ಉಡುಪಿ : ನೃತ್ಯ ಸುಧಾ ಸಂಸ್ಥೆಯ ವತಿಯಿಂದ ಕರ್ನಾಟಕ ಕಲಾಶ್ರೀ ಕೀರ್ತಿಶೇಷ ಗುರು ಕಮಲಾ ಭಟ್ ಅವರಿಗೆ ಪುಷ್ಪ ನಮನ ಹಾಗೂ ನೃತ್ಯಾರ್ಚನೆ ‘ನೃತ್ಯ ಕಮಲಾರ್ಪಣಂ’ ಕಾರ್ಯಕ್ರಮವು ದಿನಾಂಕ 26 ಜನವರಿ 2025ರಂದು ಉಡುಪಿಯ ಯಕ್ಷಗಾನ ಕಲಾ ರಂಗದ ಐವೈಸಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ಅಕಾಡಮಿ ಆಫ್ ಫೈನ್ ಆರ್ಟ್ಸ್ ಪ್ರಾಧ್ಯಾಪಕ ವಿದ್ವಾನ್ ಮಾಲೂರು ಪಿ. ಬಾಲಸುಬ್ರಹ್ಮಣ್ಯಂ ಮಾತನಾಡಿ “ಯಾವುದೇ ಕಲಾ ಸಂಸ್ಥೆ 20ವರ್ಷಗಳನ್ನು ಪೂರೈಸುವದೆಂದರೆ ಅದೊಂದು ದೊಡ್ಡ ಸಾಧನೆಯ ಮೈಲಿಗಲ್ಲು! ಇದರಿಂದ ನೃತ್ಯ ಸುಧಾ ಸಂಸ್ಥೆಯ ಗುರುಗಳು ಮತ್ತು ವಿದ್ಯಾರ್ಥಿಗಳ ಜವಾಬ್ದಾರಿ ಹೆಚ್ಚಾಗಿದೆ. ಸಂಸ್ಥೆ ಇನ್ನಷ್ಟು ಬೆಳೆದು ಬೆಳಗಲಿ” ಎಂದು ಶುಭ ಹಾರೈಸಿದರು. ಉಡುಪಿ ಗೆರೆಬರೆ ಚಿತ್ರಕಲಾ ಕೇಂದ್ರದ ನಿರ್ದೇಶಕ ಜೀವನ್ ಶೆಟ್ಟಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು. ಹಿರಿಯ ವಿದ್ಯಾರ್ಥಿಗಳು ವಿದುಷಿಯರಾದ ನಿಧಿ ಸಾತ್ವಿಕ್ ಶೆಟ್ಟಿ, ಭಾಗೀರತಿ ಎಂ., ಸಿಂಚನಾ ಎಚ್.ಎಸ್. ಅನುಭವ ಹಂಚಿಕೊಂಡರು.
ಉಡುಪಿ ರಾಧಾಕೃಷ್ಣ ನೃತ್ಯ ನಿಕೇತನದ ನಿರ್ದೇಶಕಿ ವಿದುಷಿ ವೀಣಾ ಎಂ. ಸಾಮಗ, ಉಡುಪಿ ಶಾರದಾ ನಾಟ್ಯಾಲಯದ ಪಾವನ ರಾವ್, ನೃತ್ಯ ಸುಧಾ ಸಂಸ್ಥೆಯ ಅಧ್ಯಕ್ಷರಾದ ಡಾ. ಸುಧೀಂದ್ರ ರಾವ್ ಹಾಗೂ ಶ್ರೀಯಾ ರಾವ್ ಉಪಸ್ಥಿತರಿದ್ದರು.
ಅರ್ಪಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ನೃತ್ಯ ಸುಧಾ ಸಂಸ್ಥೆಯ ನಿರ್ದೇಶಕಿ ವಿದುಷಿ ಸೌಮ್ಯಾ ಸುಧೀಂದ್ರ ರಾವ್ ವಂದಿಸಿದರು.
1 Comment
Thanks so much 🙏