ಕಾಸರಗೋಡು : ಕಾಸರಗೋಡಿನ ಕನ್ನಡ ಭವನದ ಆಶ್ರಯದಲ್ಲಿ ದಿನಾಂಕ 02 ಫೆಬ್ರವರಿ 2025ರಂದು ಅಪರಾಹ್ನ 2-30 ಗಂಟೆಗೆ ಕಾಸರಗೋಡಿನ ಕನ್ನಡ ಭವನದಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ನೂತನ ಸಮಿತಿಯ ಸಮಾಲೋಚನೆ ಹಾಗೂ ಚುಟುಕು ಕವಿಗೋಷ್ಠಿಯು ನಡೆಯಲಿದೆ.
ಈ ಕವಿಗೋಷ್ಠಿಯಲ್ಲಿ ಕಾಸರಗೋಡು ಜಿಲ್ಲೆಯ ಕವಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಆಸಕ್ತರು ದಿನಾಂಕ 26 ಜನವರಿ 2025ರ ಮುಂಚಿತವಾಗಿ 9447490344 ಸಂಖ್ಯೆಯಲ್ಲಿ ಹೆಸರು ನೊಂದಾಯಿಸಲು ತಿಳಿಸಿದೆ.