ಬೆಂಗಳೂರು : ವಿಜಯನಗರ ಬಿಂಬ ರಂಗ ಶಿಕ್ಷಣ ಕೇಂದ್ರ ಮಕ್ಕಳ ವಿಭಾಗದಲ್ಲಿ 3ರಿಂದ 8 ಮತ್ತು 8ರಿಂದ 15 ವರ್ಷದ ಮಕ್ಕಳಿಗೆ ಎರಡು ವಿಭಾಗಗಳಲ್ಲಿ ರಂಗ ತರಬೇತಿಯ ಬೇಸಿಗೆ ಶಿಬಿರ ಆರಂಭವಾಗಲಿದ್ದು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದಾಗಿದೆ.
3ರಿಂದ 8 ವರ್ಷದ ಮಕ್ಕಳಿಗೆ ‘ಚಿಣ್ಣರ ಚಿತ್ತಾರ’ ಬೇಸಿಗೆ ಶಿಬಿರವು ದಿನಾಂಕ 05 ಏಪ್ರಿಲ್ 2025ರಿಂದ 14 ಏಪ್ರಿಲ್ 2025ರವರೆಗೆ ಬೆಳಗ್ಗಿನ ಬ್ಯಾಚ್ 10-00 ಗಂಟೆಯಿಂದ 1-00 ಗಂಟೆ ತನಕ ಹಾಗೂ ಸಂಜೆ ಬ್ಯಾಚ್ 4-00 ಗಂಟೆಯಿಂದ 7-00 ಗಂಟೆ ತನಕ ನಡೆಯಲಿದೆ. ನಟನೆ, ರಂಗಾಟ, ಚಿತ್ರಕಲೆ, ಕ್ರಾಫ್ಟ್, ಹಾಡುಗಳು, ಚಿತ್ರಕಲಾ ಪ್ರದರ್ಶನ ಮತ್ತು ಮಕ್ಕಳಿಂದಲೇ ನಾಟಕ ಪ್ರದರ್ಶನ ನಡೆಯಲಿದೆ.
8ರಿಂದ 15 ವರ್ಷದ ಮಕ್ಕಳಿಗೆ ‘ಚಿಣ್ಣರ ಚಾವಡಿ’ ಬೇಸಿಗೆ ಶಿಬಿರವು ದಿನಾಂಕ 15 ಏಪ್ರಿಲ್ 2025ರಿಂದ 29 ಏಪ್ರಿಲ್ 2025ರವರೆಗೆ ಮೊದಲ ವಾರ ಬೆಳಗ್ಗೆ 9-30 ಗಂಟೆಯಿಂದ 4-00 ಗಂಟೆ ತನಕ ಹಾಗೂ ಎರಡನೇ ವಾರ ಬೆಳಗ್ಗೆ 9-30 ಗಂಟೆಯಿಂದ 7-30 ಗಂಟೆ ತನಕ ನಡೆಯಲಿದೆ. ನಟನೆ, ರಂಗಾಟ, ಚಿತ್ರಕಲೆ, ಕ್ರಾಫ್ಟ್, ಹಾಡುಗಳು, ನೃತ್ಯ, ರಂಗಚಲನೆ, ವಿಶೇಷ ಕಾರ್ಯಕ್ರಮಗಳು – ಮೀಡಿಯಾ ಹಬ್ಬ, ಸಂವಾದ, ಮಕ್ಕಳ ಕವಿ ಮೇಳ, ಪ್ರಶ್ನಾರ್ಥ ಮತ್ತು ಮಕ್ಕಳಿಂದಲೇ ನಾಟಕ ಪ್ರದರ್ಶನ ನಡೆಯಲಿದೆ.
ದಾಖಲಾತಿ ದಿನಾಂಕ 09 ಫೆಬ್ರವರಿ 2025ರಂದು ಆರಂಭವಾಗಲಿದ್ದು, ಹೆಚ್ಚಿನ ಮಾಹಿತಿಗಾಗಿ 9845265967, 9844152967, 9880033018, 9845734967 ಮತ್ತು 9844017881 ಸಂಖ್ಯೆಯನ್ನು ಸಂಪರ್ಕಿಸಿರಿ.