ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಮತ್ತು ನಾಗರಿಕ ಸಲಹಾ ಸಮಿತಿ (ರಿ.) ಸುರತ್ಕಲ್ ಈ ಸಂಸ್ಥೆಗಳು ಜಂಟಿಯಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಪ್ರಸ್ತುತ ಪಡಿಸುವ ‘ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ’ಯನ್ನು ದಿನಾಂಕ 26 ಜನವರಿ 2025ರಂದು ಸಂಜೆ 5-30 ಗಂಟೆಗೆ ಸುರತ್ಕಲ್ಲಿನ ಅನುಪಲ್ಲವಿಯ ಶ್ರೀ ವಿಶ್ವೇಶ ತೀರ್ಥ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಂಗಳೂರಿನ ಕೃಷ್ಣಶ್ರೀ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗುವ ಈ ಸಂಗೀತ ಕಛೇರಿಯಲ್ಲಿ ಯುವ ಕಲಾ ಮಣಿ ವಿದ್ವಾನ್ ಅನೀಶ್ ವಿ. ಭಟ್ ಇವ ಶಿಷ್ಯ ಬೆಂಗಳೂರಿನ ಪ್ರದ್ಯುಮ್ನ ಭಟ್ ಇವರ ಹಾಡುಗಾರಿಕೆಗೆ ಪುತ್ತೂರಿನ ತನ್ಮಯೀ ಉಪ್ಪಂಗಳ ಮಯಲಿನ್ ಮತ್ತು ಮಂಗಳೂರಿನ ಯುವ ಕಲಾ ಮಣಿ ಕೃಷ್ಣ ಪವನ್ ಕುಮಾರ್ ಮೃದಂಗದಲ್ಲಿ ಸಾಥ್ ನೀಡಲಿದ್ದಾರೆ.
ಮಣಿ ಕೃಷ್ಣಸ್ವಾಮಿ ಆಕಾಡೆಮಿಯ ಕಾರ್ಯದರ್ಶಿಯಾದ ಪಿ. ನಿತ್ಯಾನಂದ ರಾವ್ ಹಾಗೂ ಸುರತ್ಕಲ್ ನಾಗರಿಕ ಸಲಹಾ ಸಮಿತಿ ಅಧ್ಯಕ್ಷರಾದ ಡಾ. ಕೆ. ರಾಜಮೋಹನ್ ರಾವ್ ತಮಗೆಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.