25 ಮಾರ್ಚ್ 2023, ಉಡುಪಿ: ರಂಗಭೂಮಿ (ರಿ.) ಉಡುಪಿ, ಎಂ.ಜಿ.ಎಂ. ಕಾಲೇಜು ಉಡುಪಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ “ವಿಶ್ವ ರಂಗಭೂಮಿ ದಿನಾಚರಣೆ-2023″ಯು ದಿನಾಂಕ 27.03.2023, ಸೋಮವಾರ ಸಂಜೆ ಸಮಯ: 5.45ಕ್ಕೆ ನೂತನ ರವೀಂದ್ರ ಮಂಟಪ, ಎಂ.ಜಿ.ಎಂ. ಕಾಲೇಜು ಉಡುಪಿ ಇಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಪ್ರೊ. ಜಯಪ್ರಕಾಶ್ ಮಾವಿನಕುಳಿ, ಹಿರಿಯ ನಾಟಕಕಾರರು, ಸಾಹಿತಿ, ರಂಗ ನಿರ್ದೇಶಕರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಡಾ. ತಲ್ಲೂರು ಶಿವರಾಮ ಶೆಟ್ಟಿ, ಅಧ್ಯಕ್ಷರು, ರಂಗಭೂಮಿ (ರಿ.) ಉಡುಪಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ – ಶ್ರೀ ಸಂತೋಷ್ ಕೆ. ಶೆಟ್ಟಿ, ಅಂಗಡಿಗುತ್ತು, ಕಳತ್ತೂರು, ಶ್ರೀ ರಾಮ್ ಶೆಟ್ಟಿ, ರಂಗಕರ್ಮಿ, ಭೂಮಿಕಾ (ರಿ.) ಹಾರಾಡಿ, ಪ್ರೊ. ಲಕ್ಷ್ಮೀನಾರಾಯಣ ಕಾರಂತ, ಪ್ರಾಂಶುಪಾಲರು, ಎಂ.ಜಿ.ಎಂ. ಕಾಲೇಜು ಉಡುಪಿ ಇವರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಕೆ.ಪ್ರಭಾಕರ್ ಶೆಟ್ಟಿಗಾರ್, ಪ್ರಭಾಕರ್ ಸೌಂಡ್ಸ್ ಉಡುಪಿ ಮತ್ತು ಶ್ರೀ ಯು.ಎಂ. ಅಸ್ಲಾಮ್ ಹಿರಿಯ ರಂಗನಟ, ರಂಗಭೂಮಿ (ರಿ.) ಉಡುಪಿ ಇವರಿಗೆ “ವಿಶ್ವ ರಂಗಭೂಮಿ” ಪ್ರಶಸ್ತಿಯನ್ನು ನೀಡಿ ಗೌರವಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಆನಂದಿ ಆರ್ಟ್ ಫೌಂಡೇಶನ್ ಬೆಂಗಳೂರು ಪ್ರಸ್ತುತಪಡಿಸುವ “ಶೂರ್ಪನಖಿ” ನೃತ್ಯ ರೂಪಕವು ನಡೆಯಲಿದೆ.
ಶೂರ್ಪನಖಿ ನೃತ್ಯರೂಪಕ
ಶೂರ್ಪನಖಿ ಎಂದ ಕೂಡಲೇ ಸಾಮಾನ್ಯವಾಗಿ ರಾಕ್ಷಸಿಯೊಬ್ಬಳ ಕಲ್ಪನೆಗೆ ಹೋಗಿ ಬಿಡುತ್ತೇವೆ. ಪುರಾಣಗಳ ಪ್ರಕಾರ ಆಕೆ ಅಸುರಕುಲ ಸಂಜಾತೆಯೇ ಹೌದಾದರೂ ಆಕೆಯ ಆಸ್ಥಿತ ಹೆಣ್ಣು ಎನ್ನುವುದು. ಎಲ್ಲ ಹೆಂಗಸರಂತೆ ಆಕೆಗೂ ಆಸೆ, ಆಕಾಂಕ್ಷೆಗಳಿದ್ದವು ಮತ್ತು ಅದೇ ಆಕಾಂಕ್ಷೆಗಳ ಕೈಗೊಂಬೆಯಾಗಿ ಆಕೆ ನಡೆದುಕೊಂಡಳು.
ಇಲ್ಲಿ ಶೂರ್ಪನಖಿಯನ್ನು ರಾಕ್ಷಸಿಯಾಗಿ ಬಿಂಬಿಸುವುದಿಲ್ಲ ಬದಲಾಗಿ ಬರೀ ಆಕೆಯ ಕಥೆಯನ್ನು ಹೇಳಬಯಸುತ್ತದೆ. ರಾವಣನ ತಂಗಿಯಾದ ಶೂರ್ಪನಖಿಯ ಕಥೆ, ಯಾರಿಂದ ಮಹಾಯುದ್ದವೇ ಭಾವನೆಗಳನ್ನು ಮೂಲೆಗೊತ್ತಿ ಯುದ್ಧವನ್ನೇ ಮೇಲೆತ್ತಲಾಯಿತೋ ಆ ಹೆಣ್ಣಿನ ಕಥೆ.
ನಾವು ಪ್ರತೀ ವ್ಯಕ್ತಿಯ ಗುಣ ಅವಗುಣಗಳನ್ನು ಕಪ್ಪು ಮತ್ತು ಬಿಳೆ ಬಣ್ಣಗಳ ಅನುಸಾರ ವಿಂಗಡಿಸಲು ಹವಣಿಸುತ್ತೇವೆ. ಆದರೆ ನಾವ್ಯಾರೂ ಪೂರ್ತಿ ಬೆಳೆಯೂ ಅಲ್ಲ ಕಪ್ಪ ಅಲ್ಲಿ ಮಧ್ಯದ ಬೂದು ಬಣ್ಣದಲ್ಲೇ ನಿಂತವರು. ಹಾಗಾಗಿ ಇಲ್ಲಿ ಹೆಣ್ತನದ, ಸ್ತ್ರೀಯ ಅಸ್ಮಿತೆಯ ವೈಭವವನ್ನು ತೋರಿಸುವ ಪ್ರಯತ್ನ. ಆಕೆ ರಾಕ್ಷಸಿಯೇ ಆಗಿದ್ದರೂ ಸಹ ಅದು ಇಲ್ಲಿ ನಗಣ್ಯ.
ರೂಪಕವನ್ನು ವಂದನಾ ಸುಪ್ರಿಯಾ ಕಾಸರವಳ್ಳಿ ಮತ್ತು ಶ್ರೀನಿಧಿ ಹೊಳ್ಳ ಬೆಂಗಳೂರು ಪ್ರಸ್ತುತಪಡಿಸಲಿರುವರು. ರೂಪಕವನ್ನು ಅಪೂರ್ವ ಕಾಸರವಳ್ಳಿ ರಚಿಸಿದ್ದು, ವಂದನಾ ಸುಪ್ರಿಯಾ ಕಾಸರವಳ್ಳಿ ನಿರ್ದೇಶಿಸಿ, ಮಂಜು ಮಡಿಕೇರಿ ಬೆಳಕಿನ ವಿನ್ಯಾಸ ಮಾಡಲಿದ್ದಾರೆ. ರಿದಂನಲ್ಲಿ ಧನುಷ್ ಸಹಕರಿಸಲಿದ್ದಾರೆ.