23 ಮಾರ್ಚ್ 2023: ಸಾಹಿತಿ, ಸಂಘಟಕ, ಸ್ವಾತಂತ್ರ್ಯ ಹೋರಾಟಗಾರ ಏರ್ಯ ಲಕ್ಷ್ಮೀನಾರಾಯಣ ಆಳ್ವರು ದಕ್ಷಿಣ ಕನ್ನಡ ಜಿಲ್ಲೆಯ ಮೊಡಂಕಾಪು ಎಂಬ ಊರಿನ ಸಮೀಪವಿರುವ ಏರ್ಯ ಎಂಬಲ್ಲಿ ಮಾವಂತೂರು ಸುಬ್ಬಯ್ಯ ಆಳ್ವ ಮತ್ತು ಸೋಮಕ್ಕ ದಂಪತಿಗಳ ಸುಪುತ್ರನಾಗಿ 19-03-1926ರಂದು ಜನಿಸಿದರು. ತುಳು ಮತ್ತು ಕನ್ನಡ ಭಾಷೆಗಳಲ್ಲಿ ಸಾಹಿತ್ಯ ಕೃಷಿ ಮಾಡಿದ ಧೀಮಂತ. ಇವರ ಕೃತಿಗಳಲ್ಲಿ ಮುಖ್ಯವಾದವುಗಳನ್ನು ಮಥಿಸುವ ಮತ್ತು ಏರ್ಯರ ಕವನಗಳನ್ನು ಹಾಡುವ “ಏರ್ಯ ಸಾಹಿತ್ಯ ಸಂಭ್ರಮ” ಏರ್ಯ ಬೀಡಿನಲ್ಲಿ ದಿನಾಂಕ 02-04-2023ರಂದು ಭಾನುವಾರ ಏರ್ಯ ಆಳ್ವ ಫೌಂಡೇಷನ್ ಆಶ್ರಯದಲ್ಲಿ ನಡೆಯಲಿದೆ.
ಪೂರ್ವಾಹ್ನ 9ರಿಂದ 10 ಗಂಟೆವರೆಗೆ ಉಪಹಾರ. 10ರಿಂದ 10-30 ಡಾ. ಬಿ. ಎ. ವಿವೇಕ ರೈಯವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. 10-30ರಿಂದ 1-00 ಗಂಟೆವರೆಗೆ ಏರ್ಯರ ಮುಖ್ಯ ಕೃತಿಗಳ ವಿಶ್ಲೇಷಣೆ ನಡೆಯಲಿದೆ. ಡಾ. ತಾಳ್ತಜೆ ವಸಂತ ಕುಮಾರ್, ಡಾ. ನಾ.ದಾಮೋದರ ಶೆಟ್ಟಿ, ಪ್ರೊ. ಪಿ.ಕೃಷ್ಣ ಮೂರ್ತಿ, ಡಾ. ಯು.ಮಹೇಶ್ವರಿ, ಡಾ. ತುಕಾರಾಮ್ ಪೂಜಾರಿ, ಡಾ. ಸತ್ಯನಾರಾಯಣ ಮಲ್ಲಿಪಟ್ಟಣ, ಡಾ. ಆರ್.ನರಸಿಂಹ ಮೂರ್ತಿ, ಡಾ. ಅರುಣ ಕುಮಾರ್ ಎಸ್.ಆರ್. ಇವರುಗಳು ಕ್ರಮವಾಗಿ – ಸ್ನೇಹ ಸೇತು, ರಾಮಶ್ವಮೇಧದ ರಸ ತರಂಗಗಳು, ಮುಳಿಯ ತಿಮ್ಮಪ್ಪಯ್ಯ ಹಾಗೂ ಪತ್ರಗಳು ಚಿತ್ರಿಸಿದ ಸೇಡಿಯಾಪು, ಮೊದಲ ಮಳೆ, ಹಿಂದೂ ಹೆಜ್ಜೆ, ಸಂಚಯ, ನೂರರ ನೆನಪು, ಮಂಗಳ ತಿಮರು ಈ ಕೃತಿಗಳ ವಿಶೇಷಣೆಗೆ ನಡೆಸಲಿದ್ದಾರೆ. ಇದರ ಜೊತೆಗೆ ಗಾಯನ ಕಾರ್ಯಕ್ರಮವನ್ನು ಶ್ರೀ ಕಿಶೋರ್ ಪೆರ್ಲ ನೀಡಲಿದ್ದಾರೆ. ಏರ್ಯ ಬಾಲಕೃಷ್ಣ ಹೆಗ್ಡೆ ಸಮಾರೋಪ ಭಾಷಣ ಮಾಡುವುದರೊಂದಿಗೆ ಅಂದಿನ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆ. ಈ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ ಮಹಾಬಲೇಶ್ವರ ಹೆಬ್ಬಾರ ಮತ್ತು ಕೇಶವ ಎಚ್.
- ದಾಮೋದರ ಮಾಸ್ಟರ್
9481103386
1 Comment
ಧನ್ಯವಾದಗಳು