ಸುಳ್ಯ: ಇತ್ತೀಚೆಗೆ ಅಗಲಿದ ಹಿರಿಯ ಪತ್ರಕರ್ತ ಗುರುವಪ್ಪ ಎನ್.ಟಿ.ಬಾಳೆಪುಣಿ ಅವರಿಗೆ ಸುಳ್ಯ ಪ್ರೆಸ್ ಕ್ಲಬ್ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮವು ದಿನಾಂಕ 31 ಜನವರಿ 2025ರಂದು ನಡೆಯಿತು. ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಮೌನ ಪ್ರಾರ್ಥನೆ ನಡೆಸಿ ನುಡಿನಮನ ಸಲ್ಲಿಸಲಾಯಿತು.
ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷರಾದ ಹರೀಶ್ ಬಂಟ್ವಾಳ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ. ಪ್ರೆಸ್ ಕ್ಲಬ್ ಕಾರ್ಯದರ್ಶಿ ಜಯಪ್ರಕಾಶ್ ಕುಕ್ಕೇಟ್ಟಿ, ದ. ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ, ಕಾರ್ಯನಿರತ ಪತ್ರಕರ್ತರ ಸಂಘದ ಸುಳ್ಯ ತಾಲೂಕು ಅಧ್ಯಕ್ಷರಾದ ಲೋಕೇಶ್ ಪೆರ್ಲಂಪಾಡಿ, ಪತ್ರಕರ್ತರಾದ ದುರ್ಗಾಕುಮಾರ್ ನಾಯರ್‌ಕೆರೆ, ಗಣೇಶ್ ಮಾವಂಜಿ ನುಡಿನಮನ ಸಲ್ಲಿಸಿದರು. ಪ್ರೆಸ್ ಕ್ಲಬ್ ಕೋಶಾಧಿಕಾರಿ ರಮೇಶ್ ನೀರಬಿದಿರೆ, ಕರ್ನಾಟಕ ಜರ್ನಲಿನ್ಸ್ ಯೂನಿಯನ್ ಅಧ್ಯಕ್ಷೆಯಾದ ಜಯಶ್ರೀ ಕೊಯಿಂಗೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರೆ ಪತ್ರಕರ್ತರಾದ ಗಂಗಾಧರ ಮಟ್ಟಿ,ಶಿವ ಪ್ರಸಾದ್ ಕೇರ್ಪಳ, ಶರೀಫ್ ಜಟ್ಟಿಪಳ್ಳ, ತೇಜೇಶ್ವರ ಕುಂದಲ್ಪಾಡಿ, ಹಸೈನಾರ್ ಜಯನಗರ, ಮಿಥುನ್ ಕರ್ಲಪ್ಪಾಡಿ, ಪೂಜಾಶ್ರೀ ವಿತೇಶ್ ಕೋಡಿ, ಪ್ರಜ್ಞಾ ಎನ್.ನಾರಾಯಣ್, ದಯಾನಂದ ಕಲ್ಕಾರ್, ಸತೀಶ್ ಹೊದ್ದೆಟ್ಟಿ, ಶಿವಪ್ರಸಾದ್ ಅಲೆಟ್ಟಿ, ಕುಶಾ ಹೊರತ್ಯಡ್ಕ ಮತ್ತಿತರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Previous Articleವಿಶೇಷ ಲೇಖನ | ಮಹಿಳಾ ಶೋಷಣೆಗೆ ದನಿಯಾದ ಡಾ. ವಿಜಯಶ್ರೀ ಸಬರದ