25 ಮಾರ್ಚ್ 2023, ಮಂಗಳೂರು: ತುಳು ಕೂಟ ಕುಡ್ಲ ಸಂಸ್ಥೆಯು 50ನೇ ವರ್ಷದ “ಬಂಗಾರ್ ಪರ್ಬ”ದ ನೆನಪಿಗಾಗಿ ಸರಣಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದೆ. ಸರಣಿಯ ಮೊದಲ ಕಾರ್ಯಕ್ರಮ ತುಳು ನರ್ತನ ಭಜನೆ ಸ್ಪರ್ಧೆಯು ” ಮಾ.26ರಂದು ಬೆಳಿಗ್ಗೆ 9.30ರಿಂದ ನಗರದ ಮಂಗಳಾದೇವಿ ದೇವಸ್ಥಾನದಲ್ಲಿ ನಡೆಯಲಿದೆ ಎಂದು ತುಳುಕೂಟದ ಅಧ್ಯಕ್ಷ ದಾಮೋದರ ನಿಸರ್ಗ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತುಳು ಸಾಹಿತ್ಯ, ಸಂಗೀತ, ತಾಳ, ಲಯ, ನರ್ತನ ಆಧರಿಸಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಪ್ರಥಮ ಬಹುಮಾನ ರೂ.7.000, ದ್ವಿತೀಯ ಬಹುಮಾನ ರೂ.5,000 ನಿಗದಿಪಡಿಸಲಾಗಿದೆ. ಪ್ರತಿ ತಿಂಗಳು ತುಳು ಸಾಹಿತ್ಯ ಭಾಷೆಗೆ ಅನುಸಾರವಾಗಿ ಬೇರೆ ಬೇರೆ ಕಾರ್ಯಕ್ರಮಗಳನ್ನು ನಡೆಸಿ, ಡಿಸೆಂಬರ್‌ನಲ್ಲಿ ಮೂರು ದಿನಗಳ ವಿಶೇಷ ಕಾರ್ಯಕ್ರಮಗಳೊಂದಿಗೆ ಸಮಾರೋಪ ಮಾಡಲಾಗುವುದು’ ಎಂದರು.
ಧರ್ಮದರ್ಶಿ ಹರಿಕೃಷ್ಣ ಪುನರೂರು, ಮಂಗಳಾದೇವಿ ದೇವಸ್ಥಾನದ ಮೊಕ್ತೇಸರ ಪಿ. ರಮಾನಾಥ್ ಹೆಗ್ಡೆ ಇವರುಗಳ ಗಣ್ಯ ಉಪಸ್ಥಿತಿಯಲ್ಲಿ ಮಾರ್ಚ್ 26ರಂದು ಬೆಳಿಗ್ಗೆ 9.30ಕ್ಕೆ ಅಖಿಲ ಭಾರತ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಸುಮಲತಾ ಎನ್. ಸುವರ್ಣ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಮಧ್ಯಾಹ್ನ ಸಮಾರೋಪ ನಡೆಯಲಿದೆ.