29 ಮಾರ್ಚ್ 2023, ಪುತ್ತೂರು: ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಮತ್ತು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇವರು ಪಾಕ್ಷಿಕ ತಾಳಮದ್ದಳೆಯ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದ್ದಾರೆ. ಒಂದೇ ದಿನದಲ್ಲಿ ಎರಡೆರದು ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದ ಖ್ಯಾತಿ ಇವರದ್ದು.
ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಸದಸ್ಯರಿಂದ ದಿನಾಂಕ 25.03.2023ರಂದು ಸಂಜೆ ಶ್ರೀ ಆಂಜನೇಯ ಮಂತ್ರಾಲಯದಲ್ಲಿ “ಜಾಂಬವತಿ ಕಲ್ಯಾಣ” ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಕುಸುಮಾಕರ ಆಚಾರ್ಯ ಹಳೆನೇರೆಂಕಿ, ಚಂದ್ರಶೇಖರ್ ಹೆಗ್ಡೆ ನೆಲ್ಯಾಡಿ, ಪದ್ಯಾಣ ಶಂಕರನಾರಾಯಣ ಭಟ್, ಪ್ರೊ.ದಂಬೆ ಈಶ್ವರ ಶಾಸ್ತ್ರೀ ಸಹಕರಿಸಿದರು. ಮುಮ್ಮೇಳದಲ್ಲಿ ದುಗ್ಗಪ್ಪ ಯನ್. (ಶ್ರೀಕೃಷ್ಣ), ಭಾಸ್ಕರ್ ಬಾರ್ಯ (ಬಲರಾಮ), ಕು೦ಬ್ಳೆ ಶ್ರೀಧರ್ ರಾವ್ (ನಾರದ), ಕಿಶೋರಿ ದುಗ್ಗಪ್ಪ ನಡುಗಲ್ಲು (ಜಾಂಬವ) ಸಹಕರಿಸಿದರು. ಟಿ.ರಂಗನಾಥ ರಾವ್ ಸ್ವಾಗತಿಸಿ, ವಂದಿಸಿದರು.
ಪುತ್ತೂರು ಸಮೀಪದ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಳದ ಪುನ: ಪ್ರತಿಷ್ಟಾಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ದಿನಾಂಕ 27.03.2023ರಂದು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ವತಿಯಿಂದ “ಏಕಾದಶಿ ಮಹಾತ್ಮೆ” (ರುಕ್ಮಾಂಗದ ಚರಿತ್ರೆ) ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಶ್ರೀಮತಿ ಭವ್ಯಶ್ರೀ ಕುಲ್ಕುಂದ, ವಿಜಯಾದಿತ್ಯ ಕು೦ಬ್ಳೆ , ಪದ್ಯಾಣ ಜಯರಾಮ ಭಟ್, ಮುರಳೀಧರ ಕಲ್ಲೂರಾಯ, ಅಗಸ್ತ್ಯ ಕುಲ್ಕುಂದ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಅಡಿಗ (ರುಕ್ಮಾಂಗದ), ಜಯಂತಿ ಹೆಬ್ಬಾರ್ (ಧರ್ಮಾಂಗದ), ಕಿಶೋರಿ ದುಗ್ಗಪ್ಪ ನಡುಗಲ್ಲು (ಮೋಹಿನಿ), ಪ್ರೇಮಲತಾ ರಾವ್ (ವಿಷ್ಣು), ಮನೋರಮಾ ಜಿ.ಭಟ್ (ಸಂಧ್ಯಾವಳಿ) ಸಂಚಾಲಕರಾದ ಭಾಸ್ಕರ್ ಬಾರ್ಯ ಸ್ವಾಗತಿಸಿ ವಂದಿಸಿದರು. ಬ್ರಹ್ಮಶ್ರೀ ಕೆಮ್ಮಿಂಜ ಲಕ್ಷ್ಮೀಶ ತಂತ್ರಿಯವರು ಕಲಾವಿದರನ್ನು ಗೌರವಿಸಿದರು.
ಅದೇ ದಿನ ಸಂಜೆ ಪುತ್ತೂರು ಸಮೀಪದ ಪೆರಿಗೇರಿ ಶ್ರೀ ಅಯ್ಯಪ್ಪ ಭಜನಾ ಮಂದಿರ (ರಿ) ಇದರ ಪುನ: ಪ್ರತಿಷ್ಟಾ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು, ಪುತ್ತೂರು ಇದರ ಸದಸ್ಯೆಯರಿಂದ ಮಂದಿರದ ವಠಾರದಲ್ಲಿ “ವಾಲಿಮೋಕ್ಷ” ತಾಳಮದ್ದಳೆ ಕಾರ್ಯಕ್ರಮ ನಡೆಯಿತು. ಹಿಮ್ಮೇಳದಲ್ಲಿ ಭವ್ಯಶ್ರೀ ಕುಲ್ಕುಂದ, ಪಿ.ಟಿ.ಜಯಾರಾಮ್ ಭಟ್, ಮುರಳೀಧರ ಕಲ್ಲೂರಾಯ, ಅಗಸ್ತ್ಯ ಕುಲ್ಕುಂದ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಅಡಿಗ (ವಾಲಿ), ಕಿಶೋರಿ ದುಗ್ಗಪ್ಪ ನಡುಗಲ್ಲು (ಶ್ರೀ ರಾಮ), ಹರಿಣಾಕ್ಷೀ ಜೆ. ಶೆಟ್ಟಿ (ಸುಗ್ರೀವ), ಮನೋರಮಾ ಜಿ. ಭಟ್ (ತಾರೆ) ಸಹಕರಿಸಿದರು. ಸಂಚಾಲಕ ಭಾಸ್ಕರ್ ಬಾರ್ಯ ಸ್ವಾಗತಿಸಿ ವಂದಿಸಿದರು. ಅರವಿಂದ ಗೌಡ ಕನ್ನಯ ದರ್ಬೆ ಪ್ರಾಯೋಜಿಸಿದರು.