ಬೆಂಗಳೂರು : ರಂಗರಥ – ಭಾರತೀಯ ಪ್ರದರ್ಶನ ಕಲಾ ಸಂಸ್ಥೆ (ರಿ.) ಅರ್ಪಿಸುವ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವರ ಸಹಯೋಗದೊಂದಿಗೆ 90 ನಿಮಿಷಗಳ ಸಾಂಸಾರಿಕ ಕನ್ನಡ ಹಾಸ್ಯ ನಾಟಕ ‘ಇದ್ದಾಗ ನಿಮ್ದು ಕದ್ದಾಗ ನಮ್ದು’ ಪ್ರದರ್ಶನವನ್ನು ದಿನಾಂಕ 25 ಜನವರಿ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರಂ 14ನೇ ಅಡ್ಡ ರಸ್ತೆಯಲ್ಲಿರುವ ಸೇವಾ ಸದನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಮೂಲ : ದಾರಿಯೋ ಫೋ (ದ ವರ್ಚುವಸ್ ಬರ್ಗಲರ್) ಕನ್ನಡಕ್ಕೆ ಅನುವಾದ : ಕೆ.ವಿ. ಅಕ್ಷರ, ರಂಗಪಠ್ಯ : ಆಸಿಫ್ ಕ್ಷತ್ರಿಯ, ಸಂಗೀತ: ಭಿನ್ನಷಡ್ಜ ಮತ್ತು ಆಸಿಫ್ ಕ್ಷತ್ರಿಯ ಮತ್ತು ಶ್ವೇತ ಶ್ರೀನಿವಾಸ್ ಇವರ ನಿರ್ದೇಶನದಲ್ಲಿ ಈ ನಾಟಕ ಪ್ರದರ್ಶನಗೊಳ್ಳಲಿದೆ. ನಾಟಕದ ಟಿಕೆಟ್ ಗಳಿಗಾಗಿ 8050157443 / 9448276776 ಸಂಪರ್ಕಿಸಿ.