ಬಂಟ್ವಾಳ : ಶ್ರೀನಿವಾಸ ಯುನಿವರ್ಸಿಟಿ ಮತ್ತು ಶ್ರೀನಿವಾಸ ಸಂಸ್ಥೆ ಮಂಗಳೂರು ಇವರು ಎ. ಶ್ಯಾಮರಾವ್ ಸ್ಮರಣಾರ್ಥ ಅತ್ಯುತ್ತಮ ಶಿಕ್ಷಕರಿಗೆ ನೀಡುವ ನೀಡುವ ‘ಸಾಧನಾ ಶ್ರೀ -2025’ ಪ್ರಶಸ್ತಿಗೆ ಪಾಣೆಮಂಗಳೂರು ಪ್ರೌಢಶಾಲೆಯ ಶಿಕ್ಷಕಿ ಸುಧಾ ನಾಗೇಶ್ ಆಯ್ಕೆಯಾಗಿದ್ದಾರೆ.
ಕಳೆದ 35 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ಸಾಹಿತಿಯಾಗಿಯೂ ಗುರುತಿಸಲ್ಪಟ್ಟಿದ್ದಾರೆ. ‘ಮೂಡಲ ಮನೆ’,’ ಹೃದಯರಾಗ’, ‘ಹೀಗೆ ಸುಮ್ಮನೆ’, ‘ಹನಿ, ಮಿನಿ ಎನ್ ಸೈಕ್ಲೋಪೀಡಿಯ ಫಾರ್ ಸ್ಟೂಡೆಂಟ್ಸ್’ ,’ ಜೀನಿಯಸ್’ ಮೊದಲಾದ ಎಂಟು ಸಾಹಿತ್ಯ ಕೃತಿಗಳನ್ನು ಇವರು ಪ್ರಕಟಿಸಿದ್ದಾರೆ.
ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷೆಯಾಗಿರುವ ಇವರು ನೂರಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದು, ದುಬೈಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯೆಯಾಗಿದ್ದು , ಇವರ “ಬೇಸಿಗೆಯ ತಾಪಕ್ಕೆ ಬಿಸಿಯೇರುತ್ತಿದೆ ಭೂಮಿ” ಲೇಖನವು ಕೇರಳ ರಾಜ್ಯದ 6ನೇ ತರಗತಿಯ ಪಠ್ಯಪುಸ್ತಕವಾಗಿದೆ.
ಈ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 14 ಫೆಬ್ರವರಿ 2025ರಂದು ಶ್ರೀನಿವಾಸ ಕಾಲೇಜು ಮುಕ್ಕದಲ್ಲಿ ನಡೆಯಲಿದೆ.
Subscribe to Updates
Get the latest creative news from FooBar about art, design and business.
Previous Articleಕಥೆ – ಸಾಮಾಜಿಕ ಜಾಗೃತಿ | ‘ಮುರಿದ ಮರದ ಗೇಟು’ – ಗಿರೀಶ್ ಎಂ. ಎನ್.
Next Article ವಿಶೇಷ ಲೇಖನ | ರಂಗಭೂಮಿಯ ರಾಯಭಾರಿ ಶ್ರೀನಿವಾಸ ಜಿ. ಕಪ್ಪಣ್ಣ