Subscribe to Updates

    Get the latest creative news from FooBar about art, design and business.

    What's Hot

    ಕೊಲ್ಯದ ನಾಟ್ಯನಿಕೇತನದಲ್ಲಿ ‘ನಾಟ್ಯಮೋಹನ ನವತ್ಯುತ್ಸವ’ – 18 | ಜೂನ್ 18

    June 17, 2025

    ವಿಶೇಷ ಲೇಖನ – ಶಿಕ್ಷಣ ತಜ್ಞ, ಸಂಸ್ಕೃತಿ ಚಿಂತಕ ಡಾ. ಜಿ. ರಾಮಕೃಷ್ಣ  

    June 17, 2025

    ‘ಪೆನ್ ಟು ಪ್ರೀಮಿಯರ್’ನಿಂದ ಮಹಿಳೆಯರಿಗಾಗಿ ಸಣ್ಣ ಕಥೆಗಳ ಸ್ಪರ್ಧೆ | ಆಗಸ್ಟ್ 31 ಕೊನೆಯ ದಿನ

    June 17, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೆಂಗಳೂರಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ‘ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಉತ್ಸವ-2025’ | ಫೆಬ್ರವರಿ 02
    Awards

    ಬೆಂಗಳೂರಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ‘ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಉತ್ಸವ-2025’ | ಫೆಬ್ರವರಿ 02

    January 31, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ (ರಿ.) ಕಮತಗಿ ಮತ್ತು ಗೀತಾ ಸಂಗೀತ ಅಕಾಡೆಮಿ ಟ್ರಸ್ಟ್ (ರಿ.) ಬೆಂಗಳೂರು ಇದರ ಸಹಯೋಗದಲ್ಲಿ ‘ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಉತ್ಸವ-2025’ ಸಮಾರಂಭವನ್ನು ದಿನಾಂಕ 02 ಫೆಬ್ರವರಿ 2025 ಭಾನುವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಜಾನಪದ ಕಲಾ ಪ್ರದರ್ಶನ, ಭರತನಾಟ್ಯ, ವಿಶೇಷ ಉಪನ್ಯಾಸ, ಸುಗಮ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಚಿಕ್ಕಬಳ್ಳಾಪುರ ಜಾನಪದ ಕಲಾವಿದರಾದ ಡಾ. ಶಶಿಕಲಾ ಎ.ಆರ್. ಇವರು ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ.

    ಸಭಾ ಕಾರ್ಯಕ್ರಮದ ಮೊದಲು ಮೆರವಣಿಗೆ ಚಾಲನೆ, ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ ಪ್ರತಿಮೆಗೆ ಮಾಲಾರ್ಪಣೆ ಮತ್ತು ಪುಸ್ತಕ ಮಳಿಗೆ ಉದ್ಘಾಟನೆಗೊಳ್ಳಲಿದೆ. ಬೆಂಗಳೂರು ಆಕಾಶವಾಣಿ ಸಹಾಯಕ ನಿರ್ದೇಶಕರಾದ ಶ್ರೀಮತಿ ನೂತನ ದೋಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಇದರ ಕಾರ್ಯದರ್ಶಿಗಳಾದ ಡಾ. ಸಂಗಮೇಶ ಉಪಾಸೆ ಇವರು ಈ ಕಾರ್ಯಕ್ರಮವನ್ನು ಉದ್ಘಟಿಸಲಿರುವರು. ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ಇದರ ಸಂಸ್ಥಾಪಕ ಅಧ್ಯಕ್ಷರಾದ ಡಾ. ಶಿವಣ್ಣ ಜಿ. ಇವರಿಂದ ಭಾವಗೀತೆ ಪೋಸ್ಟರ್ ಬಿಡುಗಡೆ, ಸಾಹಿತಿಗಳಾದ ಶ್ರೀ ಶೈಲೇಶ ಕಾಕೋಳು ಇವರಿಂದ ಕಲಾ ಪ್ರದರ್ಶನಕ್ಕೆ ಚಾಲನೆ ಮತ್ತು ಸಾಹಿತಿ ಶ್ರೀ ಎಂ.ವಿ. ಷಡಕ್ಷರಿ ಇವರು ‘ಜಾನಪದ ಬೆಳೆದು ಬಂದ ದಾರಿ’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ. ದರ್ಶನ್ ಮಳವಂಕಿ ಮತ್ತು ರಾಜು ಎಮ್ಮಿಗನೂರು ಇವರಿಂದ ಭಾವಗೀತೆ ಗಾಯನ ಪ್ರಸ್ತುತಗೊಳ್ಳಲಿದೆ. ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು.

    ಸ್ವಯಂಬೂ ನೃತ್ಯ ಸಾಧನ ತಂಡ ಬೆಂಗಳೂರು, ಜ್ಞಾನಸಿಂಧು ಕಲಾ ತಂಡ ಗುಳೇದಗುಡ್ಡ, ವೀರಗಾಸೆ ಕಲಾ ತಂಡ ಆನೇಕಲ್, ಶ್ರೀ ನಾಟ್ಯ ಕಲಾರ್ಪಣ ನೃತ್ಯ ಕೇಂದ್ರ ಟ್ರಸ್ಟ್ ಬೆಂಗಳೂರು, ಡಾ. ವಿಶ್ವರಾಜ ಭಜಂತ್ರಿ ಗಾಯನ ಕಲ್ಬುರ್ಗಿ, ಗೊಳ್ಳುಚಿನ್ನಣಪ್ಪನಳ್ಳಿ ಚಿಕ್ಕಬಳ್ಳಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಕು. ನಿಹಾರಿಕ ಮತ್ತು ತಂಡ ಜಾನಪದ ನೃತ್ಯ, ಕು. ಕಿಶನ್ ಮತ್ತು ತಂಡ ಕೋಲಾಟ, ಪೋಶೆಟ್ಟಿಹಳ್ಳಿ ಚಿಕ್ಕಬಳ್ಳಾಪುರ ತಾಲೂಕು ಮತ್ತು ಜಿಲ್ಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಕು. ನಮಿತ್ ಮತ್ತು ತಂಡ ಜಂಬೆ ಕಲೆ, ಮನ ಸ್ವಿತ ಮತ್ತು ತಂಡ ಯಕ್ಷಗಾನ ನೃತ್ಯ ಮತ್ತು ಶ್ರವಂತಿ ಮತ್ತು ತಂಡ ಜಾನಪದ ನೃತ್ಯ ಮುಂತಾದ ಕಲಾ ತಂಡಗಳಿಂದ ಕಲಾ ಪ್ರದರ್ಶನ ನಡೆಯಲಿದೆ.

    award bharatanatyam Cultural dance exhibition felicitation folk Literature Music
    Share. Facebook Twitter Pinterest LinkedIn Tumblr WhatsApp Email
    Previous Article‘ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ -2025’ಕ್ಕೆ ಲೇಖಕಿಯರಿಂದ ಕವನ ಸಂಕಲನ ಆಹ್ವಾನ | ಮಾರ್ಚ್ 15
    Next Article ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳು | ಫೆಬ್ರವರಿ 7, 8 ಮತ್ತು 9
    roovari

    Add Comment Cancel Reply


    Related Posts

    ಕೊಲ್ಯದ ನಾಟ್ಯನಿಕೇತನದಲ್ಲಿ ‘ನಾಟ್ಯಮೋಹನ ನವತ್ಯುತ್ಸವ’ – 18 | ಜೂನ್ 18

    June 17, 2025

    ವಿಶೇಷ ಲೇಖನ – ಶಿಕ್ಷಣ ತಜ್ಞ, ಸಂಸ್ಕೃತಿ ಚಿಂತಕ ಡಾ. ಜಿ. ರಾಮಕೃಷ್ಣ  

    June 17, 2025

    ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ.) ಕಾಸರಗೋಡು ಇದರ ಗೌರವ ಸಲಹೆಗಾರರಾಗಿ ದೀಪಕ್ ಪೆರ್ಮುದೆ ಆಯ್ಕೆ

    June 17, 2025

    ಉದ್ಘಾಟನೆಗೊಂಡ ಪಣಂಬೂರು ವೆಂಕಟ್ರಾಯ ಐತಾಳ ಸಂಸ್ಮರಣಾ ಯಕ್ಷಗಾನ ಸಪ್ತಾಹ

    June 17, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.