ಶಿವಮೊಗ್ಗ : ಸುಮುಖ ಕಲಾ ಕೇಂದ್ರ (ರಿ.) ಇದರ ಏಳನೇ ವಾರ್ಷಿಕೋತ್ಸವ ಮತ್ತು ದಿ.ಹಳ್ಳಾಡಿ ಸುಬ್ರಾಯ ಮಲ್ಯ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 08 ಫೆಬ್ರವರಿ 2025ರ ಶನಿವಾರದಂದು ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ನಡೆಯಲಿದೆ.
ಸುಮುಖ ಕಲಾ ಕೇಂದ್ರದ ಅಧ್ಯಕ್ಷರಾದ ಎಂ. ಎಂ. ರವಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಶಿವಮೊಗ್ಗದ ಸಲಹಾ ವೈದ್ಯರಾದ ಡಾ. ರತ್ನಾಕರ ಇವರು ಉದ್ಘಾಟಿಸಲಿದ್ದಾರೆ. ಭದ್ರಾವತಿಯ ಭದ್ರಾ ನರ್ಸಿಂಗ್ ಹೋಮ್ ಇದರ ಡಾ. ಟಿ. ನರೇಂದ್ರ ಭಟ್, ಕರ್ನಾಟಕ ಕೊಂಕಣಿ ಅಕಾಡಮಿಯ ಮಾಜಿ ಸದಸ್ಯರಾದ ಬಿ. ಎಸ್. ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕೆ. ಜಿ. ರಾಮರಾವ್ ಸಾಕೇಶ ಕಲಾವಿದರು ಕೆಳಮನೆ ಇವರಿಗೆ ದಿ. ಹಳ್ಳಾಡಿ ಸುಬ್ರಾಯ ಮಲ್ಯ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅಭ್ಯುದಯ ಶಿವಮೊಗ್ಗ ಇದರ ಅಧ್ಯಕ್ಷರಾದ ಶ್ರೀ ಲಕ್ಷ್ಮೀನಾರಾಯಣ ಕಾಶಿ ಅಭಿನಂದನಾ ಭಾಷಣಗೈಯ್ಯಲ್ಲಿದ್ದಾರೆ.
ಸಭಾಕಾರ್ಯಕ್ರಮದ ಬಳಿಕ ಶಿವಮೊಗ್ಗದ ಕಿರಣ ಆರ್. ಪೈ ಇವರ ನಿರ್ದೇಶನದಲ್ಲಿ ಮಕ್ಕಳಿಂದ ‘ದುಶ್ಯಾಸನ ವಧೆ-ವೃಷಸೇನ ಕಾಳಗ’ ಯಕ್ಷಗಾನ ಬಯಲಾಟ ನಡೆಯಲಿರುವುದು. ಪ್ರಸಂಗದ ಅರ್ಥ ಹಾಗೂ ಭಾಗವತಿಕೆಯನ್ನು ಐನಬೈಲು ಪರಮೇಶ್ವರ ಹೆಗಡೆ ನಿರ್ವಹಿಸಲಿದ್ದು, ಇವರಿಗೆ ಮದ್ದಳೆಯಲ್ಲಿ ಮಂಜುನಾಥ ಗುಡ್ಡದಿಂಬ, ಚಂಡೆಯಲ್ಲಿ ಎಚ್. ರಾಕೇಶ್ ಮಲ್ಯ ಹಳ್ಳಾಡಿ ಸಹಕರಿಸಲಿದ್ದಾರೆ. ಸಿದ್ದಾಪುರದ ಎಮ್. ಆರ್. ನಾಯಕ ಪ್ರಸಾಧನದಲ್ಲಿ ಸಹಕರಿಸಲಿದ್ದು, ಮುಮ್ಮೇಳದಲ್ಲಿ ಸೌಪರ್ಣಿಕಾ, ಶ್ರಾವಣಿ, ವಾರಿಧಿ, ಅನೂಷ, ಶೀತಲ್, ಅನನ್ಯ, ಮಣಿಕಂಠ, ಪ್ರೀತಂ , ಶ್ರೇಯಾ, ಸಂಜನಾ, ಯಾಮಿನಿ ಹಾಗೂ ಪರಿಣಿತಾ ಪಾತ್ರ ನಿರ್ವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ಸುಮುಖ ಕಲಾ ಕೇಂದ್ರ ಸರ್ವರನ್ನು ಸ್ವಾಗತಿಸುತ್ತಿದೆ.

