ಬೆಂಗಳೂರು : ಕರ್ನಾಟಕ ಲಲಿತಕಲಾ ಅಕಾಡೆಮಿಯ 2021 ಮತ್ತು 2022ನೇ ಸಾಲಿನ ‘ವರ್ಣಶ್ರೀ’ ಪ್ರಶಸ್ತಿ ಹಾಗೂ 2022- 2023ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ 51-52ನೇ ವಾರ್ಷಿಕ ಕಲಾ ಬಹುಮಾನ ಪ್ರಕಟಗೊಂಡಿದೆ. 2022 ಮತ್ತು 2023ನೇ ಸಾಲಿನ ಗೌರವ ಪ್ರಶಸ್ತಿಗೆ ತಲಾ ಮೂವರು ಸಾಧಕರು ಆಯ್ಕೆಯಾಗಿದ್ದಾರೆ. 2022ನೇ ಸಾಲಿಗೆ ಗದಗದ ಕಮಲ್ ಅಹಮದ್, ತುಮಕೂರಿನ ನಿರ್ಮಲಾ ಕುಮಾರಿ, ಬೆಂಗಳೂರಿನ ಬಿ. ಪಿ. ಕಾರ್ತಿಕ್ ಮತ್ತು 2023ನೇ ಸಾಲಿನ ಪ್ರಶಸ್ತಿಗೆ ಯಾದಗಿರಿಯ ನಿಜಲಿಂಗಪ್ಪ ಹಾಲ್ವಿ, ಹುಬ್ಬಳ್ಳಿಯ ವಿಠಲ ರೆಡ್ಡಿ ಚುಳಕಿ ಹಾಗೂ ಕಲಬುರಗಿಯ ಎಚ್. ಬಾಬೂರಾವ್ ಆಯ್ಕೆಗೊಂಡಿದ್ದಾರೆ.
ವರ್ಣಶ್ರೀ ಪ್ರಶಸ್ತಿ:
2021-22ನೇ ಸಾಲಿನ ‘ವರ್ಣಶ್ರೀ’ ಪ್ರಶಸ್ತಿಗೆ ಮಂಗಳೂರಿನ ವೀಣಾ ಶ್ರೀನಿವಾಸನ್, ಬಾಗಲಕೋಟೆಯ ಪರಮೇಶ ಜೋಳದ, ರಾಯಚೂರಿನ ಪಿ. ಎ. ಬಿ.ಈಶ್ವರ, ಪುಣೆಯ ಕುಡಲಯ್ಯ ಹಿರೇಮಠ, ತುಮಕೂರಿನ ಅಶೋಕ ಕಲ್ಲಶೆಟ್ಟಿ, ವಿಜಯಪುರದ ನಂದಬಸಪ್ಪ ವಾಡೆ, ರಾಮನಗರದ ಕೆ. ಜಿ. ಲಿಂಗದೇವರು, ಮಡಿಕೇರಿಯ ಬಿ.ಮಹೇಶ್, ಹುಬ್ಬಳ್ಳಿಯ ಶಕುಂತಲಾ ವರ್ಣೇಕರ ಮತ್ತು ಬಳ್ಳಾರಿಯ ಜಿ.ಮಂಜುನಾಥ ಆಯ್ಕೆಯಾಗಿದ್ದಾರೆ. 2022-23ನೇ ಸಾಲಿನ’ ವರ್ಣಶ್ರೀ’ ಪ್ರಶಸ್ತಿಗೆ ಶಿರಸಿಯ ಪ್ರಕಾಶ್‌ನಾಯಕ್, ಗದಗದ ಬಸವರಾಜ ಸಿ. ಕುತ್ನಿ, ಕಲಬುರಗಿಯ ಜಗದೀಶ್ ಕಾಂಬ್ಲೆ, ಹಾಸನದ ಟಿ. ಜಯದೇವಣ್ಣ, ಬಾಗಲಕೋಟೆಯ ಶೈಲದೊತ್ರೆ, ಚಾಮರಾಜನಗರದ ಸಿ. ಮಹದೇವಸ್ವಾಮಿ, ಬೆಳಗಾವಿಯ ಮೀನಾಕ್ಷಿ ಸದಲಗಿ, ತುಮಕೂರಿನ ಕೆ. ಎಂ. ರವೀಶ್, ಧಾರವಾಡದ ಎಫ್. ವಿ. ಚಿಕ್ಕಮಠ ಮತ್ತು ಮಂಗಳೂರಿನ ಸಯ್ಯದ್ ಅಸೀಫ್ ಆಲಿ ಆಯ್ಕೆಗೊಂಡಿದ್ದಾರೆ.
51ನೇ ವಾರ್ಷಿಕ ಕಲಾ ಬಹುಮಾನಕ್ಕೆ ಆಯ್ಕೆಯಾದ ಕಲಾವಿದರು ಮತ್ತು ಕಲಾಕೃತಿಗಳು:
ಶಿವಪ್ರಸಾದ ಇವರ ‘ವರ್ಲ್ಡ್ಸ್ ಯು ಲವ್’ ಕಲಾಕೃತಿ, ಬಿ. ಎಲ್. ಭಾನುಪ್ರಕಾಶ್ ಇವರ ‘ಟ್ರಾವೆಲ್ಸ್ ಆ್ಯಂಡ್ ರೆಪ್ಲೆಕ್ಷನ್’ ಸೀರಿಸ್-1, ರಾಜೇಂದ್ರ ಕೇದಿಗೆ ಇವರ ‘ದ ಅನ್‌ಡಿಫೈನಡ್’, ರೋಷ್ ರವೀಂದ್ರನ್ ಇವರ ‘ಫೆಸೆಟ್ಸ್ ಸೆಟಲ್ಸ್’, ವರ್ಣಂ ನಾರಾಯಣ ಇವರ ‘ವಿಲೇಜ್/ಸಿಟಿ’, ಅಮೋಘರಾಜ್ ಡಿ.ಬಾಲಿ ಇವರ ‘ರೀಸೈಕಲ್’, ಗಿರೀಶ್ ಬಿ.ಕುಲಕರ್ಣಿ ಇವರ ‘ಮರಳಿ ಗೂಡಿಗೆ’, ಪಿ. ನಾಗರಾಜು ಇವರ ‘ಜೀವನದ ಪ್ರಯಾಣದ ನಡುವೆ ಭಾವೋದ್ರೇಕ’, ಹಣಮಂತ ಮಲ್ಕಾಪುರ ಇವರ ‘ಫಸ್ಟ್‌ಜೆನರೇಷನ್’, ಕೃಷ್ಣಾಚಾರಿ ಇವರ ‘ಜೀವನಕ್ಕಾಗಿ ಕಲಾಕೃತಿಗಳು’ ಆಯ್ಕೆಯಾಗಿವೆ.
52ನೇ ವಾರ್ಷಿಕ ಕಲಾ ಬಹುಮಾನಕ್ಕೆ ಡಾ. ರೆಹಮಾನ್ ಪಟೇಲ್ ಇವರ ‘ಮದ್ಯಮಾದಿರಾಗ ’ಕಲಾಕೃತಿ, ಕೆ. ಪ್ರಶಾಂತ ಇವರ ‘ಸಂಸ್ಕೃತಿ ಚಲನೆ’, ಎಸ್. ಅರುಳ್ ದೇವನ್ ಇವರ ‘ಅನೌನ್ ಮೆಟಮೊರ್ಫಾಸಿಸ್’-1, ಬ್ಪಿನೆಲ್ ಮರಿಯಾ ಇವರ ‘ಅನ್‌ಹೋಮ’, ಎಂ. ಗೌತಮಿ ಇವರ ‘ಬಿನೆತ್ ದ ಸರ್ಫೆಸ್’, ರಮೇಶ್ ಚವ್ಹಾಣ ಇವರ ‘ಯುನೈಟೆಡ್-2’, ಸಂತೋಷ ಪತ್ತಾರ ಇವರ ‘ಚಂಚಲೆ’, ಎನ್. ಚೈತ್ರ ಇವರ ‘ಅನ್‌ಟೈಟಲ್ಡ್’, ಶಿವರಾಮು ಇವರ ‘ಆಸರೆ’, ಎನ್. ದಯಾನಂದ ಇವರ ‘ಕಣಜ’ ಕಲಾಕೃತಿಗಳು ಬಹುಮಾನ ಮತ್ತು ಪ್ರದರ್ಶನಕ್ಕೆ ಆಯ್ಕೆಯಾಗಿವೆ.
ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿಯು ತಲಾ ರೂಪಾಯಿ 50 ನಗದು, ‘ವರ್ಣಶ್ರೀ’ ಪ್ರಶಸ್ತಿಯು ತಲಾ 25 ಸಾವಿರ ನಗದು ಮತ್ತು ವಾರ್ಷಿಕ ಕಲಾ ಪ್ರದರ್ಶನದ 20 ಉತ್ತಮ ಕಲಾಕೃತಿಗಳಿಗೆ ತಲಾ 25 ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಪ. ಸ. ಕುಮಾರ್ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Previous Articleಮಂಗಳೂರಿನ ಡಾ. ಬಿ.ಎ. ವಿವೇಕ ರೈಯವರಿಗೆ ‘ಪಂಪ ಪ್ರಶಸ್ತಿ’