ಉಡುಪಿ : ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನ ಪ್ರಾಧ್ಯಾಪಕರಾದ ಧೀರಜ್ ಬೆಳ್ಳಾರೆ ಇವರಿಗೆ ಕರ್ನಾಟಕ ಅಚಿವರ್ಸ್ ಬುಕ್ ಆಫ್ ರೆಕಾರ್ಡ್ಸ್ (ಕೆ.ಎ.ಬಿ.ಆರ್.) ವತಿಯಿಂದ ದಿನಾಂಕ 10 ಜನವರಿ 2025ರಂದು ರಾಷ್ಟ್ರೀಯ ದಾಖಲೆ ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಯಿತು.
ಇವರು ಸುಳ್ಯ ತಾಲೂಕಿನ ಕಳಂಜದ ಯುವ ಮತ್ತು ಉತ್ಸಾಹಭರಿತ ಬರಹಗಾರಾಗಿದ್ದು, ‘ಸ್ಟೇಟಸ್ ಕಥೆಗಳು’ ಎಂಬ ಶೀರ್ಷಿಕೆಯ ಸರಣಿಯಡಿಯಲ್ಲಿ ಜುಲೈ 2020ರಿಂದ ಡಿಸೆಂಬರ್ 2024ರವರೆಗೆ 1,635 ಸಣ್ಣ ಕಥೆಗಳನ್ನು ಬರೆಯುವ ಮೂಲಕ ಈ ಗಮನಾರ್ಹ ಸಾಧನೆಯನ್ನು ಮಾಡಿದ್ದಾರೆ. ಈ ಕಥೆಗಳು ಕನ್ನಡ ವೆಬ್ ಸೈಟ್ ನಲ್ಲಿ ನಿರಂತರವಾಗಿ ಪ್ರಕಟವಾಗುತ್ತಿದ್ದು, ನೈತಿಕ ಮೌಲ್ಯಗಳು, ಜೀವನ ಪಾಠಗಳು ಮತ್ತು ಪ್ರಬಲ ಸಾಮಾಜಿಕ ಸಂದೇಶಗಳನ್ನು ಉತ್ತೇಜಿಸಲು ಹೆಸರುವಾಸಿಯಾದ ಇವರ ಕಥೆಗಳು ಓದುಗರನ್ನು ಶ್ರೀಮಂತಗೊಳಿಸುವುದಲ್ಲದೆ, ಸಾಮಾಜಿಕ ಯೋಗಕ್ಷೇಮಕ್ಕೂ ಪ್ರಮುಖ ಕೊಡುಗೆ ನೀಡಿವೆ. ಇವರ ಈ ಸಾಧನೆಗೆ ಸಂಸ್ಥೆಯ ಸಂಸ್ಥಾಪಕರು ಸಿ.ಎ. ಗೋಪಾಲಕೃಷ್ಣ ಭಟ್ ಹಾಗೂ ಶಿಕ್ಷಕ ಶಿಕ್ಷಕೇತರ ವೃಂದದವರು ಶುಭಹಾರೈಸಿದ್ದಾರೆ. ಮಣಿಮಜಲು ಗುರುವಪ್ಪ ಮತ್ತು ಸುಮತಿ ದಂಪತಿಗಳ ಪುತ್ರನಾಗಿರುವ ಧೀರಜ್ ಬಾಳಿಲ ವಿದ್ಯಾಬೋಧಿನಿ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳಾರೆಯ ಹಳೆಯ ವಿದ್ಯಾರ್ಥಿ.