25 ಮಾರ್ಚ್ 2023, ಕಾಸರಗೋಡು: ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಮತ್ತು ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 25, 26ರಂದು ಕಾಸರಗೋಡಿನ ಪಾರೆಕಟ್ಟೆಯ ಕನ್ನಡ ಗ್ರಾಮದಲ್ಲಿ ನಡೆಯಲಿರುವ 2 ದಿನಗಳ ಪುಸ್ತಕ ಪ್ರೀತಿ ಬರಹ ಕಮ್ಮಟದ ಉದ್ಘಾಟನೆಯನ್ನು ಉದ್ಯಮಿ ಶ್ರೀಯುತ ರಾಮ ಪ್ರಸಾದ ಕಾಸರಗೋಡು ಅವರು ನೆರವೇರಿಸಿದರು.
ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ನಿರ್ದೇಶಕ ಗೋಪಾಡ್ಕರ್ ಅವರು ಓದುಗ ವಲಯದಲ್ಲಿ ಬೇಡಿಕೆ ಸೃಷ್ಠಿಸಿ ಬರಹ ಸಾಧ್ಯತೆಯನ್ನು ಕಂಡುಕೊಳ್ಳುವ ಬಗೆಯ ಹೊಸ ಪ್ರಯೋಗವನ್ನು ಮಾಡುವ ಬಗೆಗೆ ಮಾತನಾಡಿದರು.
ಸಾಹಿತಿಗಳಾದ ರಾಧಾಕೃಷ್ಣ ಉಳಿಯತ್ತಡ್ಕ, ಕೆಳಚ್ಚಪ್ಪ ಗೋವಿಂದ ಭಟ್, ವಿಷ್ಣು ಕೆ. ಶ್ಯಾನುಭೋಗ್, ಜಾದೂಗಾರ ಮಾಧವ ಕಾಸರಗೋಡು, ಕಾರ್ಟೂನಿಸ್ಟ್ ವೆಂಕಟ ಭಟ್ ಎಡನೀರು ಅವರು ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.
ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಾರ್ಯಾಗಾರದಲ್ಲಿ ಸ್ಮರಣಶಕ್ತಿ, ಮನೋವಿಜ್ಞಾನ ಮತ್ತು ಕ್ರಿಯಾಶೀಲ ಬರಹ ಸಾಧ್ಯತೆಯ ಬಗೆಗೆ ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್ ಹಾಗೂ ಸುಮಾಡ್ಕರ್ ಅವರು ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು.