ಬೆಂಗಳೂರು : ರಂಗ ಶಂಕರ ಮತ್ತು ಸಮುದಾಯ ಬೆಂಗಳೂರು ಅರ್ಪಿಸುವ ಗೇಬ್ರಿಯಲ್ ಗಾರ್ಸಿಯಾ ಮಾಕ್ವೇಜ್ ಕಾದಂಬರಿ ಆಧರಿತ ‘ಕರ್ನಲ್ ಗೆ ಯಾರೂ ಬರೆಯೋದಿಲ್ಲ’ ನಾಟಕ ಪ್ರದರ್ಶನವನ್ನು ದಿನಾಂಕ 16 ಫೆಬ್ರವರಿ 2025ರಂದು ಮಧ್ಯಾಹ್ನ ಗಂಟೆ 3-30 ಮತ್ತು ಸಂಜೆ ಗಂಟೆ 7-30ಕ್ಕೆ ಬೆಂಗಳೂರಿನ ರಂಗ ಶಂಕರದಲ್ಲಿ ಹಮ್ಮಿಕೊಳ್ಳಲಾಗಿದೆ.
ಶ್ರೀನಿವಾಸ ವೈದ್ಯ ಈ ನಾಟಕದ ಅನುವಾದ ಮಾಡಿದ್ದು, ಕೆ.ಪಿ. ಲಕ್ಷ್ಮಣ ಇವರು ಪಠ್ಯ ಮತ್ತು ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 8884929549 ಮತ್ತು 9901299228 ಸಂಖ್ಯೆಯನ್ನು ಸಂಪರ್ಕಿಸಿರಿ.
ನೊಬೆಲ್ ಪ್ರಶಸ್ತಿ ವಿಜೇತ ಗೇಬ್ರಿಯೆಲ್ ಗಾರ್ಸಿಯ ಮಾರ್ಕ್ವೆಝ್ ರ ನೀಳ್ಗತೆ ‘No one writes to the colonel’ ನ ಕನ್ನಡ ರಂಗರೂಪ ಇಂದಿನ ನಾಟಕ ‘ಕರ್ನಲ್ ಗೆ ಯಾರೂ ಬರೆಯುವುದಿಲ್ಲ’. ರಂಗಶಂಕರದ ಸಹಯೋಗದೊಂದಿಗೆ ಸಮುದಾಯ, ಬೆಂಗಳೂರು ಪ್ರಸ್ತುತಿ ಪಡಿಸುವ ಈ ನಾಟಕದ ನಿರ್ದೇಶಕರು ಕೆ.ಪಿ. ಲಕ್ಷ್ಮಣ್. ಮಾರ್ಕ್ವೆಝ್ ರ ಈ ಕಥೆ ವಿಶ್ವಾದ್ಯಂತ ಅತ್ಯಂತ ಪ್ರಸಿದ್ಧಿ ಪಡೆದ ಕಥೆ. ಬಡತನದ ಬೇಗೆಯಲ್ಲಿ ಹೆಂಡತಿಯ ಜೊತೆ ದಿನ ತಳ್ಳುತ್ತಿರುವ ಕರ್ನಲ್ ಈ ಕಥೆಯ ಮುಖ್ಯ ಪಾತ್ರ. ರಾಜಕೀಯ ವ್ಯವಸ್ಥೆ, ಆರ್ಥಿಕ ಅಸಮಾನತೆ, ಆತ್ಮಗೌರವ ಇವೆಲ್ಲವನ್ನೂ ಮಾರ್ಕ್ವೆಝ್ ವಿಸ್ಮಯಕಾರಿಯಾಗಿ ಕಥೆಯಲ್ಲಿ ಅಡಕ ಮಾಡಿದ್ದಾರೆ ಮತ್ತು ಈ ಕಥೆಯನ್ನು ಅಷ್ಟೇ ಸಮರ್ಥವಾಗಿ ಕೆ.ಪಿ. ಲಕ್ಷ್ಮಣ್ ರಂಗದ ಮೇಲೆ ತಂದಿದ್ದಾರೆ.