ಕಾಸರಗೋಡು : ಪ್ರಖ್ಯಾತ ಸ್ವರ್ಣ ಉದ್ಯಮಿಗಳೂ, ಸಮಾಜಸೇವಕರೂ ಆಗಿದ್ದ ಶ್ರೀ ಜಿ.ಎಲ್. ಆಚಾರ್ಯ ಪುತ್ತೂರು ಇವರ ಶತಮಾನದ ಸ್ಮರಣೆ ಕಾರ್ಯಕ್ರಮವು ದಿನಾಂಕ 09 ಫೆಬ್ರವರಿ 2025ರಂದು ಶ್ರೀ ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯೊಂದಿಗೆ ಜರಗಲಿದೆ.
ಅಪರಾಹ್ನ 3-00 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮವನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಉದ್ಘಾಟಿಸಲಿದ್ದು, ಕರ್ನಾಟಕ ಸರಕಾರದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ. ಶ್ಯಾಮ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮುಖ್ಯ ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದು, ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನಾರಾಯಣ ಭಟ್ ಟಿ. ರಾಮಕುಂಜ ಇವರು ಸಂಸ್ಮರಣಾ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಶತಮಾನದ ನೆನಪಲ್ಲಿ ಕಿರುಹೊತ್ತಗೆ ‘ಬಂಗಾರ’ ಬಿಡುಗಡೆಗೊಳ್ಳಲಿದ್ದು, ಪತ್ರಕರ್ತ, ಯಕ್ಷಗಾನ ಕಲಾವಿದ ನಾ. ಕಾರಂತ ಪೆರಾಜೆ ಇವರು ಕೃತಿ ಪರಿಚಯ ಹಾಗೂ ವಿಶ್ರಾಂತ ಪ್ರಾಧ್ಯಾಪಕ ಡಾ. ಶ್ರೀಪತಿ ಕಲ್ಲೂರಾಯ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.
ಸಂಜೆ 5-00 ಗಂಟೆಯಿಂದ ‘ಆಚಾರ್ಯ ರತ್ನಾಕರ’ ವಿದ್ವಾನ್ ವಿಠಲ ರಾಮಮೂರ್ತಿ ಚೆನ್ನೈ ಇವರು ‘ವಿಪ್ರಹಾರ್ ಬಳಗ ಚೆನ್ನೈ’ ಇವರೊಂದಿಗೆ ಪ್ರಸ್ತುತಪಡಿಸುವ ‘ಕರ್ನಾಟಕ ಶೈಲಿಯ ವಿಶೇಷ ವಾದ್ಯಸಂಗೀತ’ ಜರಗಲಿದೆ. ವಯಲಿನ್‌ನಲ್ಲಿ ವಿದ್ವಾನ್ ವಿಠಲ ರಾಮಮೂರ್ತಿ ಚೆನ್ನೈ, ಮಂಡೋಲಿನ್‌ನಲ್ಲಿ ವಿದ್ವಾನ್ ವಿಶ್ವಾಸ್ ಹರಿ ಚೆನ್ನೈ, ಕೀಬೋರ್ಡ್‌ನಲ್ಲಿ ಪ್ರಣವ್ ಆರ್.ವಿ. ಚೆನ್ನೈ, ತಾಳವಾದ್ಯದಲ್ಲಿ ವಿದ್ವಾನ್ ಹರಿಹರನ್ ಸುಂದರ್ ರಾಮನ್ ಚೆನ್ನೈ ಜೊತೆಗೂಡಲಿದ್ದಾರೆ.