Subscribe to Updates

    Get the latest creative news from FooBar about art, design and business.

    What's Hot

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ತಂದೆ ಬದುಕು ಗುಲಾಬಿ’

    December 17, 2025

    ಹುಬ್ಬಳ್ಳಿಯಲ್ಲಿ ಮಿಂಚಿದ ‘ಶನಿ ಮಹಾತ್ಮೆ’ ಕನ್ನಡ ಪೌರಾಣಿಕ ನಾಟಕ ಪ್ರದರ್ಶನ

    December 17, 2025

    ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ 2025ನೇ ಸಾಲಿನ ಪ್ರಶಸ್ತಿ ಪ್ರಕಟ

    December 17, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಲಾಭಿ ಮಂಗಳೂರು ವತಿಯಿಂದ “ಪುರ್ಸನ ಪುಗ್ಗೆ” ಗೊಂಬೆಯಾಟ ಕಾರ್ಯಾಗಾರದ ಕಲಿಕಾ ಪ್ರಸ್ತುತಿ ಮಾರ್ಚ್ 28ಕ್ಕೆ
    News

    ಕಲಾಭಿ ಮಂಗಳೂರು ವತಿಯಿಂದ “ಪುರ್ಸನ ಪುಗ್ಗೆ” ಗೊಂಬೆಯಾಟ ಕಾರ್ಯಾಗಾರದ ಕಲಿಕಾ ಪ್ರಸ್ತುತಿ ಮಾರ್ಚ್ 28ಕ್ಕೆ

    March 27, 2023Updated:August 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    27 ಮಾರ್ಚ್ 2023, ಮಂಗಳೂರು: ಕಲಾಭಿ ಮಂಗಳೂರು ಪ್ರಸ್ತುತ ಪಡಿಸುವ ಬುನ್ರಾಕು ಗೊಂಬೆಯಾಟ ಕಾರ್ಯಾಗಾರದ ಕಲಿಕಾ ಪ್ರಸ್ತುತಿ ‘’ಪುರ್ಸನ ಪುಗ್ಗೆ‘’ ಇದೇ ಬರುವ ದಿನಾಂಕ 28-03-2023ರಂದು ಸಂಜೆ 6.30ಕ್ಕೆ ಕಲಾಭಿ ಥಿಯೇಟರ್, ಮಾಲೆಮಾರ್, ಮಂಗಳೂರು ಇಲ್ಲಿ ನಡೆಯಲಿದೆ.

    ಬುನ್ರಾಕು ಗೊಂಬೆಯಾಟ ಮೂಲತಃ ಜಪಾನಿನ ಜಾನಪದ ಕಲೆಯಾಗಿದ್ದು, ಜಪಾನಿನ ಅತ್ಯಂತ ಪ್ರಾಚೀನ ಹಾಗೂ ಪ್ರಸಿದ್ಧ ಕಲಾ ಪ್ರಕಾರವಾಗಿದೆ. ತನ್ನ ಉತ್ಕೃಷ್ಟ ಕಲಾತ್ಮಕ ತಂತ್ರಗಾರಿಕೆ ಹಾಗೂ ಸೂತ್ರಗಳು ಇಲ್ಲದೆಯೇ ನೇರ ಕೈಗಳ ಬಳಕೆಯಿಂದ ಗೊಂಬೆಗಳಿಗೆ ಜೀವ ತುಂಬುವ ಕ್ರಮದಿಂದಾಗಿ ರಂಗದ ಮೇಲೆ ನಮ್ಮ ವಾಸ್ತವಕ್ಕೆ ತೀರಾ ಹತ್ತಿರ ಎಂಬುವಷ್ಟು ಭಾವನೆ, ಚಲನವಲನಗಳ ಸಾದ್ಯತೆಗಳನ್ನು ಕಲ್ಪಿಸಿ ಬೇರೆ ಎಲ್ಲ ಮಾದರಿಯ ಗೊಂಬೆಗಳಿಂದ ಭಿನ್ನವಾಗಿ ನಿಲ್ಲುವುದು ಇದರ ವಿಶೇಷತೆ. ಇಲ್ಲಿ ಮೂರು ಜನ ಸೇರಿ ಒಂದು ಬೊಂಬೆಯನ್ನು ಅಡಿಸುತ್ತಿರುತ್ತಾರೆ. ಪ್ರಸ್ತುತ ನಾಟಕದಲ್ಲಿ ಬರುವ ಗೊಂಬೆಗಳು ಈ ಬುನ್ರಾಕು ಕಲಾಪ್ರಕಾರದ ಪ್ರಭಾವದಿಂದ ಹುಟ್ಟಿ ಕಥಾವಸ್ತುವಿಗನುಸಾರ ತನ್ನ ಕೆಲವು ಮೂಲ ಜಾನಪದ ಅಂಶಗಳನ್ನು ತೊರೆದು ಸಮಕಾಲೀನ ಶೈಲಿಯಲ್ಲಿ ವಿನ್ಯಾಸಗೊಂಡಿದೆ.

    ನಿರ್ದೇಶಕರು: ಶ್ರವಣ ಹೆಗ್ಗೋಡು ಭಾರತೀಯ ರಂಗಭೂಮಿಯಲ್ಲಿ ತನ್ನದೇ ಆದ ವಿನೂತನ ರಂಗಶೈಲಿಯ ಮೂಲಕ ಗುರುತಿಸಿಕೊಂಡ ಸೃಜನಶೀಲ ನಿರ್ದೇಶಕ. ನಿನಾಸಮ್ ಪದವಿ ಪಡೆದ ನಂತರ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಬೆಂಗಳೂರು ಇಲ್ಲಿ ರಂಗವಿನ್ಯಾಸದ ಮೇಲೆ ವಿಶೇಷ ಅಧ್ಯಯನ ಮಾಡಿರುತ್ತಾರೆ. ಇವರು ನಿದೇಶಿಸಿದ ಪಪ್ಪೆಟ್ ನಾಟಕಗಳು ಟರ್ಕಿ, ಚೀನಾ, ಜಮರ್ನಿ, ಅಸ್ಟ್ರಿಯಾ ದೇಶಗಳ ಪ್ರತಿಷ್ಠಿತ ಪಪ್ಪೆಟ್ ರಂಗ ಉತ್ಸವಗಳಲ್ಲಿ ಪ್ರದರ್ಶನಗೊಂಡು ಜನಮೆಚ್ಚುಗೆ ಗಳಿಸಿವೆ.

    ಬುನ್ರಾಕು ಗೊಂಬೆಯಾಟ: ಜಪಾನಿನ ಬುನ್ರಾಕು ಮಾದರಿಯಲ್ಲಿ ನಿರ್ಜೀವ ಗೊಂಬೆಗಳಿಗೆ ರಂಗದ ಮೇಲೆ ಜೀವ-ಭಾವ ತುಂಬುವುದನ್ನು ಕರಗತ ಮಾಡಿಕೊಂಡಿರುವ ಇವರು, ಈ ನವೀನ ಮಾದರಿಯ ಪ್ರಯೋಗವನ್ನು ದಕ್ಷಿಣ ಭಾರತದ ರಂಗಭೂಮಿಗೆ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಅಳವಡಿಸಿದ್ದಾರೆ. “ರೆಕ್ಸ್ ಅವರ್ಸ್”, “ಸರ್ಕಲ್ ಆಫ್ ಲೈಫ್”, “ಪ್ಲಾಸ್ಟಿಸಿಟಿ”, “ಹಕ್ಕಿ ಕಥೆ”, “ಬೈರ”, “ಎ ಬಾಯ್ ಎಂಡ್ ದ ಬಲೂನ್” ಮುಂತಾದವುಗಳು ಶ್ರವಣ್‌ ನಿದೇರ್ಶನದ ಪ್ರಮುಖ ನಾಟಕಗಳು, ನಾಟಕಗಳಿಗನುಸಾರ ಮತ್ತು ಅದರ ಕಥಾವಸ್ತುವಿಗನುಸಾರ ಬೊಂಬೆಗಳನ್ನು ಮತ್ತು ರಂಗಸಜ್ಜಿಕೆ ಪರಿಕರಗಳನ್ನು ವಿನ್ಯಾಸಗೊಳಿಸಿ ಸ್ವತಃ ತಯಾರು ಮಾಡಿ ಪ್ರಯೋಗಿಸುವುದು ಇವರ ನಾಟಕದ ವಿಶೇಷತೆಯಾಗಿದೆ.

    ನಾಟಕಕಾರ: ಫ್ರೆಂಚ್ ಬರಹಗಾರ ಮತ್ತು ಮಕ್ಕಳ ಚಲನಚಿತ್ರ ನಿರ್ದೇಶಕ ಆಲ್ಬರ್ಟ್ ಲೆಮೊರಿಸ್ಸೆನ ಸಣ್ಣಕಥೆಯೊಂದನ್ನು ಆಧರಿಸಿ ಪ್ರಸ್ತುತ ಪ್ರಯೋಗವನ್ನು ಕಟ್ಟಿಕೊಳ್ಳಲಾಗಿದೆ. ತನ್ನ ಸಹಪಾಠಿಗಳ ಉಪಟಳದಿಂದ ಬೇಸತ್ತು ಸರಳ ಸ್ನೇಹಕ್ಕೆ ಹಾತೊರೆಯುತ್ತಿರುವ ಅರೇಳು ವರ್ಷಗಳ ಬಾಲಕ ಪುರ್ಸನಿಗೆ ಅನಿರೀಕ್ಷಿತವಾಗಿ ವಿಶೇಷವಾದ ಪುಗ್ಗೆಯೊಂದು ದೊರಕುತ್ತದೆ. ಪುಗ್ಗೆ ಮತ್ತು ಪುರ್ಸನ ನಡುವೆ ಅನಿರ್ವಚನೀಯ ಸಂಬಂಧವೊಂದು ಏರ್ಪಡುತ್ತದೆ. ಬೇರೆ ಯಾರ ಕೈಗೂ ಸಿಗದೇ ಪುರ್ಸನೊಂದಿಗೆ ಮಾತ್ರ ಎಲ್ಲೆಡೆ ತಿರುಗಾಡುವ ಪುಗ್ಗೆಯನ್ನು ಕಂಡು ಅಸೂಯೆಯಿಂದ ಕೆಲ ಪೊಲೀ ಹುಡುಗರು ಪುರ್ಸ ಹಾಗೂ ಪುಗ್ಗೆಯ ಬೆನ್ನು ಹತ್ತುತ್ತಾರೆ. ಪುಗ್ಗೆಯನ್ನು ಒಡೆದು ಹಾಕಲು ಹವಣಿಸುತ್ತಾರೆ. ಆದರೆ ಇಡೀ ಪಟ್ಟಣದ ಎಲ್ಲಾ ಪುಗ್ಗೆಗಳು ಒಟ್ಟಾಗಿ ಬಂದು ಪುರ್ಸನನ್ನು ಸಂತೈಸುವ ವಿಶಿಷ್ಟ ದೃಶ್ಯದೊಂದಿಗೆ ತೆರೆ ಬೀಳುತ್ತದೆ.

    ಕಲಾಭಿ ಥಿಯೇಟರ್: ಇದು ಕಲಾಭಿಮಾನಿಗಳ ಕಲಾಭಿವ್ಯಕ್ತಿ, ಕಲೆಯ ಅಪ್ರಕಟಿತ ಸಮ್ಮೋಹಕ ಸೌಂದರ್ಯವನ್ನು ಹಂಚುವುದು ನಮ್ಮ ಧ್ಯೇಯ. ನಮ್ಮ ಈ ಕಲ್ಪನೆಗಳ ತುಡಿತಕ್ಕೆ ನಿಮ್ಮ ಅಸ್ವಾದನೆಗಳ ಮಿಡಿತವೇ ನಮಗೆ ಆಶೀರ್ವಾದ. ಈ ಹಾದಿಯಲ್ಲಿ ನಾವಿಡುವ ಪ್ರತಿಹೆಜ್ಜೆಯೂ ನಮಗೆ ಕಲಿಕೆ. ಇದು ನಮ್ಮ ಚಿಕ್ಕ ಕುಟುಂಬ, ದೊಡ್ಡ ಕನಸು ಮತ್ತು ಅರ್ಥಪೂರ್ಣ ಪಾಠಶಾಲೆ.

    ತಂಡದಲ್ಲಿ: ಅಭಿಷೇಕ್ ಬಿ.ಎಚ್‌, ಅವಿನಾಶ್ ರೈ, ಅಕ್ಷತಾ ಕುಡ್ಲ, ಉಜ್ವಲ್ ಯು.ಬಿ., ಉದಿತ್ ಯು.ವಿ., ಕಾರ್ತಿಕ್ ಸನಿಲ್, ಗಣೇಶ್‌ ಕೆ.ವಿ., ಚೇತನ್, ಚೇತನ್ ಕೊಪ್ಪ, ದುರ್ಗೇಶ್, ಭುವನ್ ಮಣಿಪಾಲ್, ಮಹೇಶ್‌.

    Share. Facebook Twitter Pinterest LinkedIn Tumblr WhatsApp Email
    Previous Articleವಾಸುದೇವ ನಾಡಿಗ್ ಮತ್ತು ರತ್ನಾಕರ ಕುನಗೋಡು ಇವರಿಗೆ ಸು.ರಂ.ಎಕ್ಕುಂಡಿ ಜನ್ಮ ಶತಮಾನೋತ್ಸವ ಕಾವ್ಯ ಪ್ರಶಸ್ತಿ
    Next Article ವಿಶ್ವ ರಂಗಭೂಮಿ ದಿನಾಚರಣೆ: ಕರಾವಳಿಯ ರಂಗಭೂಮಿಯ ಹರಿಕಾರ “ಕೆ.ಎನ್.ಟೈಲರ್”
    roovari

    Add Comment Cancel Reply


    Related Posts

    ನಾಣಿ ಅಂಗಳದಲ್ಲಿ ‘ಮಾಯಾ ಬೇಟೆ’ ನಾಟಕ ಪ್ರದರ್ಶನ | ಡಿಸೆಂಬರ್ 20

    December 17, 2025

    ಮಣಿ ಕೃಷ್ಣಸ್ವಾಮಿ ಅಕಾಡೆಮಿಯಿಂದ ‘ರಾಗ ಸುಧಾರಸ 2025’ | ಡಿಸೆಂಬರ್ 13ರಿಂದ 20

    December 13, 2025

    ಸ್ವರ, ತಾಳ, ಲಯಗಳ ಮಿಲನವೇ ಸಂಗೀತ – ನಿವೃತ್ತ ಡಿವೈಎಸ್ಪಿ ಟಿ.ಪಿ. ರಂಜಿತ್

    November 27, 2025

    ನೃತ್ಯಾಂತರಂಗದಲ್ಲಿ ಅಮೇರಿಕಾದ ಕಲಾವಿದೆಯಿಂದ ಅದ್ಭುತ ಕೂಚಿಪುಡಿ ನೃತ್ಯ

    November 27, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.