ಮಂಗಳೂರು : ನವೋದಯ ಮಹಿಳಾ ಮಂಡಳಿ ಹಾಗೂ ನವೋದಯ ಅಂಗನವಾಡಿ ಕೇಂದ್ರ ಇದರ 40ನೇ ವರ್ಷದ ಸಾಧನಾ ಸಂಭ್ರಮ ಕಾರ್ಯಕ್ರಮವು ದಿನಾಂಕ 13 ಜನವರಿ 2025ರಂದು ಕದ್ರಿ ದೇವಸ್ಥಾನದ ಮಲ್ಲಿಕಾ ಕಲಾವೃಂದದ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ಶೋಭಾ ಬಿ. ಜಿ. ಮಾತನಾಡಿ “ಮಹಿಳಾ ಸಬಲೀಕರಣದ ಕಾರ್ಯದಲ್ಲಿ ನವೋದಯ ಮಹಿಳಾ ಮಂಡಳಿ ಹಾಗೂ ಅಂಗನವಾಡಿ ಕೇಂದ್ರದ ಕಾರ್ಯ ಮಾದರಿಯಾಗಿದೆ.” ಎಂದು ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಸಾಹಿತ್ಯ, ಯಕ್ಷಗಾನ, ರಂಗಭೂಮಿ, ಮಾಧ್ಯಮ ಹಾಗೂ ವಿವಿಧ ಕಲಾರಂಗದಲ್ಲಿ ಸಾಧನೆಗೈದ ತುಳು ಜಾನಪದ ವಿದ್ವಾಂಸ ಕದ್ರಿ ನವನೀತ ಶೆಟ್ಟಿ ಇವರಿಗೆ ‘ಕದ್ರದ ಬೊಳ್ಳಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹಾಗೂ 94 ವರ್ಷ ಪ್ರಾಯದ ನಾಟಿ ವೈದ್ಯೆ ಯಮುನಾ ಬೈದೆತಿ, ಪ್ರತಿಭಾನ್ವಿತ ಹಳೆ ವಿದ್ಯಾರ್ಥಿಗಳಾದ ರಘುರಾಜ್ ಕದ್ರಿ, ಜೀವನ್ ಆಚಾರ್ಯ, ಅಪೇಕ್ಷ ವೈ. ಜೋಗಿ, ರಜಿತ್ ಕದ್ರಿ, ಮೊದಲಾದ ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಮಹಿಳಾ ಮಂಡಳಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಶ್ರೀಮತಿ ಸೇಸಮ್ಮ , ಶ್ರೀಮತಿ ರಾಜೀವಿ ಸದಾಶಿವ ಕುಲಾಲ್, ಶ್ರೀಮತಿ ಮಮತಾ ದೇವದಾಸ್, ಶ್ರೀಮತಿ ರಾಜೇಶ್ವರಿ ರವೀಂದ್ರ, ಶ್ರೀಮತಿ ಸಾವಿತ್ರಿ ಉಮೇಶ್, ಶ್ರೀಮತಿ ರೇಖಾ ರಂಜಿತ್ ಇವರನ್ನು ಗೌರವಿಸಲಾಯಿತು. 42 ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದ ಶ್ರೀಮತಿ ಜಯಲಕ್ಷ್ಮೀ ಬಿ. ಆರ್. ಇವರಿಗೆ ಮಹಿಳಾ ಮಂಡಳಿ, ಸ್ತ್ರೀ ಶಕ್ತಿ ಗುಂಪುಗಳು ಹಾಗೂ ಹಳೆ ವಿದ್ಯಾರ್ಥಿಗಳಿಂದ ಗೌರವ ವಂದನಾ ಕಾರ್ಯಕ್ರಮ ನಡೆಯಿತು. ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ 40 ವರ್ಷದ ಕಾರ್ಯಕ್ರಮಗಳ ಸ್ಮರಣ ಸಂಚಿಕೆಯನ್ನು ಲೋಕಾರ್ಪಣೆಗೊಳಿಸಿದರು.
ವೇದಿಕೆಯಲ್ಲಿ ಜಿಲ್ಲಾ ನಿರೂಪಣಾಧಿಕಾರಿಗಳಾದ ಶ್ರೀಕುಮಾರ್, ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀಮತಿ ಶ್ವೇತಾ, ಶ್ರೀ ಕೃಷ್ಣ ಜನ್ಮ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಗೋಕುಲ್ ಕದ್ರಿ, ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ರಾಜೇಂದ್ರ ಕುಮಾರ್ ಕೆಳಗಿನಮನೆ, ಮಂಗಳೂರು ತಾಲೂಕು ಮಹಿಳಾಮಂಡಲಗಳ ಒಕ್ಕೂಟದ ಅಧ್ಯಕ್ಷೆಯಾದ ಶ್ರೀಮತಿ ಚಂಚಲಾ ತೇಜೋಮಯ, ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಸಂಘದ ಸ್ಥಾಪಕ ಕಾರ್ಯದರ್ಶಿಯಾದ ಶ್ರೀಮತಿ ವಿಜಯ ಈಶ್ವರಗೌಡ, ಮಾಜಿ ಕಾರ್ಪೊರೇಟರ್ ಪ್ರಕಾಶ್ ಬಿ. ಸಾಲ್ಯಾನ್ ಹಾಗೂ ಮಹಿಳಾ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶ್ರೀಮತಿ ವಿಜಯಲಕ್ಷ್ಮಿ ಬಿ. ಶೆಟ್ಟಿ ಪ್ರಸ್ತಾವನೆಗೈದು, ಶ್ರೀಮತಿ ರೇಖಾ ರಂಜಿತ್ ಹಾಗೂ ರಘುರಾಜ್ ಕದ್ರಿ ಕಾರ್ಯಕ್ರಮವನ್ನು ನಿರೂಪಿಸಿದರು.
Subscribe to Updates
Get the latest creative news from FooBar about art, design and business.