ವಾದ – ವಿದುರ ಭಕ್ತಿ’ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಆನಂದ ಸವಣೂರು, ಶ್ರೀಪತಿ ಭಟ್ ಉಪ್ಪಿನಂಗಡಿ, ಕುಮಾರಿ ಶರಣ್ಯ ನೆತ್ತೆರ್ಕೆರೆ ಸಹಕರಿಸಿದರು. ಮುಮ್ಮೇಳದಲ್ಲಿ ಜಯರಾಮ ದೇವಸ್ಯ (ಭೀಮ), ಭಾಸ್ಕರ್ ಬಾರ್ಯ (ದ್ರೌಪದೀ ಮತ್ತು ಶ್ರೀ ಕೃಷ್ಣ), ತಾರಾನಾಥ ಸವಣೂರು (ವಿಧುರ) ಸಹಕರಿಸಿದರು. ಟಿ. ರಂಗನಾಥ ರಾವ್ ಸ್ವಾಗತಿಸಿ, ವಂದಿಸಿದರು.