ಬೆಂಗಳೂರು: ಎಸ್.ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಹಮ್ಮಿಕೊಂಡಿದ್ದ ‘ಎಸ್. ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 19 ಜನವರಿ 2025ರ ಭಾನುವಾರದಂದು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ ಮರಾಠಿ ಅನುವಾದಕಿ ಹಾಗೂ ಲೇಖಕಿಯಾದ ಉಮಾ ಕುಲಕರ್ಣಿ ಮಾತನಾಡಿ “ಕಾದಂಬರಿಕಾರ ಎಸ್. ಎಲ್. ಭೈರಪ್ಪ ಅವರ ಬರಹದ ಶೈಲಿ ಭಿನ್ನವಾಗಿದೆ. ಇದರಿಂದಾಗಿಯೇ ಅವರಿಗೆ ಮರಾಠಿಯಲ್ಲಿ ದೊಡ್ಡ ಓದುಗರ ವಲಯವಿದೆಯೇ ಹೊರತು, ಮಹಾರಾಷ್ಟ್ರದಲ್ಲಿ ಆರೆಸ್ಸೆಸ್ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಪ್ರಬಲವಾಗಿರುವುದು ಕಾರಣವಲ್ಲ. ಮಹಾರಾಷ್ಟ್ರದಲ್ಲಿ ಆರೆಸ್ಸೆಸ್ ಪ್ರಬಲವಾಗಿರುವುದರಿಂದ ಅಲ್ಲಿ ಭೈರಪ್ಪ ಅವರ ಕೃತಿಗಳಿಗೆ ಹೆಚ್ಚು ಬೇಡಿಕೆಯಿದೆಯೆಂದು ಕನ್ನಡದ ಕೆಲ ಸಾಹಿತಿಗಳು ಅಭಿಪ್ರಾಯಪಟ್ಟಿದ್ದರು. ಆದರೆ ವಾಸ್ತವ ಬೇರೆಯಾಗಿದ್ದು, ಓದುಗ ಬಳಗ ಹೆಚ್ಚಲು ಅವರ ಶೈಲಿಯೇ ಮುಖ್ಯ ಕಾರಣ. ಪುಣೆಗೆ ಅವರು ಬರುತ್ತಾರೆಂದು ತಿಳಿದರೆ ದೊಡ್ಡ ಸಂಖ್ಯೆಯಲ್ಲಿ ಜನರು ಅವರನ್ನು ನೋಡಲು ಕಾದು ಕುಳಿತಿರುತ್ತಾರೆ” ಎಂದರು.
ಲೇಖಕಿ ಸಹನಾ ವಿಜಯಕುಮಾರ್ ಮಾತನಾಡಿ “ಭೈರಪ್ಪ ಅವರನ್ನು ಮರಾಠಿ ಓದುಗರಿಗೆ ತಲುಪಿಸಿದ ಶ್ರೇಯಸ್ಸು ಉಮಾ ಕುಲಕರ್ಣಿ ಅವರಿಗೆ ಸಲ್ಲುತ್ತದೆ. ಕನ್ನಡದ ನಂತರ ಮರಾಠಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಓದುಗರನ್ನು ಭೈರಪ್ಪ ಹೊಂದಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರು ತಮ್ಮ ಕೃತಿಯನ್ನು ಮರಾಠಿ ಓದುಗರಿಗೆ ತಲುಪಿಸಿದಕ್ಕಾಗಿ ಧನ್ಯವಾದ ತಿಳಿಸಿದರು. ಲೇಖಕಿಯರಾದ ಅಂಜಲಿ ಜೋಶಿ, ಉಮಾ ರಾಮರಾವ್, ಭೈರಪ್ಪ ಅವರ ಪತ್ನಿ ಸರಸ್ವತಿ, ಪ್ರತಿಷ್ಠಾನದ ಟ್ರಸ್ಟಿ ಉದಯಶಂಕರ್, ಪ್ರತಿಷ್ಠಾನದ ಕಾರ್ಯದರ್ಶಿ ಪ್ರೊ. ಜಿ. ಎಲ್. ಶೇಖರ್ ಹಾಗೂ ಸಾಹಿತ್ಯ ಭಂಡಾರದ ರಾಜ ಉಪಸ್ಥಿತರಿದ್ದರು. ಈ ಪ್ರಶಸ್ತಿಯು ರೂಪಾಯಿ 1 ಲಕ್ಷ ನಗದು ಒಳಗೊಂಡಿದೆ.
Subscribe to Updates
Get the latest creative news from FooBar about art, design and business.
ಮರಾಠಿ ಲೇಖಕಿ ಉಮಾ ಕುಲಕರ್ಣಿಗೆ ‘ಎಸ್. ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ’
No Comments1 Min Read
Previous Articleಕೊಡಗಿನ ಕವಿ ಸಾಹಿತಿ ಕಲಾವಿದರ ಪರಿಚಯ ಮಾಲಿಕೆ 62 : ಕೃಪಾ ದೇವರಾಜ್