ಬೆಂಗಳೂರು : ಸಂಸ್ಕೃತಿ ಸಚಿವಾಲಯ ಭಾರತ ಸರ್ಕಾರ, ರಾಷ್ಟ್ರೀಯ ನಾಟಕ ಶಾಲೆ ನವದೆಹಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರ ಸಹಯೋಗದೊಂದಿಗೆ ‘ಭಾರತ ರಂಗ ಮಹೋತ್ಸವ ಅಂತರಾಷ್ಟ್ರೀಯ ನಾಟಕೋತ್ಸವ’ವನ್ನು ದಿನಾಂಕ 01 ಫೆಬ್ರವರಿ 2025ರಿಂದ 08 ಫೆಬ್ರವರಿ 2025ರವರೆಗೆ ಸಂಜೆ 4-30 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 01 ಫೆಬ್ರವರಿ 2025ರಂದು ಬಿ.ವಿ. ಕಾರಂತ ವೇದಿಕೆಯಲ್ಲಿ ಸಚಿವರಾದ ಶ್ರೀ ಶಿವರಾಜ ಎಸ್. ತಂಗಡಗಿ ಇವರು ಉದ್ಘಟನಾ ಸಮಾರಂಭವನ್ನು ನಡೆಸಿಕೊಡಲಿದ್ದಾರೆ. ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಇವರು ರಂಗ ಹೊತ್ತಿಗೆ ಬಿಡುಗಡೆ ಮಾಡಲಿದ್ದು, ಹಿರಿಯ ನಾಟಕಕಾರರಾದ ಡಾ. ಹೆಚ್.ಎಸ್. ಶಿವಪ್ರಕಾಶ್ ಇವರಿಗೆ ಉತ್ಸವ ಗೌರವ ನೀಡಲಾಗುವುದು. ಪ್ರಮೋದಿನಿ ಮತ್ತು ತಂಡದವರಿಂದ ಪೂಜಾ ಕುಣಿತ ಜನಪದ ಪ್ರದರ್ಶನ ನಡೆಯಲಿದ್ದು, ಶ್ರೀ ಶ್ರವಣ್ ಹೆಗ್ಗೋಡು ಇವರ ರಂಗರೂಪ ಮತ್ತು ನಿರ್ದೇಶನದಲ್ಲಿ ಮಂಗಳೂರಿನ ಕಲಾಭಿ ಥಿಯೇಟರ್ ತಂಡದವರು ‘ಎ ಫ್ರೆಂಡ್ ಬಿಯಾಂಡ್ ದ ಫೆನ್ಸ್’ ಕನ್ನಡ ನಾಟಕ ಪ್ರದರ್ಶನ ನೀಡಲಿದ್ದಾರೆ.
ದಿನಾಂಕ 02 ಫೆಬ್ರವರಿ 2025ರಂದು ಬೆಳಿಗ್ಗೆ 10-30ರಿಂದ ರಂಗ ಪರಿಷೆ ರಂಗಭೂಮಿಯ ವೈವಿದ್ಯಮಯ ಪ್ರದರ್ಶನಗಳು, ಪುಸ್ತಕ ಪ್ರದರ್ಶನ, ಜಾನಪದ ಪ್ರದರ್ಶನ, ವಿಚಾರ ಸಂಕಿರಣ, ವಿವಿಧ ಆಟಗಳೊಂದಿಗೆ ಮನಮೋಹಕ ವಿನೋದಾವಳಿಗಳು ಪ್ರಸ್ತುತಗೊಳ್ಳಲಿವೆ. ಹಿರಿಯ ವಿದ್ವಾಂಸರಾದ ಡಾ. ಕೆ. ಮರುಳಸಿದ್ಧಪ್ಪ ಇವರಿಗೆ ಉತ್ಸವ ಗೌರವ ನೀಡಲಾಗುವುದು. ಬೆಂಗಳೂರಿನ ನಟರಂಗ ತಂಡಕ್ಕೆ ಸುವರ್ಣ ಮಹೋತ್ಸವ ಗೌರವ ಸಮರ್ಪಣೆ, ರಂಗಗೀತೆಗಳು ಮತ್ತು ರಂಗದೃಶ್ಯಾವಳಿ ಪ್ರದರ್ಶನ, ಬೆಂಗಳೂರಿನ ದಿಲೀಪ್ ಮತ್ತು ತಂಡದವರಿಂದ ಡೊಳ್ಳು ಕುಣಿತ ಜನಪದ ಪ್ರದರ್ಶನ ನಡೆಯಲಿದೆ. ರಷ್ಯಾದ ಗಿಟಿಸ್ ತಂಡದವರಿಂದ ನೈನಾ ಚುಸೊವಾ ಇವರ ರಂಗರೂಪ ಮತ್ತು ನಿರ್ದೇಶನದಲ್ಲಿ ‘ದ ಮ್ಯಾರೇಜ್ ಆಫ್ ಬಲ್ಚಿಮ್ನೋವ್’ ನಾಟಕ ಪ್ರಸ್ತುತಗೊಳ್ಳಲಿದೆ.
ದಿನಾಂಕ 03 ಫೆಬ್ರವರಿ 2025ರಂದು ಹಿರಿಯ ವಿದ್ವಾಂಸರಾದ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಇವರಿಗೆ ಉತ್ಸವ ಗೌರವ ನೀಡಲಾಗುವುದು. ಬೆಂಗಳೂರಿನ ರಂಗ ಸಂಪದ ತಂಡಕ್ಕೆ ಸುವರ್ಣ ಮಹೋತ್ಸವ ಗೌರವ ಸಮರ್ಪಣೆ, ರಂಗಗೀತೆಗಳು ಮತ್ತು ರಂಗದೃಶ್ಯಾವಳಿ ಪ್ರದರ್ಶನ, ಬೆಂಗಳೂರಿನ ಲಿಂಗಯ್ಯ ಮತ್ತು ತಂಡದವರಿಂದ ಕಂಸಾಳೆ ಕುಣಿತ ಜನಪದ ಪ್ರದರ್ಶನ ನಡೆಯಲಿದೆ. ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯವರು ಶ್ರೀ ಅಜಯ್ ಕುಮಾರ್ ಇವರ ರಂಗರೂಪ ಮತ್ತು ನಿರ್ದೇಶನದಲ್ಲಿ ‘ಮಾಯರಿ ಮೈ ಕಾ ಸೇ ಕಹು’ ಹಿಂದಿ ನಾಟಕ ಪ್ರಸ್ತುತಗೊಳಿಸಲಿದ್ದಾರೆ.
ದಿನಾಂಕ 04 ಫೆಬ್ರವರಿ 2025ರಂದು ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷರಾದ ಡಾ. ಬಿ.ಎಲ್. ಶಂಕರ್ ಇವರಿಗೆ ಉತ್ಸವ ಗೌರವ ನೀಡಲಾಗುವುದು. ಬೆಂಗಳೂರಿನ ಬೆನಕ ತಂಡಕ್ಕೆ ಸುವರ್ಣ ಮಹೋತ್ಸವ ಗೌರವ ಸಮರ್ಪಣೆ, ರಂಗಗೀತೆಗಳು ಮತ್ತು ರಂಗದೃಶ್ಯಾವಳಿ ಪ್ರದರ್ಶನ, ಚಿಕ್ಕಮಗಳೂರು ಇಂಚರ ಮತ್ತು ತಂಡದವರಿಂದ ಮಹಿಳಾ ವೀರಗಾಸೆ ಜನಪದ ಪ್ರದರ್ಶನ ನಡೆಯಲಿದೆ. ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯವರು ಶ್ರೀ ಚಿತ್ತರಂಜನ್ ತ್ರಿಪಾಠಿ ಇವರ ರಂಗರೂಪ ಮತ್ತು ನಿರ್ದೇಶನದಲ್ಲಿ ‘ತಾಜ ಮಹಲ್ ಕ ಟೆಂಡರ್’ ಹಿಂದಿ ನಾಟಕ ಪ್ರಸ್ತುತಗೊಳಿಸಲಿದ್ದಾರೆ.
ದಿನಾಂಕ 05 ಫೆಬ್ರವರಿ 2025ರಂದು ಹಿರಿಯ ರಂಗಭೂಮಿ ಕಲಾವಿದರಾದ ಡಾ. ಮುಖ್ಯಮಂತ್ರಿ ಚಂದ್ರು ಇವರಿಗೆ ಉತ್ಸವ ಗೌರವ ನೀಡಲಾಗುವುದು. ಬೆಂಗಳೂರಿನ ಸ್ಪಂದನ ತಂಡಕ್ಕೆ ಸುವರ್ಣ ಮಹೋತ್ಸವ ಗೌರವ ಸಮರ್ಪಣೆ, ರಂಗಗೀತೆಗಳು ಮತ್ತು ರಂಗದೃಶ್ಯಾವಳಿ ಪ್ರದರ್ಶನ, ಗದಗ ಪ್ರಕಾಶ್ ಮತ್ತು ತಂಡದವರಿಂದ ಜೋಗತಿ ನೃತ್ಯ ಜನಪದ ಪ್ರದರ್ಶನ ನಡೆಯಲಿದೆ. ಶ್ರೀಲಂಕಾದ ವಿ 4 ಥಿಯೇಟರ್ ತಂಡದವರು ಶ್ರೀ ಜಯಂತ ಬಂಡಾರ ಇವರ ರಂಗರೂಪ ಮತ್ತು ನಿರ್ದೇಶನದಲ್ಲಿ ‘ರೋಮಿಯೋ ಆಂಡ್ ಜೂಲಿಯಟ್’ ಸಿಂಹಳ ಭಾಷೆಯ ನಾಟಕ ಪ್ರಸ್ತುತಗೊಳಿಸಲಿದ್ದಾರೆ.
ದಿನಾಂಕ 06 ಫೆಬ್ರವರಿ 2025ರಂದು ಹಿರಿಯ ರಂಗಭೂಮಿ ಕಲಾವಿದರಾದ ಶ್ರೀಮತಿ ಬಿ. ಜಯಶ್ರೀ ಇವರಿಗೆ ಉತ್ಸವ ಗೌರವ ನೀಡಲಾಗುವುದು. ಬೆಂಗಳೂರಿನ ಕಲಾಗಂಗೋತ್ರಿ ತಂಡಕ್ಕೆ ಸುವರ್ಣ ಮಹೋತ್ಸವ ಗೌರವ ಸಮರ್ಪಣೆ, ರಂಗಗೀತೆಗಳು ಮತ್ತು ರಂಗದೃಶ್ಯಾವಳಿ ಪ್ರದರ್ಶನ, ಹಾನಗಲ್ ರಾಮಕೃಷ್ಣ ಸುಂಗಧಿ ಮತ್ತು ತಂಡದವರಿಂದ ‘ಬೇಡರ ಕುಣಿತ’ ಜನಪದ ಪ್ರದರ್ಶನ ನಡೆಯಲಿದೆ. ಹೈದರಾಬಾದ್ ನಿಭಾ ಥಿಯೇಟರ್ ಎನ್ಸೇಂಬಲ್ ತಂಡದವರು ಶ್ರೀ ನಾಜ್ಹರಿನ್ ಇಷಾಕ್ ಇವರ ರಂಗರೂಪ ಮತ್ತು ನಿರ್ದೇಶನದಲ್ಲಿ ‘ಪಾಕುಡುರಾಲ್ಲು’ ತೆಲುಗು ಭಾಷೆಯ ನಾಟಕ ಪ್ರಸ್ತುತಗೊಳಿಸಲಿದ್ದಾರೆ.
ದಿನಾಂಕ 07 ಫೆಬ್ರವರಿ 2025ರಂದು ಹಿರಿಯ ಸಿನಿಮಾ ಕಿರುತೆರೆ ಹಾಗೂ ರಂಗಭೂಮಿ ನಿದರ್ಶಕರಾದ ಶ್ರೀ ಟಿ.ಎನ್. ಸೀತಾರಾಮ್ ಇವರಿಗೆ ಉತ್ಸವ ಗೌರವ ನೀಡಲಾಗುವುದು. ಬೆಂಗಳೂರಿನ ನಾಟ್ಯ ದರ್ಪಣ ತಂಡಕ್ಕೆ ಸುವರ್ಣ ಮಹೋತ್ಸವ ಗೌರವ ಸಮರ್ಪಣೆ, ರಂಗಗೀತೆಗಳು ಮತ್ತು ರಂಗದೃಶ್ಯಾವಳಿ ಪ್ರದರ್ಶನ, ಮೈಸೂರು ಪುರುಷೋತಮ್ ಮತ್ತು ತಂಡದವರಿಂದ ‘ನಗಾರಿ’ ಜನಪದ ಪ್ರದರ್ಶನ ನಡೆಯಲಿದೆ. ಮಹಾರಾಷ್ಟ್ರ ಬಾಗ್ ಖಾನ್ ಥಿಯೇಟರ್ ಗ್ರೂಪ್ ತಂಡದವರು ಶ್ರೀ ಆಸ್ಲಾಮ್ ಯುನುಸ್ ಶೇಖ್ ಇವರ ರಂಗರೂಪ ಮತ್ತು ನಿರ್ದೇಶನದಲ್ಲಿ ‘ಯಯಾತಿ’ ಹಿಂದಿ ಭಾಷೆಯ ನಾಟಕ ಪ್ರಸ್ತುತಗೊಳಿಸಲಿದ್ದಾರೆ.
ದಿನಾಂಕ 08 ಫೆಬ್ರವರಿ 2025ರಂದು ಸಂಜೆ 5-00 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬೆಂಗಳೂರಿನ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಡಾ. ಕೆ.ವಿ. ನಾಗರಾಜ ಮೂರ್ತಿ ಇವರು ವಹಿಸಲಿದ್ದು, ಹಿರಿಯ ರಂಗಕರ್ಮಿ ಶ್ರೀ ಪ್ರಸನ್ನ ಇವರು ಸಮಾರೋಪ ಭಾಷಣ ಮಾಡಲಿರುವರು. ರಂಗ ವಿಮರ್ಶಕರಾದ ಡಾ. ವಿಜಯ ಇವರಿಗೆ ಉತ್ಸವ ಗೌರವ ನೀಡಲಾಗುವುದು. ಬೆಂಗಳೂರಿನ ಸಮುದಾಯ ಮತ್ತು ಚಿತ್ರಾ ತಂಡಕ್ಕೆ ಸುವರ್ಣ ಮಹೋತ್ಸವ ಗೌರವ ಸಮರ್ಪಣೆ, ರಂಗಗೀತೆಗಳು ಮತ್ತು ರಂಗದೃಶ್ಯಾವಳಿ ಪ್ರದರ್ಶನ, ಮಂಡ್ಯ ಪ್ರವೀಣ್ ಮತ್ತು ತಂಡದವರಿಂದ ‘ಗಾರುಡಿ ಗೊಂಬೆ’ ಜನಪದ ಪ್ರದರ್ಶನ ನಡೆಯಲಿದೆ. ಬೆಂಗಳೂರು ಸೆಂಟರ್ ರಾಷ್ಟ್ರೀಯ ನಾಟಕ ಶಾಲೆಯವರು ಶ್ರೀಮತಿ ಬಿ. ಜಯಶ್ರೀ ಇವರ ರಂಗರೂಪ ಮತ್ತು ನಿರ್ದೇಶನದಲ್ಲಿ ‘ಜಸ್ಮಾ ಓಡನ್’ ಕನ್ನಡ ನಾಟಕ ಪ್ರದರ್ಶನ ನೀಡಲಿದ್ದಾರೆ.
ಬಿ.ವಿ. ಕಾರಂತ ವೇದಿಕೆ, ಶಾಂತಕವಿ ಸಕ್ಕರಿ ಬಾಳಾಚಾರ್ಯ ವೇದಿಕೆ, ಕಮಲಾದೇವಿ ಚಟ್ಟೋಪಾದ್ಯಾಯ ವೇದಿಕೆ ಮತ್ತು ಡಾ. ಹೆಚ್. ನರಸಿಂಹಯ್ಯ ವೇದಿಕೆಗಳಲ್ಲಿ ಜಾನಪದ ಕುಣಿತ, ಜಾನಪದ ಗಾಯನ, ರಂಗಗೀತೆಗಳು, ರಂಗ ದೃಶ್ಯಾವಳಿಗಳು, ಕಿರುಚಿತ್ರ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ, ಕವಿಗೋಷ್ಠಿ, ಪುಸ್ತಕ ಸಂತೆ, ಆಹಾರ ಮೇಳ, ಹಕ್ಕಿ ಹಾರುತ್ತಿದೆ ನೋಡಿದಿರಾ ಸಂಯೋಜಿತ ಕಲಾಕೃತಿ ಪ್ರದರ್ಶನ ಮತ್ತು ರಂಗ ಸಂವಾದ ಪ್ರಸ್ತುತಗೊಳ್ಳಲಿದೆ.