Subscribe to Updates

    Get the latest creative news from FooBar about art, design and business.

    What's Hot

    ಕೊಲ್ಯದ ನಾಟ್ಯನಿಕೇತನದಲ್ಲಿ ‘ನಾಟ್ಯಮೋಹನ ನವತ್ಯುತ್ಸವ’ – 18 | ಜೂನ್ 18

    June 17, 2025

    ವಿಶೇಷ ಲೇಖನ – ಶಿಕ್ಷಣ ತಜ್ಞ, ಸಂಸ್ಕೃತಿ ಚಿಂತಕ ಡಾ. ಜಿ. ರಾಮಕೃಷ್ಣ  

    June 17, 2025

    ‘ಪೆನ್ ಟು ಪ್ರೀಮಿಯರ್’ನಿಂದ ಮಹಿಳೆಯರಿಗಾಗಿ ಸಣ್ಣ ಕಥೆಗಳ ಸ್ಪರ್ಧೆ | ಆಗಸ್ಟ್ 31 ಕೊನೆಯ ದಿನ

    June 17, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಉಡುಪಿ ಅಂಬಲ್ಪಾಡಿ ದೇವಸ್ಥಾನದಲ್ಲಿ ದಾಸವರೇಣ್ಯ ಪುರಂದರದಾಸರ ಆರಾಧನೆಯ ಮಹೋತ್ಸವ
    Cultural

    ಉಡುಪಿ ಅಂಬಲ್ಪಾಡಿ ದೇವಸ್ಥಾನದಲ್ಲಿ ದಾಸವರೇಣ್ಯ ಪುರಂದರದಾಸರ ಆರಾಧನೆಯ ಮಹೋತ್ಸವ

    January 31, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು (ರಿ.) ಕೇಂದ್ರ ಸಮಿತಿ ಹುಬ್ಬಳ್ಳಿ ಮತ್ತು ಜಿಲ್ಲಾ ಘಟಕ ಉಡುಪಿ ಇದರ ವತಿಯಿಂದ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನ ಅಂಬಲಪಾಡಿ ಇವರ ಆಶ್ರಯದಲ್ಲಿ ಉಡುಪಿ ಅಂಬಲಪಾಡಿ ಭವಾನಿ ಸಭಾಂಗಣದಲ್ಲಿ ದಾಸವರೇಣ್ಯ ಪುರಂದರದಾಸರ ಆರಾಧನೆಯ ಮಹೋತ್ಸವ ಸಂದರ್ಭದಲ್ಲಿ ಕ.ಚು.ಸಾ.ಪ. ಸಂಭ್ರಮವು ದಿನಾಂಕ 29 ಜನವರಿ 2025ರಂದು ನಡೆಯಿತು.

    ಹಿರಿಯ ಚಿಂತಕ ಸನ್ಮಾನ್ಯ ವಿಶ್ವನಾಥ ಶೆಣೈ ಅಧ್ಯಕ್ಷತೆಯಲ್ಲಿ ಅಂಬಲಪಾಡಿ ಜನಾರ್ಧನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬಿ. ವಿಜಯ ಬಲ್ಲಾಳರು ಉದ್ಘಾಟಿಸಿ “ದಾಸರ ನುಡಿಗಳು ಲೋಕಕ್ಕೇ ಆದರ್ಶ” ಎಂದರು. ಮುಖ್ಯ ಅತಿಥಿಗಳಾಗಿ ಶ್ರೀ ನೆಂಪು ನರಸಿಂಹ ಭಟ್ಟರು ಮಾತನಾಡಿದರು. ತದ ನಂತರದ ಉಪಾನ್ಯಾಸ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದ ಮಂಗಳೂರಿನ ಮಂಗಳಾ ಆಸ್ಪತ್ರೆಯ ಮೂಲವ್ಯಾಧಿ ಕ್ಷಾರ ತಜ್ಞ ಹಾಗೂ ಕಣಚೂರು ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಸುರೇಶ ನೆಗಳಗುಳಿಯವರು “ಪುರಂದರಗಢದ ಪುರಂದರ ಅಂಕಿತನಾಮದ ಪುರಂದರರು ಪುರಂದರ ವಿಠಲನಿಗೆ ಶರಣಾಗಿ ಪುರಂದರ ದಾಸರಾದರು. ಚುಟುಕಿನಲ್ಲಿ ಹೇಳುತ್ತಾ ಹೋದ ಅವರ ವಾಕ್ಯಗಳೇ ಲೋಕಕ್ಕೆ ಹಿತವಾದ ಸಾಹಿತ್ಯವೇ ಆಯಿತು” ಎಂದರು ಹಾಗೂ ಪುರಂದರ ದಾಸ ಹಾಗೂ ಚುಟುಕು ಸಾಹಿತ್ಯವನ್ನು ಬೆಸೆಯುವ ಮುಕ್ತಕ ಹಾಗೂ ಗಜಲ್ ಗಳನ್ನು ವಾಚಿಸಿದರು.

    ಪುರಂದರದಾಸರ‌‌ ತತ್ವಗಳ ಬಗ್ಗೆ ಉಪನ್ಯಾಸ ನೀಡಿದ ವಿದ್ವಾನ್ ರಘುಪತಿ‌ ಭಟ್ ಸಸಿಹಿತ್ಲು ಇವರನ್ನು ಮತ್ತು ಸಭಾಧ್ಯಕ್ಷ ನೆಗಳಗುಳಿ ಹಾಗೂ ಮುಖ್ಯ ಅತಿಥಿ ಕ.ಚು.ಸಾ.ಪ‌. ಮಹಿಳಾ ಸಂಘಟಕಿ ಪುತ್ತೂರು ಶಾಂತಾರವರನ್ನು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಸನ್ಮಾನಿಸಿದರು.

    ನಂತರ ನಡೆದ ಕಾರ್ಕಳದ ಸಾವಿತ್ರಿ ಮನೋಹರ ಅಧ್ಯಕ್ಷತೆಯ ಕವಿಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ಜಯಾನಂದ ಪೆರಾಜೆಯವರ ಆಶಯ ನುಡಿ ಸಹಿತ ರಾಜ್ಯದ ಕವಿಗಳಾದ ಬಳ್ಳಾರಿಯ ಚೇತನ್, ಅಶ್ವಿನಿ ಕಡ್ತಲ, ದ.ಕ. ಜಿಲ್ಲಾಧ್ಯಕ್ಷ ಜಯಾನಂದ ಪೆರಾಜೆ, ಉಡುಪಿ ಜಿಲ್ಲಾಧ್ಯಕ್ಷ ಜಿ.ಯು. ನಾಯಕ, ಉಪಾಧ್ಯಕ್ಷ ರಾಜು ಎನ್. ಆಚಾರ್ಯ, ಬಳಂಜ ರವೀಂದ್ರ ಶೆಟ್ಟಿ, ಉಡುಪಿ ಸೋಮಶೇಖರ ಶೆಟ್ಡಿ ಮುಂತಾದವರು ಕವನ ವಾಚನ ಮಾಡಿದರು.

    ಕೇರಳ ರಾಜ್ಯ ಅಧ್ಯಕ್ಷೆ ಡಾ. ವಾಣಿಶ್ರೀ ಕಾಸರಗೋಡು, ಕಾರ್ಯದರ್ಶಿ ಗುರುರಾಜ್ ಕಾಸರಗೋಡು ಇವರ ಗಡಿನಾಡು ಕನ್ನಡ ಸಾಂಸ್ಕೃತಿಕ ಸಂಘ ವತಿಯಿಂದ ಸಾಂಸ್ಕೃತಿಕ‌ ಕಾರ್ಯಕ್ರಮಗಳು ಮನಸೆಳೆದವು. ಕಾರ್ಯಕ್ರಮದಲ್ಲಿ ಕ‌.ಚು.ಸಾ.ಪ. ಸದಸ್ಯರ ಸಹಿತ ಶ್ರೀಮತಿ ಸಾವಿತ್ರಿ ಮೊದಲಾದವರು ಉಪಸ್ಥಿತರಿದ್ದರು. ಶ್ರೀಮತಿ ಪ್ರೇಮಾ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು.

    Cultural felicitation Literature Music
    Share. Facebook Twitter Pinterest LinkedIn Tumblr WhatsApp Email
    Previous Articleಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ರಚನೆ
    Next Article ಮಣಿ ಕೃಷ್ಣಸ್ವಾಮಿ ಸಂಗೀತ ವಿದ್ಯಾಲಯದಿಂದ ಜೂನಿಯರ್, ಸೀನಿಯರ್ ಹಾಗೂ ವಿದ್ವತ್ ಸಂಗೀತ ಶಿಕ್ಷಣ
    roovari

    Add Comment Cancel Reply


    Related Posts

    ವಿಶೇಷ ಲೇಖನ – ಶಿಕ್ಷಣ ತಜ್ಞ, ಸಂಸ್ಕೃತಿ ಚಿಂತಕ ಡಾ. ಜಿ. ರಾಮಕೃಷ್ಣ  

    June 17, 2025

    ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ.) ಕಾಸರಗೋಡು ಇದರ ಗೌರವ ಸಲಹೆಗಾರರಾಗಿ ದೀಪಕ್ ಪೆರ್ಮುದೆ ಆಯ್ಕೆ

    June 17, 2025

    ಉದ್ಘಾಟನೆಗೊಂಡ ಪಣಂಬೂರು ವೆಂಕಟ್ರಾಯ ಐತಾಳ ಸಂಸ್ಮರಣಾ ಯಕ್ಷಗಾನ ಸಪ್ತಾಹ

    June 17, 2025

    ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದ ‘ಕೆ.ಎಂ.ಎ. ದಫ್ ಮುಟ್ಟ್’ ತಂಡ ಹಾಗೂ ಪ್ರದರ್ಶನ

    June 17, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.