ಪುತ್ತೂರು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ ಕಲ್ಲಮ ಇಲ್ಲಿ 37ನೇ ವಾರ್ಷಿಕೋತ್ಸವ ಹಾಗೂ ರಥೋತ್ಸವ ಸಮಾರಂಭದ ಅಂಗವಾಗಿ ದಿನಾಂಕ 02 ಫೆಬ್ರವರಿ 2025ನೇ ರವಿವಾರ ‘ಭೀಷ್ಮ ಪ್ರತಿಜ್ಞೆ’ ಎಂಬ ತಾಳಮದ್ದಳೆಯು ಶ್ರೀ ಮಠದ ಪ್ರಾಂಗಣದಲ್ಲಿ ನಡೆಯಿತು.
ಹಿಮ್ಮೆಳದಲ್ಲಿ ಭಾಗವತರಾಗಿ ಹೊಸಮೂಲೆ ಗಣೇಶ್ ಭಟ್, ಆನಂದ ಸವಣೂರು ಹಾಗೂ ಚೆಂಡೆ ಮದ್ದಳೆಗಳಲ್ಲಿ ಲಕ್ಷ್ಮೀಶ ಅಮ್ಮಣ್ಣಾಯ, ಮುರಳೀಧರ ಕಲ್ಲೂರಾಯ ಮತ್ತು ಅಚ್ಯುತ ಪಾಂಗಣ್ಣಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಜೆ.ಸಿ. ಅಡಿಗ (ದೇವವ್ರತ), ಶುಭಾ ಗಣೇಶ್ (ಶಂತನು), ಗಾಯತ್ರಿ ಹೆಬ್ಬಾರ್ (ಕಂದರ), ಕಿಶೋರಿ ದುಗ್ಗಪ್ಪ ನಡುಗಲ್ಲು (ಯೋಜನಾಗಂಧಿ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ದೇವಳದ ಟ್ರಸ್ಟಿ, ಡಾ. ಸೀತಾರಾಮ ಭಟ್ ವಂದಿಸಿದರು. ಸರ್ವೆ ದೇವಳದ ಅರ್ಚಕ ಶ್ರೀರಾಮ ಕಲ್ಲೂರಾಯ ಪ್ರಾಯೋಜಿಸಿದ್ದರು.